ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Photos: ದುಬೈನಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ದೀಪಿಕಾ ದಾಸ್; ಪತ್ನಿಗೆ ದುಬಾರಿ ಉಡುಗೊರೆ ನೀಡಿದ ಪತಿ ದೀಪಕ್

ನಟಿ ದೀಪಿಕಾ ದಾಸ್‌ ಅವರು ಕನ್ನಡದ ಬಿಗ್​ ಬಾಸ್ ಶೋ, ಅದಕ್ಕಿಂತ ಮುಂಚೆ ನಾಗಿಣಿ ಸೀರಿಯಲ್​​ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಟನೆ ಜೊತೆಗೆ ದೀಪಿಕಾ ದಾಸ್​ ಅವರು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್‌ ಇರುತ್ತಾರೆ. ಟ್ರಿಪ್‌ ಮಾಡುತ್ತಾ, ಅದರ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅಂದಹಾಗೆ, ಫೆಬ್ರವರಿ 23ರಂದು ದೀಪಿಕಾ ದಾಸ್‌ಗೆ ಹುಟ್ಟುಹಬ್ಬ. ಈ ಬಾರಿ ಅವರು ತಮ್ಮ ಹುಟ್ಟುಹಬ್ಬವನ್ನು ದುಬೈನಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ವಯಸ್ಸನ್ನ ಕೂಡ ದೀಪಿಕಾ ಹೇಳಿಕೊಂಡಿದ್ದಾರೆ.

1/7

ನಟಿ ದೀಪಿಕಾ ದಾಸ್ ಇತ್ತೀಚೆಗೆ ತಮ್ಮ 30ನೇ ವರ್ಷಕ್ಕೆ ಕಾಲಿಟ್ಟಿದ್ದು, ದುಬೈನಲ್ಲಿ ಪತಿಯೊಂದಿಗೆ ಸಂಭ್ರಮದಿಂದ ಜನ್ಮದಿನ ಆಚರಿಸಿಕೊಂಡಿದ್ದಾರೆ.

2/7

2024ರ ಮಾರ್ಚ್ 1ರಂದು ಉದ್ಯಮಿ ದೀಪಕ್ ಅವರ ಜೊತೆಗೆ ಗೋವಾದಲ್ಲಿ ನಡೆದ ಅದ್ಧೂರಿ 'ಡೆಸ್ಟಿನೇಷನ್ ವೆಡ್ಡಿಂಗ್' ಮೂಲಕ ದೀಪಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

3/7

ವಿಶೇಷವಾದ ಹೂಗುಚ್ಛವನ್ನು ನೀಡಿ ಪತ್ನಿ ದೀಪಿಕಾಗೆ ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸಿದ ದೀಪಕ್ ಗೌಡ.

4/7

ದೀಪಿಕಾ ದಾಸ್‌ ಅವರು 'ದೂದ್ ಸಾಗರ್', 'ಡ್ರೀಮ್ ಗರ್ಲ್' ಹಾಗೂ 'ಪಾರು ಪಾರ್ವತಿ' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

5/7

ಸದ್ಯಕ್ಕೆ ಯಾವುದೇ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳದ ನಟಿ, ಅಭಿನಯ ಕ್ಷೇತ್ರದಿಂದ ಸ್ವಲ್ಪ ದೂರ ಉಳಿದುಕೊಂಡಿದ್ದಾರೆ.

6/7

ಮದುವೆಯ ನಂತರ ದೀಪಿಕಾ ದಾಸ್ ಸದ್ಯ ದುಬೈನಲ್ಲಿ ನೆಲೆಸಿದ್ದು, ಅಲ್ಲಿಂದಲೇ ವಿವಿಧ ದೇಶಗಳನ್ನು ಸುತ್ತುತ್ತಾ ತಮ್ಮ ಪ್ರವಾಸದ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಕೇವಲ ಪ್ರವಾಸ ಮಾತ್ರವಲ್ಲದೆ, ಪತಿ ದೀಪಕ್ ಅವರ ವ್ಯವಹಾರದಲ್ಲೂ ದೀಪಿಕಾ ಬೆಂಬಲವಾಗಿ ನಿಂತು ಉದ್ಯಮದಲ್ಲಿ ಸಾಥ್ ನೀಡುತ್ತಿದ್ದಾರೆ.

7/7

ದೀಪಿಕಾ ದಾಸ್ ಹುಟ್ಟುಹಬ್ಬವನ್ನು ಪತಿ ದೀಪಕ್ ಗೌಡ ಅದ್ಧೂರಿಯಾಗಿ ಆಚರಿಸಿದ್ದು, ಪತ್ನಿಗೆ ಗುಲಾಬಿ ಹೂಗಳ ರಾಶಿ ಮಧ್ಯೆ ಚಿನ್ನದ ಸರ ಹಾಗೂ ಬ್ರೇಸ್‌ಲೆಟ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.