Akhil Akkineni Wedding: ಗೆಳತಿ ಜೈನಾಬ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಅಖಿಲ್ ಅಕ್ಕಿನೇನಿ
ಅಖಿಲ್ ಅಕ್ಕಿನೇನಿ ತೆಲಂಗಾಣದ ಉದ್ಯಮಿ ಜುಲ್ಫಿ ರಾವ್ಜಿ ಅವರ ಪುತ್ರಿ ಜೈನಾಬ್ ರಾವ್ಜಿಯೊಂದಿಗೆ ಸಪ್ತಪದಿ ತುಳಿದಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ಈ ಜೋಡಿಯ ನಿಶ್ಚಿತಾರ್ಥ ನಡೆದಿತ್ತು. ಇದೀಗ ಅಖಿಲ್ ಹಾಗೂ ಜೈನಾಬ್ ರೌಜಿ ಅವರ ವಿವಾಹವು ಕುಟುಂಬ ಸದಸ್ಯರು ಮತ್ತು ಕೆಲವೇ ಆಪ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನಡೆದಿದೆ.
Akhil Akkineni -
ನಟ ಅಖಿಲ್ ಅಕ್ಕಿನೇನಿ ತಮ್ಮ ಗೆಳತಿ ಜೈನಾಬ್ ರಾವ್ಜಿ ಜತೆ ಸಪ್ತಪದಿ ತುಳಿದಿದ್ದು, ಈ ಜೋಡಿಯ ಮದುವೆ ಸಮಾರಂಭದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹೈದರಾಬಾದ್ನಲ್ಲಿ ಇವರ ವಿವಾಹ ನಡೆದಿದ್ದು,ಸ್ನೇಹಿತರು ಹಾಗೂ ಕುಟುಂಬದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ಜೈನಾಬ್ ರಾವ್ಜಿ ಜತೆಗೆ ಅಖಿಲ್ ಅಕ್ಕಿನೇನಿ ಮದುವೆ ನೆರವೇರಿದೆ. ಅಖಿಲ್ ಮತ್ತು ಜೈನಾಬ್ ಮಂದಹಾಸ ಬೀರುತ್ತಾ ಫೋಟೊಕ್ಕೆ ಪೋಸ್ ನೀಡಿದ್ದಾರೆ.
ಮತ್ತೊಂದು ಫೋಟೊದಲ್ಲಿ ನಟ ನಾಗಾರ್ಜುನ ಅವರು ಮಗ ಅಖಿಲ್ ಜತೆಗೆ ಕುಳಿತು ವಿವಾಹ ವಿಧಿಗಳು ನಡೆಸುತ್ತಿರುವ ದೃಶ್ಯವನ್ನು ಕಾಣಬಹುದು.
ಜೈನಾನಬ್ ಪಾಸ್ಟೆಲ್ ಐವೊರಿ ಬಣ್ಣದ ಸೀರೆ ಹಾಗೂ ಗೋಲ್ಡ್ ಬ್ಲೌಸ್ನಲ್ಲಿ ಕ್ಯೂಟ್ ಆಗಿ ಕಂಡು ಬಂದಿದ್ದಾರೆ. ಅಖಿಲ್ ಸರಳ ಮತ್ತು ಸಾಂಪ್ರದಾಯಿಕ ಪಂಚೆಯನ್ನು ಆರಿಸಿಕೊಂಡಿದ್ದಾರೆ. ಅವರ ವಿವಾಹದ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ವಿವಾಹ ಸಮಾರಂಭದಲ್ಲಿ ಅಖಿಲ್ ಸಹೋದರ ನಾಗ ಚೈತನ್ಯ ಹಾಗೂ ಶೋಭಿತಾ ಧುಲೀಪಾಲಾ ಭಾಗವಹಿಸಿದ್ದರು. ಜತೆಗೆ ಚಿರಂಜೀವಿ, ರಾಮ್ ಚರಣ್, ಪ್ರಶಾಂತ್ ನೀಲ್ ಮೊದಲಾದವರು ಕೂಡ ಸಮಾರಂಭಕ್ಕೆ ಆಗಮಿಸಿದ್ದರು. ಚಿತ್ರರಂಗದ ಗಣ್ಯರು ಹಾಗೂ ಕುಟುಂಬಸ್ಥರಿಗೆ ಅದ್ಧೂರಿ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿದೆ. ಜೂ. 8ರಂದು ಹೈದರಾಬಾದ್ನಲ್ಲಿರುವ ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಆರತಕ್ಷತೆ ನಡೆಯಲಿದೆ.