Trisha: ವರ್ಷ 42 ಆದ್ರೂ ಈ ಸ್ಟಾರ್ ನಟನಿಗೆ ತ್ರಿಷಾ ಕೃಷ್ಣನ್ ನಾಯಕಿ
ಹಾಟ್ ಬ್ಯೂಟಿ ತ್ರಿಷಾ ಇಂದಿಗೂ ಚಿತ್ರರಂಗದಲ್ಲಿ ಬೇಡುಕೆ ಉಳಿಸಿ.ಕೊಂಡಿದ್ದಾರೆ. ತನ್ನ ಸೌಂದರ್ಯ ಮತ್ತು ನಟನೆಯೊಂದಿಗೆ ಸ್ಟಾರ್ ನಾಯಕಿಯಾಗಿ ಮಿಂಚುತ್ತಿದ್ದಾರೆ. ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ತ್ರಿಷಾ ನಾಯಕಿಯಾಗಿರುವ ʼಥಗ್ ಲೈಫ್ʼ ತಮಿಳು ಚಿತ್ರ ಕುತೂಹಲ ಕೆರಳಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಆದರೆ ಅದೇ ಚಿತ್ರದಲ್ಲಿ ತಾಯಿ ಪಾತ್ರ ನಿರ್ವಹಿಸುತ್ತಿರುವ ನಟಿ ಅಭಿರಾಮಿ, ತೃಷಾಗಿಂತ ಚಿಕ್ಕವರು ಎಂಬ ವಿಚಾರ ಸಿನಿ ಪ್ರಿಯರಿಗೆ ಆಶ್ಚರ್ಯ ಉಂಟು ಮಾಡಿದೆ.

Trisha


ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತ್ರಿಷಾ ಈ 42ನೇ ವಯಸ್ಸಿನಲ್ಲಿ ಕೂಡ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಅಜಿತ್ ಜತೆ ಕಾಣಿಸಿಕೊಂಡ ತಮಿಳಿನ ‘ವಿದಮುಯರ್ಚಿ’ ಮತ್ತು ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರ ರಿಲೀಸ್ ಆಗಿ ಗಮನ ಸೆಳೆದಿದೆ.

ಸಾಮಾನ್ಯವಾಗಿ ನಟಿಯರು ನಾಯಕಿಯಾಗಿ ಮಿಂಚಿ ನಂತರ ಅಕ್ಕ, ಅಮ್ಮ ಪಾತ್ರಗಳಿಗೆ ಆಯ್ಕೆ ಆಗುವುದು ಸಾಮಾನ್ಯ. ಆದರೆ ಈ ಪಟ್ಟಿಯಲ್ಲಿಲ್ಲದ ನಟಿ ಅಂದ್ರೆ ತ್ರಿಷಾ. ʼಥಗ್ ಲೈಫ್ʼ ಚಿತ್ರದಲ್ಲಿ ನಟಿ ತ್ರಿಷಾ ಕಮಲ್ ಹಾಸನ್ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅದೇ ಚಿತ್ರದಲ್ಲಿ ತಾಯಿ ಪಾತ್ರವಹಿಸುತ್ತಿರುವ ನಟಿ ಅಭಿರಾಮಿ, ತ್ರಿಷಾಗಿಂತ ಒಂದು ತಿಂಗಳು ಚಿಕ್ಕವರು ಎನ್ನುವುದು ವಿಶೇಷ.

ತೃಷಾ ಮತ್ತು ಅಭಿರಾಮಿ ಜನಿಸಿದ್ದು 1983ರಲ್ಲಿ. ಮೇಯಲ್ಲಿ ತೃಷಾ ಜನಿಸಿದರೆ, ಅಭಿರಾಮಿ ಹುಟ್ಟಿದ್ದು ಜುಲೈಯಲ್ಲಿ. ಅಂದರೆ ತ್ರಿಷಾಗಿಂತ ಅಭಿರಾಮಿ 2 ತಿಂಗಳು ಚಿಕ್ಕವರು. ಆದರೆ ಚಿತ್ರರಂಗದಲ್ಲಿ ತ್ರಿಷಾ ಇನ್ನೂ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅಭಿರಾಮಿ ತಾಯಿಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ʼಜೋಡಿ’ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಮಿಂಚಿದ್ದ ನಟಿ ತ್ರಿಷಾ ಆ ನಂತರ ಸೂರ್ಯ ನಾಯಕನಾಗಿ ನಟಿಸಿದ 'ಮೌನಂ ಪೆಸಿ ಯಾಡೆ' ಚಿತ್ರದಲ್ಲಿ ಕಾಣಿಸಿಕೊಂಡರು. ಅದಾದ ನಂತರ ‘ನೀ ಮನಸು ನಕ್ ಸನಾ’ ಎಂಬ ದ್ವಿಭಾಷಾ ಸಿನಿಮಾ ಮೂಲಕ ಟಾಲಿವುಡ್ಗೆ ಎಂಟ್ರಿ ನೀಡಿದರು. ಬಳಿಕ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದರು.

ರಾಜ್ ಕಮಲ್ ಪ್ರೊಡಕ್ಷನ್ಸ್ ನಿರ್ಮಿಸಿರುವ ʼಥಗ್ ಲೈಪ್ʼ ಚಿತ್ರವನ್ನು ಮಣಿರತ್ನಂ ನಿರ್ದೇಶಿಸುತ್ತಿದ್ದು, ಕಮಲ್ ಹಾಸನ್, ತ್ರಿಷಾ, ಅಭಿರಾಮಿ ಜತೆಗೆ ಸಿಂಬು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜೂನ್ 5ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಜತೆಗೆ ಪಂಕಜ್ ತ್ರಿಪಾಠಿ, ಸನ್ಯಾ ಮಲ್ಹೋತ್ರಾ, ನಾಸರ್, ಅಲಿ ಫಜಲ್, ಐಶ್ವರ್ಯ ಲಕ್ಷ್ಮೀ ಘಟಾನುಘಟಿಗಳು ಚಿತ್ರದ ಭಾಗವಾಗಿದ್ದಾರೆ.