ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhavya Gowda: ಕರ್ಣ ಧಾರಾವಾಹಿ ಬಗ್ಗೆ ವಿಶೇಷ ಪೋಸ್ಟ್ ಹಂಚಿಕೊಂಡ ಭವ್ಯಾ ಗೌಡ

ಭವ್ಯಾ ನಾಯಕಿಯಾಗಿ ನಟಿಸುತ್ತಿರುವ ಕರ್ಣ ಧಾರಾವಾಹಿ ಮೊದಲ ವಾರವೇ ದಾಖಲೆ ಬರೆದಿದೆ. ಇದರ ಸಂಭ್ರಮವನ್ನು ಭವ್ಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾದಲ್ಲಿ ಕೆಲ ಫೋಟೋ ಅಪ್ಲೋಡ್ ಮಾಡಿರುವ ಭವ್ಯಾ, ‘ನೀವೆಲ್ಲರೂ ಮೆಚ್ಚಿರುವ ನಿಧಿ ಕಡೆಯಿಂದ ಒಂದು ಲವ್’ ಎಂದು ಬರೆದುಕೊಂಡಿದ್ದಾರೆ.

Bhavya Gowda
1/6

ಭವ್ಯಾ ಗೌಡ ಕಳೆದ ಕೆಲವು ವಾರಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ಯಾವುದೇ ರಿಯಾಲಿಟಿ ಶೋ ಅಥವಾ ಹೆಚ್ಚಿನ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿರಲಿಲ್ಲ. ವಿದೇಶಿ ಪ್ರವಾಸ ಮಾಡಿ ಸೈಲೆಂಟ್ ಆಗಿದ್ದರು. ಬಳಿಕ ಝೀ ಕನ್ನಡ ವಾಹಿನಿಯಲ್ಲಿ ಕರ್ಣ ಎಂಬ ಹೊಸ ಧಾರಾವಾಹಿಗೆ ನಾಯಕಿ ನಟಿಯಾಗಿ ಎಂಟ್ರಿ ಆದರು.

2/6

ಇದೀಗ ಭವ್ಯಾ ನಾಯಕಿಯಾಗಿ ನಟಿಸುತ್ತಿರುವ ಕರ್ಣ ಧಾರಾವಾಹಿ ಮೊದಲ ವಾರವೇ ದಾಖಲೆ ಬರೆದಿದೆ. ಇದರ ಸಂಭ್ರಮವನ್ನು ಭವ್ಯಾ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್​ಸ್ಟಾದಲ್ಲಿ ಕೆಲ ಫೋಟೋ ಅಪ್ಲೋಡ್ ಮಾಡಿರುವ ಭವ್ಯಾ, ‘ನೀವೆಲ್ಲರೂ ಮೆಚ್ಚಿರುವ ನಿಧಿ ಕಡೆಯಿಂದ ಒಂದು ಲವ್’ ಎಂದು ಬರೆದುಕೊಂಡಿದ್ದಾರೆ.

3/6

ಭವ್ಯಾ ಅವರು ಇನ್​ಸ್ಟಾದಲ್ಲಿ ಧಾರಾವಾಹಿ ಸೆಟ್​​ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಭವ್ಯಾ ಅವರು ಡಾಕ್ಟರ್​ ಲುಕ್​ನಲ್ಲಿ ಇದ್ದಾರೆ. ರೋಗಿಗೆ ಇಂಜೆಕ್ಷನ್ ಕೊಡಲು ತಯಾರಾಗುತ್ತಿರುವ ರೀತಿಯಲ್ಲಿ ಡ್ರೆಸ್ ಮಾಡಿ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ.

4/6

ಕರ್ಣ ಧಾರಾವಾಹಿಯ ಲಾಂಚ್ ಎಪಿಸೋಡ್​ಗೆ ಬರೋಬ್ಬರಿ 9.1 ಟಿವಿಆರ್‌ ಪಡೆದಿದೆ. ಆ ಮೂಲಕ ಮೊದಲ ಎಪಿಸೋಡ್‌ನಲ್ಲೇ ಕರ್ಣ ಸೀರಿಯಲ್‌ ದಾಖಲೆ ಬರೆದಿದೆ. ಅಷ್ಟೇ ಅಲ್ಲದೆ ಎರಡನೇ ಎಪಿಸೋಡ್‌ಗೆ (ಶುಕ್ರವಾರ) 8.7 ಟಿವಿಆರ್‌ ಲಭಿಸಿದೆ. ಒಟ್ಟಾರೆಯಾಗಿ ಕರ್ನಾಟಕದಲ್ಲಿ ಕರ್ಣ ಧಾರಾವಾಹಿ ನಂಬರ್ 1 ಪಟ್ಟಕ್ಕೇರಿದೆ.

5/6

ಅರ್ಬನ್‌ + ರೂರಲ್‌ ಮಾರ್ಕೆಟ್‌ನಲ್ಲಿ ಲಾಂಚ್‌ ವೀಕ್‌ 10.2 ಟಿವಿಆರ್‌ ಬಂದಿದೆ. ರೂರಲ್‌ನಲ್ಲಿ 11.5 ಟಿವಿಆರ್‌, ಅರ್ಬನ್‌ನಲ್ಲಿ 8.9 ಟಿವಿಆರ್‌ ದಾಖಲಿಸಿದೆ. ಮೊದಲೆರಡು ಎಪಿಸೋಡ್‌ಗಳಲ್ಲೇ ಡಬಲ್‌ ಡಿಜಿಟ್‌ ಟಿವಿಆರ್‌ ಪಡೆದು ಹೊಸ ದಾಖಲೆ ಕರ್ಣ ಧಾರಾವಾಹಿ ಬರೆದಿದೆ.

6/6

ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಕೂಡ ಕಾಣಿಸಿಕೊಂಡಿದ್ದಾರೆ. ಕರ್ಣ ತ್ರಿಕೋನ ಪ್ರೇಮಕಥೆಯ ಧಾರಾವಾಹಿ ಆಗಿದೆ. ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಿದ್ದ ವರಲಕ್ಷ್ಮೀ ಶ್ರೀನಿವಾಸ್ ಮತ್ತು ಶ್ಯಾಮ್ ಸಿಮ್ರನ್‌ ನಟಿಸುತ್ತಿದ್ದಾರೆ.