Bhavya Gowda: ಮಾಲ್ನಲ್ಲಿ ಕೆಂಪು ಗುಲಾಬಿ ಹಿಡಿದು ಕಾಯುತ್ತಿರುವ ಭವ್ಯಾ ಗೌಡ
Bigg Boss Kannada Bhavya Gowda: ಭವ್ಯಾ ಅವರ ಹೊಸ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಾಲ್ ಒಂದಕ್ಕೆ ಭವ್ಯಾ ಭೇಟಿ ನೀಡಿದ್ದಾರೆ. ಇಲ್ಲಿ ಇವರು ಕೈಯಲ್ಲಿ ಕೆಂಪು ಗುಲಾಬಿಯನ್ನು ಹಿಡಿದುಕೊಂಡು ಯಾರಿಗೋ ಕಾಯುತ್ತಿರುವಂತಿದೆ.
ಭವ್ಯಾ ಗೌಡ ಬಿಗ್ ಬಾಸ್ ಮುಗಿದ ಬಳಿಕ ಯಾವುದೇ ರಿಯಾಲಿಟಿ ಶೋ ಅಥವಾ ಹೆಚ್ಚಿನ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿರಲಿಲ್ಲ. ವಿದೇಶಿ ಪ್ರವಾಸ ಮಾಡಿ ಸೈಲೆಂಟ್ ಆಗಿದ್ದರು. ಬಳಿಕ ಝೀ ಕನ್ನಡ ವಾಹಿನಿಯಲ್ಲಿ ಕರ್ಣ ಎಂಬ ಹೊಸ ಧಾರಾವಾಹಿಗೆ ನಾಯಕಿ ನಟಿಯಾಗಿ ಎಂಟ್ರಿ ಆದರು. ಇದು ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿತು.
ಕರ್ಣ ಧಾರಾವಾಹಿಯಲ್ಲಿ ಭವ್ಯಾ ಗೌಡ ಮುದ್ದ-ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಭವ್ಯಾ ಅವರನ್ನು ನಿಧಿ ಪಾತ್ರದಲ್ಲಿ ಇಷ್ಟಪಡುತ್ತಿದ್ದಾರೆ. ಇದರ ಮಧ್ಯೆ ಈಗ ಭವ್ಯಾ ಎಲ್ಲೇ ಹೋದರು ಅಂದದ ಫೋಟೋ ತೆಗೆಸಿಕೊಂಡು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತ ಇರುತ್ತಾರೆ.
ಇದೀಗ ಭವ್ಯಾ ಅವರ ಹೊಸ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಾಲ್ ಒಂದಕ್ಕೆ ಭವ್ಯಾ ಭೇಟಿ ನೀಡಿದ್ದಾರೆ. ಇಲ್ಲಿ ಇವರು ಕೈಯಲ್ಲಿ ಕೆಂಪು ಗುಲಾಬಿಯನ್ನು ಹಿಡಿದುಕೊಂಡು ಯಾರಿಗೋ ಕಾಯುತ್ತಿರುವಂತಿದೆ.
ಇತ್ತೀಚೆಗಷ್ಟೆ ಭವ್ಯಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕಿವಿ ಚುಚ್ಚಿಸಿಕೊಳ್ಳುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಇದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬಿಗ್ ಬಾಸ್ ಸೀಸನ್ 11ರ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಭವ್ಯಾ ಗೌಡ ಟಾಪ್ ನಾಲ್ಕನೇ ಸ್ಥಾನ ಗಳಿಸಿದ್ದರು. ಈ ಶೋನಿಂದ ಭವ್ಯಾ ಫ್ಯಾನ್ ಪೇಜ್‌ಗಳ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಗೀತಾ ಸೀರಿಯಲ್‌ನಲ್ಲಿ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಭವ್ಯಾ ಗೌಡ ಅಭಿನಯಿಸಿ ಕರ್ನಾಟಕ ಜನತೆಗೆ ಹತ್ತಿರವಾದವರು.