ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bollywood Movie: ಓಟಿಟಿಯಲ್ಲಿ ಲಭ್ಯವಿದ್ದರೂ ಕುಟುಂಬ ಸಮೇತ ವೀಕ್ಷಿಸಲು ಸೂಕ್ತವಲ್ಲದ ಬಾಲಿವುಡ್ ಸಿನಿಮಾಗಳಿವು

ಬಾಲಿವುಡ್‌ನಲ್ಲಿ ವಿಭಿನ್ನ ಶೈಲಿಯ ಸಿನಿಮಾಗಳು ಪ್ರೇಕ್ಷಕರ ಮನ ಗೆದ್ದಿವೆ. ಹಾರರ್‌, ಕಾಮಿಡಿ, ಕ್ರೈಮ್‌ ಥ್ರಿಲ್ಲರ್‌, ರೊಮ್ಯಾಂಟಿಕ್‌ ಸೇರಿದಂತೆ ವಿವಿಧ ಜಾನರ್‌ ಚಿತ್ರಗಳು ಈಗಾಗಲೇ ಓಟಿಟಿಯಲ್ಲಿ ಬಿಡುಗಡೆಯಾಗಿವೆ. ಆದರೆ ಬಾಲಿವುಡ್‌ನ ಹಲವಾರು ಚಿತ್ರಗಳು ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದ್ದರೂ ಕುಟುಂಬದೊಂದಿಗೆ ನೋಡಲು ಸೂಕ್ತವಲ್ಲ. ಈ ಕುರಿತ ಟಾಪ್‌ 7 ಸಿನಿ ಮಾಗಳ ಮಾಹಿತಿ ಇಲ್ಲಿದೆ.

Bold Bollywood Movies On OTT
1/7

ಜಿಸ್ಮ್‌ (Jism)

2003ರಲ್ಲಿ ಬಿಡುಗಡೆಯಾದ ʼಜಿಸ್ಮ್‌ʼ ಕಾಮ ಪ್ರಚೋದಕ ಸಿನಿಮಾವಾಗಿದ್ದು ಬಿಡುಗಡೆ ಸಂದರ್ಭದಲ್ಲಿ ವ್ಯಾಪಕ ವಿರೋಧ ಉಂಟಾಗಿತ್ತು. ಫ್ಯಾಮಿಲಿಯೊಂದಿಗೆ ನೋಡಲು ಸೂಕ್ತವಲ್ಲದ ಸಿನಿಮಾ ಇದಾಗಿದ್ದು, ಫಿಶ್ ಐ ನೆಟ್‌ವರ್ಕ್ ಲಿಮಿಟೆಡ್ ಮತ್ತು ಶ್ರೇಯಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಅಮಿತ್ ಸಕ್ಸೇನಾ ಚಿತ್ರ ವನ್ನು ನಿರ್ದೇಶಿಸಿದ್ದಾರೆ. ಬಿಪಾಶಾ ಮತ್ತು ಜಾನ್ ಅಬ್ರಹಾಂ ನಟಿಸಿದ್ದಾರೆ. ಚಿತ್ರಕ್ಕೆ ಎಂ.ಎಂ.ಕ್ರೀಮ್ ಸಂಗೀತ ನೀಡಿ ದ್ದಾರೆ. ಪ್ರೈಮ್ ವಿಡಿಯೊದಲ್ಲಿ ವೀಕ್ಷಿಸಲು ಈ ಸಿನಿಮಾ‌ ಲಭ್ಯ.

2/7

ಬಿ.ಎ. ಪಾಸ್ (B.A. Pass)

ಬಿ.ಎ.ಪಾಸ್ ಸಿನಿಮಾವನ್ನು ಅಜಯ್ ಬಹ್ಲ್ ನಿರ್ದೇಶಿಸಿದ್ದು, ನರೇಂದ್ರ ಸಿಂಗ್ ನಿರ್ಮಿಸಿದ್ದಾರೆ. ಈ ಕಥೆಯು ದ್ರೋಹದ ಜಾಲಕ್ಕೆ ಸಿಲುಕಿದ ಯುವಕನ ಸುತ್ತ ಕೇಂದ್ರೀಕೃತವಾಗಿದೆ. ಇದರಲ್ಲಿ ಶಿಲ್ಪಾ ಶುಕ್ಲಾ, ಶಾದಾಬ್ ಕಮಲ್ ಮತ್ತು ರಾಜೇಶ್ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಯುಟ್ಯೂಬ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯ.

3/7

ಮರ್ಡರ್ (Murder)

ಅನುರಾಗ್ ಬಸು ನಿರ್ದೇಶನದ ಈ ಥ್ರಿಲ್ಲರ್‌ ಚಿತ್ರವನ್ನು ಮುಖೇಶ್ ಭಟ್ ನಿರ್ಮಿಸಿದ್ದಾರೆ. ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್ ಮತ್ತು ಅಶ್ಮಿತ್ ಪಟೇಲ್ ಮತ್ತಿತರರು ನಟಿಸಿರುವ ಈ ಚಿತ್ರವು ಹಲವು ರೊಮ್ಯಾಂಟಿಕ್ ದೃಶ್ಯವನ್ನು ಹೊಂದಿದೆ.

4/7

ಹಂಟರ್‌ (Hunterr Movie)

ಹರ್ಷವರ್ಧನ್ ಕುಲಕರ್ಣಿ ನಿರ್ದೇಶಿಸಿದ ಕಾಮಿಡಿ ಆ್ಯಕ್ಷನ್ ಚಿತ್ರ ಇದಾಗಿದ್ದು ಡೆವೊನ್ ಸಾವಾ, ಕ್ಯಾಮಿಲ್ಲೆ ಸುಲ್ಲಿವನ್, ಸಮ್ಮರ್ ಎಚ್. ಹೋವೆಲ್ ಮತ್ತು ನಿಕ್ ಸ್ಟಾಲ್ ನಟಿಸಿದ್ದಾರೆ. ಚಿತ್ರವು 2020ರ ಡಿಸೆಂಬರ್ 18ರಂದು ಬಿಡುಗಡೆಯಾಗಿದ್ದು ಪ್ರೈಮ್ ವೀಡಿಯೋದಲ್ಲಿ ವೀಕ್ಷಿಸಲು ಈ ಸಿನಿಮಾ ಲಭ್ಯ.

5/7

ಫೈರ್ (Fire)

ದೀಪಾ ಮೆಹ್ತಾ ನಿರ್ದೇಶನದ ಈ ಚಿತ್ರದಲ್ಲಿ ಶಬಾನಾ ಆಜ್ಮಿ ಮತ್ತು ನಂದಿತಾ ದಾಸ್ ನಟಿಸಿದ್ದಾರೆ. ಇಬ್ಬರು ಮಹಿಳೆಯರ ನಡುವಿನ ಲೈಂಗಿಕ ಸಂಬಂಧವನ್ನು ತೋರಿಸುವ ಈ ಸಿನಿಮಾದಲ್ಲಿ ಹಲವು ಕಾಮ ಪ್ರಚೋದಕ ದೃಶ್ಯಗಳಿವೆ.

6/7

ದಿ ಡರ್ಟಿ ಪಿಕ್ಚರ್ (The Dirty Picture)

ಬಾಲಿವುಡ್‌ ಸೂಪರ್ ಹಿಟ್ ಬಯೋಪಿಕ್ ಸಿನಿಮಾ 'ದಿ ಡರ್ಟಿ ಪಿಕ್ಚರ್‌ʼ ಖ್ಯಾತ ನಟಿ ಸಿಲ್ಕ್ ಸ್ಮಿತಾ ಜೀವನ ಕಥೆಯನ್ನು ಆಧರಿಸಿದೆ. ದುರಂತ ಅಂತ್ಯ ಕಂಡಿದ್ದ ನಟಿ ಸಿಲ್ಕ್ ಸ್ಮಿತಾ ಜೀವನದ ವಿವಿಧ ಮಜಲುಗಳನ್ನು ಸಿನಿಮಾದಲ್ಲಿ ತಿಳಿಸಲಾಗಿದೆ.‌ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ವಿದ್ಯಾ ಬಾಲನ್ ನಟಿಸಿದ್ದಾರೆ.

7/7

ಕಾಮಸೂತ್ರ (Kama Sutra)

ಮೀರಾ ನಾಯರ್ ನಿರ್ದೇಶನದ ಈ ಚಿತ್ರದಲ್ಲಿ ರೇಖಾ, ಇಂದಿರಾ ವರ್ಮಾ, ನವೀನ್ ಆಂಡ್ರೂಸ್ ಮತ್ತು ಸರಿತಾ ಚೌಧರಿ ನಟಿಸಿದ್ದಾರೆ. ಲೈಂಗಿಕತೆ ಕುರಿತಾದ ದೃಶ್ಯಗಳು ಈ ಸಿನಿಮಾದಲ್ಲಿ ಇದ್ದು, ಒಬ್ಬರ ದೇಹ, ಮನಸ್ಸು ಮತ್ತು ಆತ್ಮವನ್ನು ಹೇಗೆ ಪರಿವರ್ತಿಸಲಾಗಗಗುತ್ತದೆ ಎಂಬುದನ್ನು ತಿಳಿಸಲಾಗಿದೆ. ಪ್ರೈಮ್ ವಿಡಿಯೊದಲ್ಲಿ ಈ ಸಿನಿಮಾ ಇದೆ.