Bhumi Pednekar: ಬಾಲಿವುಡ್ನ ಸಿಂಪಲ್ ಬೆಡಗಿ ಭೂಮಿಗೆ 36ನೇ ಹುಟ್ಟುಹಬ್ಬದ ಸಂಭ್ರಮ; ಇಲ್ಲಿದೆ ಸೆಲೆಬ್ರೇಷನ್ ಫೋಟೊ
ಅಕ್ಷಯ್ ಕುಮಾರ್ ಅವರೊಂದಿಗೆ ʼಟಾಯ್ಲೆಟ್ ಏಕ್ ಪ್ರೇಮ್ ಕಥಾʼ ಬಾಲಿವುಡ್ ಚಿತ್ರದ ಮೂಲಕ ಮಿಂಚಿದ್ದ ನಟಿ ಭೂಮಿ ಪೆಡ್ನೇಕರ್ (Bhumi Pednekar) ಶುಕ್ರವಾರ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹುಟ್ಟುಹಬ್ಬ ಆಚರಣೆಯ ಫೋಟೊಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಾದ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.



ಅಕ್ಷಯ್ ಕುಮಾರ್ ಅವರೊಂದಿಗೆ ʼಟಾಯ್ಲೆಟ್ ಏಕ್ ಪ್ರೇಮ್ ಕಥಾʼ ಚಿತ್ರದ ಮೂಲಕ ಮಿಂಚಿದ್ದ ಬಾಲಿವುಡ್ ಬೆಡಗಿ ಭೂಮಿ ಪೆಡ್ನೇಕರ್ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಮಾರಂಭದಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಪಾಲ್ಗೊಂಡಿದ್ದರು.

ಹುಟ್ಟುಹಬ್ಬದ ಚಿತ್ರಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ನಟಿ ಭೂಮಿ ಪೆಡ್ನೇಕರ್ ತಮ್ಮ ಸರಳ ಸೊಬಗನ್ನು ಪ್ರದರ್ಶಿಸಿದ್ದಾರೆ. ತಮ್ಮ ವಿಶೇಷ ಸಂದರ್ಭದಲ್ಲಿ ಖುಷಿಯ ನಗುವಿನೊಂದಿಗೆ ಹೃದಯಸ್ಪರ್ಶಿ ಕ್ಷಣಗಳ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ.

ವಿಶೇಷ ದಿನದ ವಿಶೇಷ ಕ್ಷಣಗಳನ್ನು ಸೆರೆ ಹಿಡಿದಿರುವ ಚಿತ್ರದಲ್ಲಿ ಭೂಮಿ ಗುಲಾಬಿ ಬಣ್ಣದ ಉಡುಪಿನಲ್ಲಿ ಕಂಗೊಳಿಸಿದ್ದಾರೆ. ಡಾರ್ಕ್ ಚಾಕೊಲೇಟ್ ಕೇಕ್ ಸಮೀಪದಲ್ಲಿ ಫೋಟೊಗಳಿಗೆ ಪೋಸ್ ನೀಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಅವರು ತಮ್ಮ ತಾಯಿಯ ಆಶೀರ್ವಾದ ಪಡೆಯುತ್ತಿರುವುದನ್ನು ಕಾಣಬಹುದು.

ಮತ್ತೊಂದು ಚಿತ್ರದಲ್ಲಿ ನಟಿ ತಮ್ಮ ಹುಟ್ಟುಹಬ್ಬದ ಕೇಕ್ ಅನ್ನು ಸವಿಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತಮ್ಮ ಹೊಸ ಸಿನಿಮಾದ ಬಗ್ಗೆ ಸುಳಿವು ನೀಡಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದವರಿಗೆ ಧನ್ಯವಾದ ಹೇಳಿದ ನಟಿ, "ಧನ್ಯ! ಒಂದು ವರ್ಷ ದೊಡ್ಡವಳಾದೆ ಮತ್ತು ನಾನು ಅದನ್ನು ತುಂಬಾ ಇಷ್ಟಪಟ್ಟೆ. ನಿಮ್ಮೆಲ್ಲರ ಶುಭಾಶಯ ಮತ್ತು ಪ್ರೀತಿಗೆ ಧನ್ಯವಾದಗಳುʼʼ ಎಂದಿದ್ದಾರೆ.

ಭೂಮಿ ಪೆಡ್ನೇಕರ್ ಕೊನೆಯ ಬಾರಿಗೆ ನೆಟ್ಫ್ಲಿಕ್ಸ್ನ ʼದಿ ರಾಯಲ್ಸ್ʼ ಸೀರಿಸ್ನಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಅವರು ಪ್ರೈಮ್ ವಿಡಿಯೋಗಾಗಿ ವೆಬ್ ಸರಣಿಯಾದ ʼದಾಲ್ಡಾಲ್ʼನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.