Deepavali Jewel Fashion 2025: ದೀಪಾವಳಿ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಆಭರಣಗಳು
Deepavali Festive Season: ದೀಪಾವಳಿ ಹಬ್ಬದ ಸೀಸನ್‌ನಲ್ಲಿ ವೈವಿಧ್ಯಮಯ ಆಭರಣಗಳು ಜ್ಯುವೆಲರಿ ಲೋಕಕ್ಕೆ ಕಾಲಿಟ್ಟಿವೆ. ಫೆಸ್ಟೀವ್ ಸೀಸನ್‌ನಲ್ಲಿ ನಾನಾ ಶೈಲಿಯ ಚಿನ್ನದ ಬಿಗ್ಚೋಕರ್ ನೆಕ್ಲೇಸ್‌ಗಳು, ಹಾರಗಳು ಹಾಗೂ ಗ್ರ್ಯಾಂಡ್ ಲುಕ್ ನೀಡುವ ಲೈಟ್‌ವೇಟ್ ಲೇಯರ್ ಜ್ಯುವೆಲರಿಗಳು ಟ್ರೆಂಡಿಯಾಗಿವೆ. ಯಾವ್ಯಾವ ಬಗೆಯವು ಬಂದಿವೆ? ಈ ಎಲ್ಲದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವರದಿ.
ದೀಪಾವಳಿ ಹಬ್ಬದ ಸೀಸನ್‌ನಲ್ಲಿ ನಾನಾ ಬಗೆಯ ಆಭರಣಗಳು ಜ್ಯುವೆಲರಿ ಲೋಕಕ್ಕೆ ಕಾಲಿಟ್ಟಿದ್ದು, ಗ್ರಾಹಕರನ್ನು ಬರಸೆಳೆದಿವೆ.
ಫೆಸ್ಟೀವ್ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ದುಬಾರಿ ಆಭರಣಗಳು
ಬೆಳಕಿನ ಹಬ್ಬ ದೀಪಾವಳಿಯಲ್ಲಿ ಬಂಗಾರದ ಆಭರಣಗಳು ಮಾತ್ರವಲ್ಲ, ವಜ್ರ ಪ್ಲಾಟಿನಂ ಆಭರಣಗಳು ಅತಿ ಹೆಚ್ಚು ಬಿಕರಿಗೊಳ್ಳುತ್ತವೆ. ಬೆಲೆ ಹೆಚ್ಚಾದರೂ ಕೂಡ ಹಬ್ಬದ ಸಮಯದಲ್ಲಿ ಆಭರಣ ಕೊಳ್ಳುಗರು ಹೆಚ್ಚಾಗಿರುವುದರಿಂದ ಲೆಕ್ಕವಿಲ್ಲದಷ್ಟು ಹೊಸ ವಿನ್ಯಾಸದ ಆಭರಣಗಳು ಮಾರುಕಟ್ಟೆಗೆ ಆಗಮಿಸುತ್ತವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಣಾ. ಅವರ ಪ್ರಕಾರ, ಫೆಸ್ಟೀವ್ ಸೀಸನ್‌ನಲ್ಲಿ ನಾನಾ ಶೈಲಿಯ ಚಿನ್ನದ ಬಿಗ್ಚೋಕರ್ ನೆಕ್ಲೇಸ್‌ಗಳು, ಹಾರಗಳು ಹಾಗೂ ಗ್ರ್ಯಾಂಡ್ ಲುಕ್ ನೀಡುವ ಲೈಟ್‌ವೇಟ್ ಲೇಯರ್ ಜ್ಯುವೆಲರಿಗಳು ಟ್ರೆಂಡಿಯಾಗಿವೆ. ಅಲ್ಲದೇ, ವಜ್ರದ ಸಿಂಪಲ್ ನೆಕ್ಲೇಸ್, ಸ್ಟಡ್ಸ್, ಪೆಂಡೆಂಟ್ಸ್ ಕೊಳ್ಳುವವರೂ ಹೆಚ್ಚಾಗಿದ್ದಾರೆ. ಇನ್ನು, ಪ್ಲಾಟಿನಂ ಆಭರಣಗಳು, ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರನ್ನು ಸೆಳೆಯುತ್ತಿವೆ ಎನ್ನುತ್ತಾರೆ.
ಚಿನ್ನದ ಆಭರಣಗಳಿಗೆ ಕುಂದದ ಡಿಮ್ಯಾಂಡ್
ದೀಪಾವಳಿಯಲ್ಲಿ ಬಹುತೇಕರು ಎಥ್ನಿಕ್ ಲುಕ್ ಇರುವಂತಹ ಉಡುಪುಗಳನ್ನೇ ಧರಿಸುವುದರಿಂದ ಬಂಗಾರದ ಆಭರಣ ಧರಿಸುವವರು ಹೆಚ್ಚು. ಇದು ಗ್ರ್ಯಾಂಡ್ ಲುಕ್ ನೀಡುವುದರಿಂದ, ಈ ಆಭರಣಗಳಿಗೆ ಎಂದಿಗೂ ಬೇಡಿಕೆ ಕುಂದಿಲ್ಲ! ಎನ್ನುತ್ತಾರೆ ಜ್ಯುವೆಲರಿ ಮಾರಾಟಗಾರರು.
ವಜ್ರದ ಟ್ರೆಂಡಿ ಆಭರಣಗಳು
ಇದೀಗ ವಜ್ರದ ಫ್ಯಾಷನ್ ಜ್ಯುವೆಲರಿಗಳು ಸಹ ಟ್ರೆಂಡಿಯಾಗಿವೆ. ಎಲ್ಲರೂ ಕೊಳ್ಳಬಹುದಾದ ಸಾಮಾನ್ಯ ಅಮೆರಿಕನ್ ಡೈಮಂಡ್‌ನಿಂದಿಡಿದು, ಸಾಲಿಟೈರ್‌ವರೆಗೂ ಹೊಸ ವಿನ್ಯಾಸದ ವಜ್ರಾಭರಣಗಳು ಈ ಸೀಸನ್‌ನಲ್ಲಿ ಕಾಲಿಟ್ಟಿವೆ. ಎಂದಿನಂತೆ ಸಿಂಪಲ್ ನೆಕ್ಪೀಸ್, ಸ್ಟಡ್ಸ್, ಬ್ರೇಸ್ಲೇಟ್, ಸಿಂಗಲ್ ಸ್ಟೋನ್ ಇರುವಂತಹ ವಜ್ರದ ಆಭರಣಗಳಿಗೆ ಬೇಡಿಕೆ ಹೆಚ್ಚಿದೆ. ಗೋಲ್ಡ್ ಚೈನ್ ಜತೆಗೆ ವಜ್ರದ ಸಿಂಪಲ್ ಪೆಂಡೆಂಟ್ ಧರಿಸುವವರು ಮೊದಲಿಗಿಂತ ಹೆಚ್ಚಾಗಿದ್ದಾರೆ ಎನ್ನುತ್ತಾರೆ ಆಭರಣ ವಿನ್ಯಾಸಕರು.
ಪ್ಲಾಟಿನಂ ಆಭರಣಗಳಿಗೂ ಸಿಕ್ತು ಆದ್ಯತೆ
ಇತ್ತೀಚೆಗೆ ಕಾರ್ಪೋರೇಟ್ ಕ್ಷೇತ್ರದ ಹಾಗೂ ಹೈ ಪ್ರೊಫೈಲ್ ಮಹಿಳಾ ವರ್ಗ ಪ್ಲಾಟಿನಂ ಆಭರಣಗಳತ್ತ ಆಕರ್ಷಿತಗೊಂಡಿದೆ ಎನ್ನುತ್ತಾರೆ ಜ್ಯುವೆಲರಿ ಶಾಪ್‌ವೊಂದರ ಮ್ಯಾನೇಜರ್. ಇದಕ್ಕೆ ಪೂರಕ ಎಂಬಂತೆ, ನಾನಾ ಬಗೆಯ ಸಿಂಪಲ್ ಜ್ಯುವೆಲರಿಗಳು ಬಿಡುಗಡೆಗೊಂಡಿವೆ.
ಆಭರಣ ಖರೀದಿಸುವವರಿಗೆ ಒಂದಿಷ್ಟು ಸಿಂಪಲ್ ಸಲಹೆ
- ನಿಮ್ಮ ಸ್ಕಿನ್ ಟೋನ್‌ಗೆ ಹೊಂದುವಂತಹ ಆಭರಣ ಕೊಳ್ಳಿ.
- ಪ್ಲಾಟಿನಂ ಅನ್ನು ಚಿನ್ನ ಹಾಗೂ ವಜ್ರದೊಂದಿಗೆ ಧರಿಸಬೇಡಿ.
- ವಜ್ರದ ಆಭರಣಗಳು ದೀಪಾವಳಿ ಪಾರ್ಟಿವೇರ್‌ಗೆ ಬೆಸ್ಟ್.
- ಜ್ಯುವೆಲರಿ ಆಧಾರದ ಮೇಲೆ ಡ್ರೆಸ್ ಮ್ಯಾಚ್ ಮಾಡಿ.