Deepavali Jewels Shopping 2025: ಧನ್ ತೇರಾಸ್ಗೆ ಜ್ಯುವೆಲರಿ ಕೊಳ್ಳುವ ಮುನ್ನ…
Deepavali Jewels Shopping 2025: ದೀಪಾವಳಿ ಹಬ್ಬಕ್ಕೂ ಮುನ್ನ ಬರುವ ಧನ್ ತೇರಾಸ್ ಹಬ್ಬಕ್ಕೆ ಆಭರಣಗಳನ್ನು ಖರೀದಿಸುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವ ಜ್ಯುವೆಲ್ ಡಿಸೈನರ್ಗಳು, ಒಂದಿಷ್ಟು ಸಿಂಪಲ್ ಸಲಹೆ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್ -


ಟ್ರೆಂಡಿ ಆಭರಣಗಳು
ಪ್ರತಿ ದೀಪಾವಳಿಗೂ ಮುನ್ನ ಆಗಮಿಸುವ ಧನ್ ತೇರಾಸ್ಗೆ ವೈವಿಧ್ಯಮಯ ವಿನ್ಯಾಸದ ಟ್ರೆಂಡಿ ಆಭರಣಗಳು ಜ್ಯುವೆಲರಿ ಲೋಕದಲ್ಲಿ ಬಿಡುಗಡೆಗೊಂಡಿವೆ. ನಮ್ಮಲ್ಲಿ ಅಕ್ಷಯ ತೃತೀಯ ಆಚರಿಸುವಂತೆ ಇಲ್ಲಿಯೇ ಬೆರೆತು ಹೋದ ಉತ್ತರ ಭಾರತ, ಮಹಾರಾಷ್ಟ್ರ ಸೇರಿದಂತೆ ಇತರೇ ರಾಜ್ಯದವರು ಧನ್ ತೇರಾಸ್ ಹಬ್ಬವನ್ನು ಆಚರಿಸುತ್ತಾರೆ. ಈ ದಿನದಂದು ಚಿನ್ನ ಖರೀದಿಸಿದರೆ ಶುಭವೆಂದು ಹೇಳಲಾಗುತ್ತದೆ. ಆ ದಿನ ಲಕ್ಷ್ಮೀಯ ವಿಶೇಷ ಪೂಜೆಯೊಂದಿಗೆ ವಜ್ರಾಭರಣಗಳ ಖರೀದಿಸುವವರ ಸಂಖ್ಯೆ ಹೆಚ್ಚಿದೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್. ಖರೀದಿಸುವ ಸಂದರ್ಭದಲ್ಲಿ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ ಎಂದು ಒಂದಿಷ್ಟು ಸಲಹೆ ನೀಡಿದ್ದಾರೆ.

ಶುದ್ಧತೆ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಿ
ಕೊಳ್ಳುವ ಆಭರಣಗಳ ಬಂಗಾರದ ಶುದ್ಧತೆ ಹಾಗೂ ಇತರೆ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡು ಖರೀದಿಸುವುದು ಅಗತ್ಯ. ಆ ಚಿನ್ನದ ಅಂಗಡಿಯು ಎಷ್ಟು ಖ್ಯಾತಿ ಹೊಂದಿದೆ, ನಿಮಗಿರುವ ನಂಬಿಕೆ ಮತ್ತು ಆ ಶಾಪ್ನೊಂದಿಗೆ ಎಷ್ಟು ವರ್ಷಗಳಿಂದ ಉತ್ತಮ ಸಂಬಂಧ ಹೊಂದಿದ್ದೀರಿ ಎಂಬುದು ನಿಮಗೆ ತಿಳಿದಿರಲಿ. ಖರೀದಿಸುತ್ತಿರುವ ಬ್ರ್ಯಾಂಡ್ ಸಮರ್ಪಕವಾಗಿದೆಯೇ, ಅಧಿಕೃತವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ. ಹಾಗಾಗಿ ಚಿನ್ನದ ಅಂಗಡಿಗೆ ಹೋಗುವುದಕ್ಕೂ ಮೊದಲು ಪ್ಲಾನ್ ಮಾಡಿ. ಆಯ್ಕೆ ಸರಿಯಾಗಿರಲಿ.

ಪ್ರಚಲಿತದಲ್ಲಿರುವ ಆಭರಣಗಳನ್ನು ಖರೀದಿ
ಆಭರಣಗಳನ್ನು ಖರೀದಿಸುವ ಮುನ್ನ ಟ್ರೆಂಡ್ನಲ್ಲಿ, ಯಾವ್ಯಾವ ಆಭರಣಗಳು ಇವೆ. ಮಲ್ಟಿ ಪರ್ಪಸ್ ಆಭರಣಗಳು ಯಾವ್ಯಾವು ಇವೆ, ಹಬ್ಬವನ್ನು ಹೊರತುಪಡಿಸಿ ಇನ್ಯಾವ ಸಂದರ್ಭದಲ್ಲಿ ಇವನ್ನು ಮರು ಧರಿಸಬಹುದು ಎಂಬುದನ್ನು ಪರಿಶೀಲಿಸಿ. ಹಳೆ ಬಂಗಾರದ ಆಭರಣವನ್ನು ಕೊಟ್ಟು, ಹೊಸತನನ್ನು ಖರೀದಿಸುವ ಸೌಲಭ್ಯವನ್ನು ಈ ಹಬ್ಬದ ಸಮಯದಲ್ಲಿ ನೀವು ಸದುಪಯೋಗಪಡಿಸಿಕೊಳ್ಳಬಹುದು.

ಹಾಲ್ ಮಾರ್ಕ್ ಗುರುತಿಗೆ ಆದ್ಯತೆ
ಚಿನ್ನದ ಶುದ್ಧತೆಯನ್ನು ಅಳೆಯುವ ಗುರುತಿಗೆ ಬಿಐಎಸ್ ಹಾಲ್ ಮಾರ್ಕ್ ಎನ್ನುತ್ತಾರೆ. ಬಿಐಎಸ್ ಹಾಲ್ ಮಾರ್ಕ್ ಗುರುತಿನ ಬಂಗಾರದ ಆಭರಣವನ್ನೇ ಸದಾ ಖರೀದಿಸುವುದು ಉತ್ತಮ.

ಬಿಲ್ ಮರೆಯದಿರಿ
ಸ್ವರ್ಣಾಭರಣಗಳನ್ನು ಖರೀದಿಸುವ ಹಾಗೂ ಮಾರಾಟದ ವೇಳೆ ಬಿಲ್ಗಳನ್ನು ತಪ್ಪದೆ ಪಡೆಯಿರಿ. ಕೊಡು-ಕೊಳ್ಳುವಿಕೆಯ ದಾಖಲೆ ನಿಮ್ಮ ಬಳಿ ಇರಬೇಕಾದ್ದು ಅಗತ್ಯ. ಇವು ಆಭರಣಗಳ ರಿಪೇರಿ ಇಲ್ಲವೇ ಮಾರಾಟ ಅಥವಾ ಎಕ್ಸ್ಚೇಂಜ್ ಸಮಯಕ್ಕೆ ಬೇಕಾಗುತ್ತವೆ.