Virat Kohli: ಪಾಕ್ ಅಭಿಮಾನಿಗೆ ಆಟೋಗ್ರಾಫ್ ನೀಡಿದ ಕೊಹ್ಲಿ; ಭಾರತ ವಿರೋಧಿ ಎಂದ ನೆಟ್ಟಿಗರು
ಇತ್ತೀಚಿಗೆ ಏಷ್ಯಕಪ್ ಟಿ20, ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಉಭಯ ದೇಶಗಳ ಆಟಗಾರರ ನಡುವೆ ಯಾವುದೇ ಸಂವಹನ ನಡೆದಿರಲಿಲ್ಲ. ಜೊತೆಗೆ ನೋ ಹ್ಯಾಂಡ್ ಶೇಕ್ ನಿಯಮವನ್ನು ಭಾರತ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಕಟ್ಟುನಿಟ್ಟಾಗಿ ಪಾಲಿಸಿದ್ದವು. ಆದರೆ ಕೊಹ್ಲಿ ಪಾಕ್ ಅಭಿಮಾನಿಗೆ ಆಟೋಗ್ರಾಫ್ ನೀಡಿ ಫೋಟೊ ತೆಗೆಸಿಕೊಂಡಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

-

ಪರ್ತ್: ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ(Virat Kohli) ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನಿ ಅಭಿಮಾನಿಯನ್ನು ಭೇಟಿಯಾಗಿ ಭಾರತ ಮತ್ತು ಆರ್‌ಸಿಬಿ ಜೆರ್ಸಿಗಳ(RCB jersey) ಮೇಲೆ ತಮ್ಮ ಆಟೋಗ್ರಾಫ್ ನೀಡಿದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. ಕೊಹ್ಲಿಯ ಈ ನಡೆಗೆ ಸ್ವತಃ ಅವರ ಅಭಿಮಾನಿಗಳೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಣಿಗೂ ಮುನ್ನ, ಆಸ್ಟ್ರೇಲಿಯಾದ ಪ್ರೇಕ್ಷಕರಿಂದ ಸ್ಟಾರ್ ಬ್ಯಾಟ್ಸ್‌ಮನ್‌ಗೆ ಆತ್ಮೀಯ ಸ್ವಾಗತ ಸಿಕ್ಕಿದ್ದು, ಅವರ ಆಟವನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಪಾಕಿಸ್ತಾನಿ ಅಭಿಮಾನಿಯೊಬ್ಬರು ಕೊಹ್ಲಿಯನ್ನು ಭೇಟಿಯಾಗುವ ಅವಕಾಶವನ್ನು ಪಡೆದರು ಮತ್ತು ಭಾರತ ಮತ್ತು ಆರ್‌ಸಿಬಿ ಜೆರ್ಸಿಗಳ ಮೇಲೆ ಅವರ ಹಸ್ತಾಕ್ಷರವನ್ನು ಪಡೆದರು.
ಇತ್ತೀಚಿಗೆ ಏಷ್ಯಕಪ್ ಟಿ20, ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಉಭಯ ದೇಶಗಳ ಆಟಗಾರರ ನಡುವೆ ಯಾವುದೇ ಸಂವಹನ ನಡೆದಿರಲಿಲ್ಲ. ಜೊತೆಗೆ ನೋ ಹ್ಯಾಂಡ್ ಶೇಕ್ ನಿಯಮವನ್ನು ಭಾರತ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಕಟ್ಟುನಿಟ್ಟಾಗಿ ಪಾಲಿಸಿದ್ದವು. ಆದರೆ ಕೊಹ್ಲಿ ಪಾಕ್ ಅಭಿಮಾನಿಗೆ ಆಟೋಗ್ರಾಫ್ ನೀಡದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ Young Kohli Fan: ಕೊಹ್ಲಿಯಿಂದ ಆಟೋಗ್ರಾಫ್ ಪಡೆದ ಪುಟ್ಟ ಅಭಿಮಾನಿ; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ
ಕೊಹ್ಲಿಯನ್ನು ಭಾರತ ವಿರೋಧಿ ಎಂದು ಕೆಲ ನೆಟ್ಟಿಗರು ದೂರಿದ್ದಾರೆ. ಅವರಿಗೆ ಭಾರತದ ಮೇಲೆ ಪ್ರೀತಿ ಇಲ್ಲ. ಹಣ ಮಾಡಲು ಮಾತ್ರ ಭಾರತದ ಹೆಸರು ಬಳಿಸಿ ಲಂಡನ್‌ನಲ್ಲಿ ನೆಲೆಸಿದ್ದಾರೆ ಎಂಬ ತೀಕ್ಷ್ಣ ಕಮೆಂಟ್‌ಗಳನ್ನು ನೆಟ್ಟಿಗರು ಮಾಡಿದ್ದಾರೆ. ಆರ್‌ಸಿಬಿಯ ಕೆಲ ಅಭಿಮಾನಿಗಳು ಕೂಡ ಕೊಹ್ಲಿಯ ನಡೆಯನ್ನು ಖಂಡಿಸಿದ್ದಾರೆ. ಪಾಕಿಸ್ತಾನದ ಅಭಿಮಾನಿಗೆ ಆರ್‌ಸಿಬಿ ಜೆರ್ಸಿಯಲ್ಲಿ ಸಹಿ ನೀಡಿದ್ದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಪಾಕ್ ಅಭಿಮಾನಿ ಜತೆ ಕೊಹ್ಲಿ
GOAT is here 🐐
— Virat Kohli Fan Club (@Trend_VKohli) October 16, 2025
🎥 - @RevSportzGlobal pic.twitter.com/TYXI7BwhuM