ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12 TRP: ಬಿಗ್ ಬಾಸ್ ಟಿಆರ್​ಪಿ ಔಟ್: ಮೊದಲ ವಾರದ ಕತೆಗೆ ಎಷ್ಟು ರೇಟಿಂಗ್?

ಇದೀಗ ಈ ವರ್ಷದ 40ನೇ ವಾರದ ಟಿಆರ್ಪಿ ಹೊರಬಿದ್ದಿದೆ. ಬಿಗ್ ಬಾಸ್ಗೆ ಮೊದಲ ವಾರ ಭರ್ಜರಿ ಟಿಆರ್ಪಿ ಸಿಕ್ಕಿತ್ತು. ಪ್ರೀಮಿಯರ್‌ ಸಂಚಿಕೆಗೆ 11.0 ಟಿವಿಆರ್‌ ಹಾಗೂ ವಾರದ ದಿನಗಳಲ್ಲಿ ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ ಬಿಗ್ ಬಾಸ್ಗೆ 6.6 ಟಿವಿಆರ್‌ ಪಡೆದುಕೊಂಡಿತ್ತು. ಆದರೆ, ಎರಡನೇ ವಾರ ಟಿಆರ್ಪಿ ಕೊಂಚ ತಗ್ಗಿದೆ.

ಬಿಗ್ ಬಾಸ್ ಟಿಆರ್​ಪಿ ಔಟ್: ಮೊದಲ ವಾರದ ಕತೆಗೆ ಎಷ್ಟು ರೇಟಿಂಗ್?

Varada Kathe Kichchana Jothe BBK 12 -

Profile Vinay Bhat Oct 17, 2025 11:49 AM

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada season 12) ಶುರುವಾಗಿ ಮೂರು ವಾರ ಆಗುತ್ತ ಬರುತ್ತಿದೆ. ಅದಾಗಲೇ ಶೋನಲ್ಲಿ ಯಾರೂ ಊಹಿಸಿರದಂತ ಅನೇಕ ಟ್ವಿಸ್ಟ್​ಗಳನ್ನು ನೀಡಲಾಗಿದೆ. ಶೋ ಶುರುವಾದ ಮೊದಲ ದಿನ ಎಲಿಮಿನೇಷನ್, ವೀಕೆಂಡ್​ನಲ್ಲಿ ಡಬಲ್ ಎಲಿಮಿನೇಷನ್, ಮಿಡ್ ವೀಕ್ ಎಲಿಮಿನೇಷನ್, ಈ ವಾರದಲ್ಲಿ ಮೊದಲ ಫಿನಾಲೇ ಹೀಗೆ ನೋಡುಗರಿಗೆ ಮಾತ್ರವಲ್ಲದೆ ಮನೆಯೊಳಗಿರುವ ಸ್ಪರ್ಧಿಗಳಿಗೂ ಬಿಗ್ ಬಾಸ್ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ. ಈ ಹಿಂದೆ ನಡೆದ ಸೀಸನ್​ಗಳಂತೆ ಈ ಬಾರಿಯ ಸೀಸನ್ ಅಲ್ಲ ಎಂಬ ವಾಖ್ಯವನ್ನು ಬಿಗ್ ಬಾಸ್ ಸಾಭೀತು ಪಡಿಸುತ್ತಿದೆ. ಅದು ಟಿಆರ್​ಪಿ ವಿಚಾರದಲ್ಲೂ ಮುಂದೆವರೆದಿದೆ.

ಹೌದು, ಇದೀಗ ಈ ವರ್ಷದ 40ನೇ ವಾರದ ಟಿಆರ್​ಪಿ ಹೊರಬಿದ್ದಿದೆ. ಬಿಗ್ ಬಾಸ್​ಗೆ ಮೊದಲ ವಾರ ಭರ್ಜರಿ ಟಿಆರ್​ಪಿ ಸಿಕ್ಕಿತ್ತು. ಪ್ರೀಮಿಯರ್‌ ಸಂಚಿಕೆಗೆ 11.0 ಟಿವಿಆರ್‌ ಹಾಗೂ ವಾರದ ದಿನಗಳಲ್ಲಿ ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ ಬಿಗ್ ಬಾಸ್​ಗೆ 6.6 ಟಿವಿಆರ್‌ ಪಡೆದುಕೊಂಡಿತ್ತು. ಆದರೆ, ಎರಡನೇ ವಾರ ಟಿಆರ್​ಪಿ ಕೊಂಚ ತಗ್ಗಿದೆ.

ಕಿಚ್ಚನ ಮೊದಲ ವಾರದ ಮತೆ ಎಪಿಸೋಡ್​ಗೆ ನಗರ ಭಾಗದಲ್ಲಿ 9.1 ಟಿಆರ್​ಪಿ ಸಿಕ್ಕಿದೆ. ನಗರ ಹಾಗೂ ಗ್ರಾಮಾಂತರ ಸೇರಿದರೆ 8.3 ಟಿವಿಆರ್ ಸಿಕ್ಕಿದೆ. ಭಾನುವಾರ ನಗರ + ಗ್ರಾಮಾಂತರ 7.8 ಹಾಗೂ ನಗರ ಭಾಗದಲ್ಲಿ 8.9 ಟಿವಿಆರ್ ದೊರೆತಿದೆ. ವಾರದ ದಿನಗಳಲ್ಲಿ ಕರ್ನಾಟಕದಲ್ಲಿ 5.8 ಟಿವಿಆರ್ ಹಾಗೂ ನಗರ ಭಾಗದಲ್ಲಿ 6.2 ಟಿವಿಆರ್ ಸಿಕ್ಕಿದೆ. ಶೋ ಈಗಷ್ಟೇ ಶುರುವಾಗಿರುವುದರಿಂದ ಕಡಿಮೆ ಟಿಆರ್​ಪಿ ಸಿಕ್ಕಿರಬಹುದು ಎಂಬ ಅಭಿಪ್ರಾಯ ಕೂಡ ಕೇಳಿ ಬಂದಿದೆ.

ಇನ್ನು ಧಾರಾವಾಹಿ ವಿಚಾರಕ್ಕೆ ಬಂದರೆ, ಝೀ ಕನ್ನಡದ ಅಣ್ಣಯ್ಯ ಸೀರಿಯಲ್ 9.3 ಟಿವಿಆರ್ ಪಡೆದು ಕೊನೆಗೂ ಮೊದಲ ಸ್ಥಾನ ಸಂಪಾದಿಸಿದೆ. ಮೂರನೇ ಸ್ಥಾನಕ್ಕೆ ಕುಸಿದಿದ್ದ ಕರ್ಣ ಧಾರಾವಾಹಿ ಇದೀಗ ಎರಡನೇ ಸ್ಥಾನಕ್ಕೇರಿದ್ದು 9.1 ಟಿವಿಆರ್ ಪಡೆದುಕೊಂಡಿದೆ. ಅಮೃತಧಾರೆ ಧಾರಾವಾಹಿಯ ಟಿಆರ್​ಪಿಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಕಳೆದ ವಾರ ನಂಬರ್ ಒನ್ ಸ್ಥಾನದಲ್ಲಿದ್ದ ಈ ಸೀರಿಯಲ್ ಈ ಬಾರಿ 8.9 ಟಿವಿಆರ್ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದೆ.

BBK 12: ಮುಚ್ಕೊಂಡು ಮಲ್ಕೋ.. ಈಡಿಯೆಟ್: ರಕ್ಷಿತಾ ಶೆಟ್ಟಿಗೆ ಅವಮಾನ ಮಾಡಿದ ಅಶ್ವಿನಿ ಗೌಡ

ಲಕ್ಷ್ಮೀ ನಿವಾಸ ಸೀರಿಯಲ್‌ 8.1 ಟಿವಿಆರ್​ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಮತ್ತೊಂದು ವಿಶೇಷ ಎಂದರೆ ಕಳೆದ ಹಲವು ತಿಂಗಳುಗಳಿಂದ 5ಕ್ಕಿಂತ ಕಡಿಮೆ ಟಿವಿಆರ್ ಪಡೆದುಕೊಳ್ಳುತ್ತಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ 40ನೇ ವಾರ 6.2 ಟಿವಿಆರ್ ಪಡೆದುಕೊಂಡು ಐದನೇ ಸ್ಥಾನಕ್ಕೇರಿದೆ.

ಇತ್ತ ಕಲರ್ಸ್ ಕನ್ನಡದ ವಿಚಾರಕ್ಕೆ ಬಂದರೆ, ನಂದಗೋಕುಲ ಧಾರಾವಾಹಿ ಟಾಪ್​ನಲ್ಲಿದೆ. ಈ ಧಾರಾವಾಹಿಗೆ 5.7 ಟಿವಿಆರ್ ಲಭಿಸಿದೆ. ಮುದ್ದು ಸೊಸೆ ಮತ್ತು ಇತ್ತೀಚೆಗಷ್ಟೆ ಪ್ರಾರಂಭವಾದ ಪ್ರೇಮಕಾವ್ಯ ಧಾರಾವಾಹಿ 4.9 ಟಿವಿಆರ್ ಪಡೆದು ಕಲರ್ಸ್​ನ ಎರಡನೇ ಮತ್ತು ಮೂರನೇ ಧಾರಾವಾಹಿ ಆಗಿದೆ. ಭಾರ್ಗವಿ ಎಲ್​.ಎಲ್​.ಬಿ ಧಾರಾವಾಹಿ ಅರ್ಬಲ್‌ + ರೂರಲ್‌ ಮಾರ್ಕೆಟ್‌ನಲ್ಲಿ 4.7 ಟಿವಿಆರ್‌ ಹಾಗೂ ಭಾಗ್ಯ ಲಕ್ಷ್ಮೀ 4.6 ಟಿವಿಆರ್​ನೊಂದಿಗೆ ನಂತರದ ಸ್ಥಾನದಲ್ಲಿದೆ.