ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepavali Shopping 2025: ಶುರುವಾಯ್ತು ದೀಪಾವಳಿಯ ಭರ್ಜರಿ ಶಾಪಿಂಗ್

Deepavali Shopping 2025: ದೀಪಾವಳಿ ಫೆಸ್ಟೀವ್ ಸೀಸನ್ ಶಾಪಿಂಗ್ ಈಗಾಗಲೇ ಶುರುವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಮಾರುಕಟ್ಟೆಯಲ್ಲಿ ವಿನೂತನ ಡಿಸೈನರ್‌ವೇರ್ಸ್, ಆಭರಣಗಳು, ಗೃಹಾಲಂಕಾರದ ಸಾಮಗ್ರಿಗಳು, ಗೃಹಪಯೋಗಿ ವಸ್ತುಗಳು ಸೇರಿದಂತೆ ನಾನಾ ಬಗೆಯವು ಎಂಟ್ರಿ ನೀಡಿವೆ.‌ ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

ಚಿತ್ರಕೃಪೆ: ಮಿಂಚು
1/5

ದೀಪಾವಳಿ ಶಾಪಿಂಗ್ ಶುರುವಾಗಿದೆ. ಮಾಲ್‌ಗಳಲ್ಲಿ ಮಾತ್ರವಲ್ಲ, ಪ್ರಮುಖ ಹಾಗೂ ಚಿಕ್ಕ ಪುಟ್ಟ ಬೀದಿಗಳಲ್ಲೂ ಹಬ್ಬದ ಶಾಪಿಂಗ್ ಮೇನಿಯಾ ಹರಡಿದೆ. ಇದಕ್ಕೆ ಪೂರಕ ಎಂಬಂತೆ, ಎಲ್ಲೆಡೆ ಹಬ್ಬದ ಡಿಸ್ಕೌಂಟ್ಸ್, ಎಕ್ಸೂಕ್ಲೂಸಿವ್ ಆಫರ್ಸ್ ಹಾಗೂ ಗಿಫ್ಟ್‌ಗಳನ್ನು ನೀಡಲಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಮಾರುಕಟ್ಟೆಯಲ್ಲಿ ವಿನೂತನ ಡಿಸೈನರ್‌ವೇರ್ಸ್, ಆಭರಣಗಳು, ಗೃಹಾಲಂಕಾರದ ಸಾಮಗ್ರಿಗಳು, ಗೃಹಪಯೋಗಿ ವಸ್ತುಗಳು ಸೇರಿದಂತೆ ನಾನಾ ಬಗೆಯವು ಎಂಟ್ರಿ ನೀಡಿವೆ.

2/5

ಹಬ್ಬಕ್ಕೆ ಕಾಲಿಟ್ಟ ವೈವಿಧ್ಯಮಯ ಡ್ರೆಸ್‌ಗಳು

ದೀಪಾವಳಿಯಲ್ಲಿ ಎಥ್ನಿಕ್ ಲುಕ್‌ಗೆ ಸಾಥ್ ನೀಡುವ ಹೊಸ ಟ್ರೆಂಡಿ ಡಿಸೈನ್‌ನ ಮೆನ್- ವುಮೆನ್ ಹಾಗೂ ಮಕ್ಕಳ ಡಿಸೈನರ್‌ವೇರ್‌ಗಳು ಕಾಲಿಟ್ಟಿವೆ. ಚಿಕ್ಕ ಮಕ್ಕಳಿಂದಿಡಿದು ಹಿರಿಯರವರೆಗೂ ನಾನಾ ಶೈಲಿಯ ವಿನ್ಯಾಸದ ಟ್ರೆಡಿಷನಲ್ ಡಿಸೈನರ್‌ವೇರ್‌ಗಳು ಬಂದಿವೆ. ಯೂನಿಸೆಕ್ಸ್ ಶೆರ್ವಾನಿ, ಕುರ್ತಾ, ಟ್ವಿನ್ನಿಂಗ್ ಡಿಸೈನರ್‌ವೇರ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ.

3/5

ಆಭರಣಗಳ ಸಂತೆ

ದೀಪಾವಳಿಗೆ ಆಭರಣಗಳನ್ನು ಕೊಳ್ಳುವರು ಹೆಚ್ಚು. ಇದಕ್ಕೆ ಪೂರಕ ಎಂಬಂತೆ, ದಂತೆರಾಸ್ ಹಿನ್ನೆಲೆಯಲ್ಲಿ, ನವವಿನ್ಯಾಸದ ಸಾಂಪ್ರಾದಾಯಿಕ ಡಿಸೈನ್‌ನ ಆಭರಣಗಳು ಕೂಡ ಜ್ಯುವೆಲರಿ ಲೋಕಕ್ಕೆ ಲಗ್ಗೆ ಇಟ್ಟಿವೆ.

4/5

ಗೃಹಾಲಂಕಾರ ಸಾಮಗ್ರಿಗಳು

ಮನೆಯನ್ನು ಅಲಂಕಾರಿಸುವಂತಹ ಗೃಹಾಲಂಕಾರಿಕ ಸಾಮಗ್ರಿಗಳು ಇಂದು ಲೆಕ್ಕವಿಲ್ಲದಷ್ಟು ಬಗೆಯಲ್ಲಿ ಬಂದಿವೆ. ಮಾಲ್‌ಗಳಲ್ಲಿ ನಾನಾ ಬ್ರಾಂಡ್‌ಗಳಲ್ಲಿ ಹೋಮ್ ಡೆಕೋರ್ ಐಟಂಗಳು ರಾರಾಜಿಸುತ್ತಿವೆ. ರೇಷ್ಮೆ ಹಾಗೂ ಸಿಲ್ಕ್ ಕ್ಲಾತಿಂಗ್‌ನಲ್ಲೂಅಲಂಕಾರಿಕ ವಸ್ತುಗಳು ಲಗ್ಗೆ ಇಟ್ಟಿವೆ. ಇವುಗಳೊಂದಿಗೆ ಟ್ರೆಡಿಷನಲ್ ಲುಕ್ ನೀಡುವ ವಾಲ್ ಹ್ಯಾಂಗಿಂಗ್ ಹಾಗೂ ಶಿಮ್ಮರಿಂಗ್ ಪರದೆಗಳು ಈ ಬಾರಿ ಕಾಲಿಟ್ಟಿವೆ. ಜತೆಗೆ ಹಬ್ಬದಂದು ಮನೆಯ ಹೊರಾಂಗಣವನ್ನು ಸುಂದರಗೊಳಿಸುವ ಬಗೆಬಗೆಯ ಲ್ಯಾಂಟೆರ್ನ್‌ಗಳು ಮಿನುಗುತ್ತಿವೆ.

5/5

ಡಿಸ್ಕೌಂಟ್ಸ್ ಸೌಲಭ್ಯ

ಅಡುಗೆಮನೆಯ ಸಾಮಗ್ರಿಯಿಂದಿಡಿದು, ಹಾಲ್‌ನೊಳಗಿನ ಲಕ್ಷಗಟ್ಟಲೆ ಬೆಲೆಬಾಳುವ ಎಲೆಕ್ಟ್ರಾನಿಕ್ ಐಟಂಗಳು, ಸಾವಿರಗಟ್ಟಲೆಯ ಧರಿಸುವ ಉಡುಪುಗಳು ಹೀಗೆ ಎಲ್ಲಾ ಬಗೆಯ ವಸ್ತುಗಳ ಮೇಲೂ ರಿಯಾಯಿತಿ-ವಿನಾಯತಿಯ ಟ್ಯಾಗ್‌ಗಳು ಸ್ವಾಗತಿಸುತ್ತಿವೆ. ಗೃಹಪಯೋಗಿ ಎಲೆಕ್ಟ್ರಾನಿಕ್ ಐಟಂಗಳು ಕೂಡ ಈ ಸೀಸನ್‌ನಲ್ಲಿ ರಿಯಾಯಿತಿ ಹಾಗೂ ವಿನಾಯಿತಿಗಳಲ್ಲಿ ದೊರೆಯುತ್ತಿವೆ. ಅಲ್ಲದೇ ಹೊಸ ಪ್ಲಾನ್ ಹಾಗೂ ಇಎಂಐ ಸೌಲಭ್ಯವನ್ನು ಕಲ್ಪಿಸುತ್ತಿವೆ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ಸ್.

ಶೀಲಾ ಸಿ ಶೆಟ್ಟಿ

View all posts by this author