Eye Makeup 2026: ಜೆನ್ ಜಿ ಯುವತಿಯರ ಸೌಂದರ್ಯಕ್ಕೆ ಸಾಥ್ ನೀಡುವ ವಿಂಗ್ಸ್ ಐ ಮೇಕಪ್
Wings Eye Makeup: ಜೆನ್ ಜಿ ಯುವತಿಯರ ಕಂಗಳ ಸೌಂದರ್ಯವನ್ನು ಹೆಚ್ಚಿಸುವ ವಿಂಗ್ಸ್ ಐ ಮೇಕಪ್ ಸದ್ಯ ಐ ಮೇಕಪ್ ಲಿಸ್ಟ್‌ನಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಇದ್ಯಾವ ಬಗೆಯ ಐ ಮೇಕಪ್? ಈ ಕುರಿತ ಮಾಹಿತಿ ಇಲ್ಲಿದೆ.
ಸಿಂಪಲ್ಲಾಗಿ ಆಗಿ ಎಂತಹವರೂ ಸುಲಭವಾಗಿ ಮಾಡಿಕೊಳ್ಳಬಹುದಾದ ವಿಂಗ್ಸ್ ಐ ಮೇಕಪ್ ಜೆನ್ ಜಿ ಯುವತಿಯರ ಕಂಗಳನ್ನು ಅಲಂಕರಿಸುತ್ತಿದೆ.
ವಿಂಗ್ಸ್ ಐ ಲೈನರ್ ಟ್ರೈ ಮಾಡಿ
ರೆಕ್ಕೆಯಂತೆ ಕಾಣುವ ತಿದ್ದಿ ತೀಡಿದಂತೆ ಕಾಣುವ ಸಿಂಪಲ್ ಲೈನ್ ಎಳೆಯುವ ಮೇಕಪ್ ಇದು. ಕಣ್ಣಿನ ಅಂಚಿನ ತನಕ ಎಳೆದು ಕೊನೆಯಲ್ಲಿ ಮೇಲ್ಭಾಗಕ್ಕೆ ಎಳೆಯುವ ಐ ಲೈನಿಂಗ್ ಇದು. ರೆಕ್ಕೆಯ ಕೊನೆಯನ್ನು ತೀಡಬೇಕು. ಇನ್ನು, ಮೇಲಿನ ರೆಪ್ಪೆಯ ಕಾಡಿಗೆಯ ಲೈನ್ ಅನ್ನು ಕೆಳಭಾಗಕ್ಕೆ ಬಾಗಿಸಬೇಕು. ಕೆಳಗಿನ ರೆಪ್ಪೆಯ ಲೈನ್‌ಗೆ ತಾಗಿಸಬೇಕು. ನೋಡಲು ಇದು ರೆಕ್ಕೆಯ ಕೊನೆಯ ತುದಿಯಂತೆ ಕಾಣಬೇಕು. ನಿಮಗೆ ಎಷ್ಟು ಉದ್ದ ಬೇಕು ಅಷ್ಟುದ್ದ ಈ ಲೈನನ್ನು ಎಳೆಯಬಹುದು ಎಂದು ಸಿಂಪಲ್ ಟಿಪ್ಸ್ ನೀಡುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಗಂಗಾ.
ಯುವತಿಯರ ಕಣ್ಣಿನ ಆಕಾರಕ್ಕೆ ತಕ್ಕಂತಿರಲಿ
ವಿಂಗ್ಸ್ ಐ ಲೈನ್ ತೀಡುವ ಮುನ್ನ ನಿಮ್ಮ ಕಂಗಳ ಬಗ್ಗೆ ತಿಳಿದುಕೊಳ್ಳಿ. ನಿಮ್ಮದು ಬಟ್ಟಲು ಕಣ್ಣುಗಳಂತೆ ಇದ್ದಲ್ಲಿಅತಿ ದೊಡ್ಡದಾದ ವಿಂಗ್ಸ್ ಬರೆಯಬೇಡಿ. ಹೆಚ್ಚು ಮೊನಾಚಾದ ಲೈನ್ ನೀಡಬೇಡಿ. ಇದು ಕಂಗಳನ್ನು ಮತ್ತಷ್ಟು ದೊಡ್ಡದಂತೆ ಬಿಂಬಿಸುತ್ತದೆ. ಚಿಕ್ಕ ಕಂಗಳಾದಲ್ಲಿ ದೊಡ್ಡದಾದ ವಿಂಗ್ಸ್ ಐ ಲೈನ್ ಬರೆದರೂ ಪರವಾಗಿಲ್ಲ. ಕೊಂಚ ದಪ್ಪನಾಗಿ ತೀಡಿದರೂ ಮನಮೋಹಕವಾಗಿ ಕಾಣುತ್ತದೆ. ಬೆಕ್ಕಿನ ಕಂಗಳಿದ್ದಲ್ಲಿಆದಷ್ಟೂ ವಿಂಗ್ಸ್ ಐ ಲೈನ್ ಬರೆಯುವುದನ್ನು ಅವಾಯ್ಡ್ ಮಾಡಿ. ಯಾಕೆಂದರೇ ಸೂಟ್ ಆಗದು. ಇನ್ನು ಬ್ರೌನ್ ಅಥವಾ ನೀಲಿ ಕಂಗಳಿಗೂ ಓಕೆ ಎನ್ನುತ್ತಾರೆ ಮೇಕಪ್ ಎಕ್ಸ್‌ಪರ್ಟ್ ರಿಯಾ.
ವಿಂಗ್ಸ್ ಐ ಲೈನರ್ ಪ್ರಿಯರಿಗೆ ಒಂದಿಷ್ಟು ಸಲಹೆಗಳು
- ಈ ಸೀಸನ್‌ನಲ್ಲಿ ಯಾವುದೇ ಕಾರಣಕ್ಕೂ ವಾಟರ್ ಪ್ರೂಫ್ ಐ ಲೈನರ್ ಬಳಸದಿರಿ.
- ಬ್ರ್ಯಾಂಡೆಡ್ ಐ ಲೈನರ್ ಬಳಸಿ.
- ಬ್ಲ್ಯಾಕ್ ಐ ಲೈನ್ ಎಲ್ಲಾ ಬಗೆಯ ಮೇಕಪ್‌ಗೂ ಮ್ಯಾಚ್ ಆಗುತ್ತದೆ.
- ಕಣ್ಣಿನ ಅಲರ್ಜಿ ಇರುವವರಿಗೆ ಐ ಲೈನರ್ ಬೇಡ.
- ಮಲಗುವ ಮುನ್ನ ಐ ಲೈನ್ ಮೇಕಪ್ ತೆಗೆಯುವುದು ಮುಖ್ಯ.
- ಮ್ಯಾಚಿಂಗ್‌ಗೆ ಕಲರ್ ಐ ಲೈನರ್ ಬಳಸಿ.