Festival Fashion 2025: ಗಣೇಶ ಚತುರ್ಥಿಯ ಸಂಭ್ರಮಕ್ಕೆ ಸಾಥ್ ನೀಡುವಂತಿರಲಿ ಫ್ಯಾಮಿಲಿ ಸ್ಟೈಲಿಂಗ್
Festival Fashion 2025: ಗಣೇಶ ಚತುರ್ಥಿಯಂದು ನೀವು ಮಾತ್ರವಲ್ಲ, ನಿಮ್ ಇಡೀ ಫ್ಯಾಮಿಲಿ ಎಥ್ನಿಕ್ ಫ್ಯಾಷನ್‌ಗೆ ಸೈ ಎನ್ನಿ! ಟ್ರೆಡಿಷನಲ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಇದು ಹಬ್ಬದ ಕಳೆ ಹೆಚ್ಚಿಸುವುದರೊಂದಿಗೆ ಮನಸ್ಸಿಗೆ ಉಲ್ಲಾಸ ನೀಡುವುದು ಎನ್ನುತ್ತಾರೆ.
ಗಣೇಶ ಚತುರ್ಥಿಯಂದು ನಿಮ್ಮ ಇಡೀ ಫ್ಯಾಮಿಲಿ ಕಂಪ್ಲೀಟ್ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಳ್ಳಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಹೌದು. ಸಡಗರ-ಸಂಭ್ರಮದಿಂದ ಆಚರಿಸುವ ಗಣೇಶ ಚತುರ್ಥಿಯಂದು ನೀವು ಮಾತ್ರವಲ್ಲ, ನಿಮ್ ಇಡೀ ಕುಟುಂಬ ಎಥ್ನಿಕ್ ಫ್ಯಾಷನ್‌ಗೆ ಸೈ ಎನ್ನಿ! ಕಂಪ್ಲೀಟ್ ಟ್ರೆಡಿಷನಲ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳಿ, ಇದು ನಿಮ್ಮ ಮನೆಯ ಹಬ್ಬದ ಕಳೆ ಹೆಚ್ಚಿಸುವುದರೊಂದಿಗೆ ಮನಸ್ಸಿಗೆ ಉಲ್ಲಾಸ ನೀಡುವುದು ಎನ್ನುತ್ತಾರೆ. ಇದಕ್ಕಾಗಿ ಒಂದಿಷ್ಟು ಸಿಂಪಲ್ ಐಡಿಯಾಗಳನ್ನು ನೀಡಿದ್ದಾರೆ. ಟ್ರೈ ಮಾಡಿ ನೋಡಿ.
ಫ್ಯಾಮಿಲಿಯ ಸಾಂಪ್ರದಾಯಿಕ ಲುಕ್ ಹೀಗಿರಲಿ
ಗಣೇಶ ಚತುರ್ಥಿಯಂದು ನಿಮ್ಮ ಕುಟುಂಬ ಕಂಪ್ಲೀಟ್ ಸಾಂಪ್ರದಾಯಿಕವಾಗಿ ಕಾಣಿಸುವಂತಹ ಲುಕ್ ಆಯ್ಕೆ ಮಾಡಿ. ಇದಕ್ಕಾಗಿ ಆದಷ್ಟು ಟ್ರೆಡಿಷನಲ್ ಲುಕ್ ನೀಡುವ ಔಟ್‌ಫಿಟ್‌ಗಳನ್ನು ಮೊದಲೇ ಪ್ಲಾನ್ ಮಾಡಿ. ಒಬ್ಬರು ವೆಸ್ಟರ್ನ್ ಮತ್ತೊಬ್ಬರು ಸೆಮಿ ಎಥ್ನಿಕ್ ಇನ್ನೊಬ್ಬರು ಟ್ರೆಡಿಷನಲ್., ಹೀಗೆ ಇದ್ದಾಗ ನೋಡಲು ಅಷ್ಟಾಗಿ ಚೆನ್ನಾಗಿ ಕಾಣಿಸದು. ಫೋಟೋಗಳಲ್ಲೂ ವಿಭಿನ್ನತೆ ಕಾಣಿಸುವುದು.
ಎಥ್ನಿಕ್‌ನಲ್ಲೂ ಟ್ವಿನ್ನಿಂಗ್ ಮಾಡಿ ನೋಡಿ
ಮನೆಯಲ್ಲಿರುವ ಹೆಣ್ಣು ಮಕ್ಕಳು ಧರಿಸುವ ಸೀರೆ ಅಥವಾ ಉಡುಪಿನ ಕಲರ್ ಮ್ಯಾಚ್ ಮಾಡಬಹುದು. ಇಲ್ಲವೇ ಸ್ಟೈಲಿಂಗ್ ಮ್ಯಾಚ್ ಮಾಡಬಹುದು. ಇನ್ನು ಯುವಕರು ಹಾಗೂ ಗಂಡು ಮಕ್ಕಳು ಒಂದೇ ಬಗೆಯ ಔಟ್‌ಫಿಟ್ ಧರಿಸಬಹುದು. ಇದು ನೋಡಲು ಯೂನಿಫಾರ್ಮಿಟಿ ನೀಡುವುದಲ್ಲದೇ ಫೋಟೋ ಸೆಷನ್‌ಗಳಲ್ಲಿ ಒಗ್ಗಾಟ್ಟಾಗಿರುವಂತೆ ಬಿಂಬಿಸುತ್ತದೆ.
ಟ್ರೆಡಿಷನಲ್ ಸ್ಟೈಲಿಂಗ್ ನಿಮ್ಮದಾಗಲಿ
ಎಲ್ಲರ ಸ್ಟೈಲಿಂಗ್ ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡಬೇಕು. ನೋಡಿದಾಗ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಹ ಸ್ಟೈಲಿಂಗ್ ಚೂಸ್ ಮಾಡಬೇಕು. ಆಗಷ್ಟೇ ಇದು ಧರಿಸುವ ಉಡುಪಿಗೆ ಸಾಥ್ ನೀಡುತ್ತದೆ.
ಹೇರ್‌ಸ್ಟೈಲ್ ಹಾಗೂ ಮೇಕೋವರ್
ಯಾವುದೇ ಫಂಕಿ ಲುಕ್ ಹಬ್ಬದಂದು ಬೇಡ! ಮೇಕೋವರ್ ಕೂಡ ಎಥ್ನಿಕ್ ಲುಕ್‌ಗೆ ಸಾಥ್ ನೀಡುವಂತಿರಬೇಕು. ಆಗಷ್ಟೇ ಟ್ರೆಡಿಷನಲ್ ಲುಕ್ ನಿಮ್ಮದಾಗುವುದು. ಹಬ್ಬದ ಕಳೆ ಹೆಚ್ಚುವುದು.