ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Festive Season Shopping 2025: ಶುರುವಾಯ್ತು ಗೌರಿ-ಗಣೇಶ ಹಬ್ಬದ ವೀಕೆಂಡ್ ಭರ್ಜರಿ ಶಾಪಿಂಗ್

ಮುಂಬರುವ ಗೌರಿ-ಗಣೇಶ ಹಬ್ಬದ ಶಾಪಿಂಗ್, ವೀಕೆಂಡ್‌ನಲ್ಲೇ ಶುರುವಾಗಿದೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆ-ಮಾಲ್‌ಗಳು ಕೂಡ ರಂಗು ರಂಗಾಗಿವೆ. ಹಾಗಾದಲ್ಲಿ, ಏನೇನೆಲ್ಲಾ ಲಗ್ಗೆ ಇಟ್ಟಿವೆ? ಎಂಬುದರ ಕುರಿತಂತೆ ಶಾಪಿಂಗ್ ಎಕ್ಸ್‌ಪರ್ಟ್ಸ್, ಫ್ಯಾಷನ್‌ ತಜ್ಞರು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

ಚಿತ್ರಗಳು: ಮಿಂಚು
1/5

ಹಬ್ಬದ ಶಾಪಿಂಗ್ ಆರಂಭ

ಇನ್ನೇನು ಗೌರಿ-ಗಣೇಶ ಹಬ್ಬ ಸಮೀಪಿಸುತ್ತಿದೆ. ವೀಕೆಂಡ್ ಆಗಿರುವ ಕಾರಣ, ಈಗಾಗಲೇ ಈ ಹಬ್ಬದ ಶಾಪಿಂಗ್ ಎಲ್ಲೆಡೆ ಶುರುವಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಈ ಫೆಸ್ಟೀವ್ ಸೀಸನ್‌ಗೆ ಪೂರಕವಾಗಿರುವಂತವೆ ಎಲ್ಲವೂ ಮಾರುಕಟ್ಟೆ ಹಾಗೂ ಮಾಲ್‌ಗಳಿಗೆ ಲಗ್ಗೆ ಇಟ್ಟಿದ್ದು, ಎಲ್ಲೆಡೆ ಹಬ್ಬದ ಭರ್ಜರಿ ಶಾಪಿಂಗ್ ಭರಾಟೆ ಹೆಚ್ಚಾಗಿದೆ.

2/5

ಲಗ್ಗೆ ಇಟ್ಟ ಡೆಕೋರೇಷನ್ ಐಟಂ, ಉಡುಗೆ

ಶ್ರಾವಣ ಮಾಸದ ನಂತರ ಬರುವ ಭಾದ್ರಪದ ಮಾಸದಲ್ಲಿ ಗೌರಿ-ಗಣೇಶ ಹಬ್ಬವು ಆಗಮಿಸುತ್ತದೆ. ಆ ಮಾಸಕ್ಕೆ ಮುನ್ನವೇ ಹಬ್ಬಕ್ಕೆ ಅಗತ್ಯವಿರುವಂತಹ ಪೂಜಾ ಸಾಮಗ್ರಿಗಳಿಂದ ಹಿಡಿದು, ಗೌರಿ-ಗಣೇಶನ ಮೂರ್ತಿಗಳು, ಡೆಕೋರೇಷನ್ ಐಟಂಗಳು ಸೇರಿದಂತೆ, ಧರಿಸುವ ಉಡುಗೆ ತೊಡುಗೆಗಳು ಸೇರಿದಂತೆ ಎಲ್ಲವೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

3/5

ರಂಗು ರಂಗಾದ ಮಾರುಕಟ್ಟೆಗಳು-ಮಾಲ್‌ಗಳು

ಚಿಕ್ಕ ಪಟ್ಟಣಗಳಿಂದ ಹಿಡಿದು ಮೆಟ್ರೊ ಸಿಟಿಗಳಲ್ಲೂ ಹಬ್ಬದ ರಂಗು ಹೆಚ್ಚಿದೆ. ಕೇವಲ ಮಾರುಕಟ್ಟೆಗಳಲ್ಲಿ ಅಲ್ಲ, ಶಾಪಿಂಗ್ ಸೆಂಟರ್‌ಗಳು ಹಾಗೂ ಮಾಲ್‌ಗಳಲ್ಲೂ ಶಾಪಿಂಗ್ ಭರಾಟೆ ಹೆಚ್ಚಾಗಿದೆ. ಹಬ್ಬದ ಕಳೆ ಹೆಚ್ಚಿದೆ ಎನ್ನುತ್ತಾರೆ ಶಾಪಿಂಗ್ ಸೆಂಟರ್‌ವೊಂದರ ಮ್ಯಾನೇಜರ್ ದೇವ್. ಅವರ ಪ್ರಕಾರ, ಹಬ್ಬದ ಸೀಸನ್‌ಗಳಲ್ಲಿ ಶಾಪಿಂಗ್ ಹೆಚ್ಚುವುದರಿಂದ ಉದ್ಯಮ ಕ್ಷೇತ್ರ ಅಭಿವೃದ್ಧಿ ಕಾಣಲು ಸಾಧ್ಯವಂತೆ.

4/5

ಹಬ್ಬಕ್ಕೆ ಏನೇನೆಲ್ಲ ಬಂದಿವೆ?

ಮಾರುಕಟ್ಟೆಗಳಲ್ಲಿ ಈಗಾಗಲೇ ಹಬ್ಬದ ಪೂಜಾ ಸಾಮಗ್ರಿಗಳು ಹಾಗೂ ಡೆಕೋರೇಷನ್ ಐಟಂಗಳು ಊಹೆಗೂ ಮೀರಿದ ಸಂಖ್ಯೆಯಲ್ಲಿ ರಾರಾಜಿಸುತ್ತಿವೆ. ಜನರ ಬೇಡಿಕೆ ಪೂರೈಸುವಲ್ಲಿ ಎಲ್ಲಾ ಶಾಪ್‌ಗಳು ನಿರತವಾಗಿವೆ. ಇನ್ನು, ಸಾಕಷ್ಟು ಚಿಕ್ಕ-ಪುಟ್ಟ ಶಾಪ್‌ಗಳು ಕೂಡ ಈ ವರ್ಷ ಆನ್‌ಲೈನ್ ಶಾಪಿಂಗ್ ವ್ಯವಸ್ಥೆ ಮಾಡಿವೆ.

5/5

ಉಡುಪುಗಳ ಖರೀದಿ

ಹಬ್ಬ ಎಂದಾಕ್ಷಣ, ಎಲ್ಲರೂ ಅತಿ ಹೆಚ್ಚಾಗಿ ಖರೀದಿ ಮಾಡುವುದು ಉಡುಗೆ – ತೊಡುಗೆಗಳನ್ನು ಎನ್ನುತ್ತಾರೆ ಬೋಟಿಕ್ ಡಿಸೈನರ್‌ಗಳು. ಮಾಲ್‌ಗಳಲ್ಲಿ ಮಾತ್ರವಲ್ಲ, ಎಲ್ಲಾ ಬಗೆಯ ಚಿಕ್ಕ ಶಾಪ್‌ಗಳಲ್ಲೂ ಹಾಗೂ ಬೋಟಿಕ್‌ಗಳಲ್ಲೂ ಕೂಡ ಫೆಸ್ಟಿವ್ ಸೀಸನ್‌ನಲ್ಲಿ ಎಥ್ನಿಕ್‌ವೇರ್‌ಗಳು ತುಂಬಿ ತುಳುಕಾಡುತ್ತಿವೆ. ಇನ್ನು, ಸೀರೆ ಸೆಂಟರ್‌ಗಳಲ್ಲಿ ಮಹಿಳೆಯರ ಸಂಖ್ಯೆ ಅಧಿಕಗೊಂಡಿದೆ ಎನ್ನುತ್ತಾರೆ ಸೀರೆ ಶಾಪ್‌ನ ಸೇಲ್ಸ್ ಮ್ಯಾನ್.

ಶೀಲಾ ಸಿ ಶೆಟ್ಟಿ

View all posts by this author