Ganesh Chaturthi 2025: ಬಾಂಬೆ ಟೈಮ್ಸ್ ಗಣೇಶ ಮಹೋತ್ಸವಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಬಾಲಿವುಡ್ ಸೆಲೆಬ್ರಿಟಿಗಳು
ಮುಂಬೈಯ ಘಾಟ್‌ಕೋಪರ್‌ನಲ್ಲಿ ನಡೆದ ಬಾಂಬೆ ಟೈಮ್ಸ್ ಗಣೇಶ ಮಹೋತ್ಸವಕ್ಕೆ ಈ ಬಾರಿ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಹಾಜರಾಗಿ ಸಂಭ್ರಮದ ಮೆರುಗು ಹೆಚ್ಚಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಭಿಮನ್ಯು ದಸ್ಸಾನಿ, ಶ್ವೇತಾ ತ್ರಿಪಾಠಿ ಸೇರಿದಂತೆ ಹಲವು ತಾರೆಯರು ಪಾಲ್ಗೊಂಡಿದ್ದರು. ಯಾರೆಲ್ಲ ಆಗಮಿಸಿದ್ದರು ಎನ್ನವ ವಿವರ ಇಲ್ಲಿದೆ.
ಶ್ವೇತಾ ತ್ರಿಪಾಠಿ
'ಮಿರ್ಜಾಪುರ’ ಖ್ಯಾತಿಯ ಶ್ವೇತಾ ತ್ರಿಪಾಠಿ, ಕೆಂಪು ಹ್ಯಾಂಡ್ ಲೂಮ್ ಸೀರೆ ಹಾಗೂ ಪ್ರಿಂಟೆಡ್ ಬ್ಲೌಸ್‌ನಲ್ಲಿ ಮಿಂಚಿ ಎಲ್ಲರ ಗಮನ ಸೆಳೆದರು. ಅವರ ಸಾಂಪ್ರದಾಯಿಕ ಉಡುಪನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಸಾಯಿ ಮಂಜ್ರೆಕರ್
ನಟಿ ಸಾಯಿ ಮಂಜ್ರೆಕರ್ ಕಂಚಿನ ಮೆರುಗುಳ್ಳ ಕಾಪರ್ ಸಲ್ವಾರ್ ಸೂಟ್‌ನಲ್ಲಿ ಮಿಂಚಿದ್ದು ಇವರ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಮಧೂ ಷಾ
ನಟಿ ಮಧೂ ಷಾ ಗುಲಾಬಿ ಬಣ್ಣದ ರೇಷ್ಮೆ ಸೀರೆ ಮತ್ತು ಅದಕ್ಕೆ ಹೊಂದಿಕೆಯಾಗುವ ಬ್ಲೌಸ್‌ನಲ್ಲಿ ಆಕರ್ಷಕವಾಗಿ ಕಂಡುಬಂದರು. ಈ ಸೀರೆ ಅವರಿಗೆ ಗ್ರ್ಯಾಂಡ್ ಲುಕ್ ನೀಡಿದೆ.
ತಾನ್ಯಾ ಮಣಿಕ್ತಲಾ
'ದಿ ಸೂಟಬಲ್ ಬಾಯ್' ಖ್ಯಾತಿಯ ತಾನ್ಯಾ ಮಣಿಕ್ತಲಾ ಬಿಳಿ ಬಣ್ಣದ ಕಸೂತಿ ಸೀರೆ ಮತ್ತು ಗುಲಾಬಿ ಕಸೂತಿ ಬ್ಲೌಸ್ ಧರಿಸಿ ಮನಮೋಹಕವಾಗಿ ಕಾಣಿಸಿದರು. ಬಿಳಿ ಕಸೂತಿ ಸೀರೆ ಹಾಗೂ ಗುಲಾಬಿ ಬಣ್ಣದ ಬ್ಲೌಸ್ ಅವರಿಗೆ ಬಹಳ ಆಕರ್ಷಕ ಸ್ಪರ್ಶ ನೀಡಿದೆ.
ಅಭಿಮನ್ಯು ದಸ್ಸಾನ
ಅಭಿಮನ್ಯು ದಸ್ಸಾನ ಕ್ಲಾಸಿಕ್ ನೌಕಾ ನೀಲಿ ಕುರ್ತಾ ಸೆಟ್ ಧರಿಸಿ ಹಬ್ಬದ ವಾತಾವರಣಕ್ಕೆ ಹೊಸ ಮೆರುಗು ನೀಡಿದರು. ಈ ಬಾರಿಯ ಗಣೇಶ ಚತುರ್ಥಿ ಆಚರಣೆ, ಸೆಲೆಬ್ರಿಟಿಗಳ ಸಾಂಪ್ರದಾಯಿಕ ಉಡುಗೆ ಮತ್ತು ಸಂಭ್ರಮದಿಂದ ವಿಶೇಷವಾಗಿ ನೆರವೇರಿತು.