ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Photos: ಅದ್ದೂರಿಯಾಗಿ ಎಂಗೇಜ್‌ ಆದ ʻಗತವೈಭವʼ ಹೀರೋ ದುಷ್ಯಂತ್;‌ ಬೀಗರಾದ ತುಮಕೂರಿನ ಪ್ರಭಾವಿ ರಾಜಕೀಯ ನಾಯಕರು

ಸಿಂಪಲ್‌ ಸುನಿ ನಿರ್ದೇಶನದ ʻಗತವೈಭವʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಕಾಲಿಟ್ಟ ನಟ ದುಷ್ಯಂತ್‌, ಇದೀಗ ಸದ್ದಿಲ್ಲದೇ ದಾಂಪತ್ಯ ಬದುಗೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ತಮ್ಮ ಎಂಗೇಜ್‌ಮೆಂಟ್‌ ಅನ್ನು ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ. ಅಂದಹಾಗೆ, ಇವರು ಮದುವೆ ಆಗುತ್ತಿರುವ ಹುಡುಗಿ ಯಾರು? ರಚನಾ. ಹೌದು, ತುಮಕೂರಿನ ಮಾಜಿ ಸಂಸದ ಮುದ್ದಹನುಮೇಗೌಡ ಅವರ ಪುತ್ರಿಯಾಗಿರುವ ರಚನಾ ಅವರನ್ನು ದುಷ್ಯಂತ್‌ ವರಿಸುತ್ತಿದ್ದು, ಈ ಮದುವೆ ಮೂಲಕ ಎರಡು ರಾಜಕೀಯ ಕುಟುಂಬಗಳ ನಡುವೆ ಸಂಬಂಧ ಬೆಳೆಯುತ್ತಿದೆ. ಹೌದು, ದುಷ್ಯಂತ್‌ ತಂದೆ ಎಸ್‌ ಆರ್‌ ಶ್ರೀನಿವಾಸ್‌ ಅವರು ಕೂಡ ಗುಬ್ಬಿ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಈ ಎಂಗೇಜ್‌ಮೆಂಟ್‌ ಸಮಾರಂಭದ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ ನೋಡಿ.

1/8

ಗತವೈಭವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ದುಷ್ಯಂತ್‌

2/8

ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಬಂದಿರುವ ದುಷ್ಯಂತ್‌

3/8

ಮುದ್ದಹನುಮೇಗೌಡರ ಪುತ್ರಿ ರಚನಾ ಜೊತೆ ದುಷ್ಯಂತ್ ದಾಂಪತ್ಯ ಬದುಕು ಆರಂಭಿಸಲಿದ್ದಾರೆ

4/8

ದುಷ್ಯಂತ್‌ ಮತ್ತು ರಚನಾ ಅವರ ಎಂಗೇಜ್‌ಮೆಂಟ್‌ ಗ್ರ್ಯಾಂಡ್‌ ಆಗಿ ನಡೆದಿದೆ

5/8

ಬೀಗರಾದ ಮಾಜಿ ಸಂಸದ ಮುದ್ದಹನುಮೇಗೌಡ ಮತ್ತು ಶಾಸಕ ಎಸ್‌ ಆರ್‌ ಶ್ರೀನಿವಾಸ್‌

6/8

ದುಷ್ಯಂತ್‌ ಮತ್ತು ರಚನಾ ಅವರ ಮದುವೆಯು ಫೆ.26ರಂದು ಗ್ರ್ಯಾಂಡ್‌ ಆಗಿ ನಡೆಯಲಿದೆ

7/8

ದುಷ್ಯಂತ್‌ - ರಚನಾ ಮದುವೆಯನ್ನು ಬೆಂಗಳೂರಿನ ʻಚಾಮರ ವಜ್ರʼದಲ್ಲಿ ಅದ್ದೂರಿ ಮಾಡಲು ತೀರ್ಮಾನಿಸಲಾಗಿದೆ

8/8

ಮಾರ್ಚ್‌ 1ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರತಕ್ಷತೆ ಹಾಗೂ ಬೀಗರ ಊಟ ಇರಲಿದೆ. ನಿಶ್ಚಿತಾರ್ಥ ಮಾಡಿಕೊಂಡಿರುವ ದುಷ್ಯಂತ್‌ ಅವರಿಗೆ ಅಭಿಮಾನಿಗಳು, ಸ್ನೇಹಿತರು, ಆಪ್ತರು ಶುಘ ಹಾರೈಸಿದ್ದಾರೆ