ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Photos: ʻಗಿಚ್ಚಿ ಗಿಲಿಗಿಲಿʼ ಖ್ಯಾತಿಯ ಚಿಲ್ಲರ್‌ ಮಂಜು ಮದುವೆ ಫಿಕ್ಸ್;‌ ಹುಡುಗಿ ಯಾರು? ಎಂಗೇಜ್‌ಮೆಂಟ್‌ ಆಗಿದ್ದೆಲ್ಲಿ?

ಕಲರ್ಸ್‌ ಕನ್ನಡ ವಾಹಿನಿಯ ʻಗಿಚ್ಚಿ ಗಿಲಿಗಿಲಿʼ ಮತ್ತು ʻಮಜಾಭಾರತʼ ರಿಯಾಲಿಟಿ ಶೋಗಳ ಮೂಲಕ ಫೇಮಸ್‌ ಆಗಿರುವ ನಟ ಚಿಲ್ಲರ್‌ ಮಂಜು (ಮಂಜುನಾಥ್‌). ತಮ್ಮ ಕಾಮಿಡಿ ಟೈಮಿಂಗ್‌ ಹಾಗೂ ಎಕ್ಸ್‌ಪ್ರೆಶನ್‌ಗಳಿಂದ ಕಿರುತೆರೆ ವೀಕ್ಷಕರ ಮನಸ್ಸು ಗೆದ್ದಿರುವ ಮಂಜ, ಒಂದು ಗುಡ್‌ ನ್ಯೂಸ್‌ ನೀಡಿದ್ದಾರೆ. ಅದೇನಪ್ಪ ಅಂದ್ರೆ, ಅವರು ಸದ್ದಿಲ್ಲದೇ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಕಾರುಣ್ಯಾ ಎಂಬುವವರ ಜೊತೆಗೆ ಚಿಲ್ಲರ್ ಮಂಜ ಎಂಗೇಜ್‌ ಆಗಿದ್ದು, ಈಚೆಗೆ ಸಿಂಪಲ್‌ ಆಗಿ ಅವರ ಎಂಗೇಜ್‌ಮೆಂಟ್‌ ನಡೆದಿದೆ. ಇದೇ ಶೋನ ಕಲಾವಿದರಾದ ಹಾಸ್ಯ ನಟ ಶಿವು ಹಾಗೂ ಮಾನಸ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಚಿಲ್ಲರ್ ಮಂಜು ಕೂಡ ಎಂಗೇಜ್‌ ಆಗಿದ್ದಾರೆ. ಈಚೆಗೆ ಬೆಂಗಳೂರಿನಲ್ಲಿ ಈ ಎಂಗೇಜ್‌ಮೆಂಟ್‌ ನಡೆದಿದೆ ಎಂದು ಹೇಳಲಾಗಿದೆ. ಇಲ್ಲಿವೆ ನೋಡಿ ಚಿಲ್ಲರ್‌ ಮಂಜು ಮತ್ತು ಕಾರುಣ್ಯಾ ಅವರ ಎಂಗೇಜ್‌ಮೆಂಟ್‌ ಫೋಟೋಗಳು.

1/5

ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್‌ʼ ರಿಯಾಲಿಟಿ ಶೋನಲ್ಲಿ ಪ್ರಸ್ತುತ ಬ್ಯುಸಿ ಆಗಿರುವ ಚಿಲ್ಲರ್‌ ಮಂಜು

2/5

ಕೇವಲ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ಚಿಲ್ಲರ್‌ ಮಂಜು

3/5

ಸೋಶಿಯಲ್‌ ಮೀಡಿಯಾದಲ್ಲಿ ಕಾರುಣ್ಯ - ಚಿಲ್ಲರ್‌ ಮಂಜು ಎಂಗೇಜ್‌ಮೆಂಟ್‌ ಫೋಟೋಗಳು ವೈರಲ್‌ ಆಗಿವೆ

4/5

ಚಿಲ್ಲರ್‌ ಮಂಜು ಮದುವೆ ಆಗುತ್ತಿರುವ ಕಾರುಣ್ಯ ಕೃಷ್ಣ ಯಾರು ಎಂಬ ಬಗ್ಗೆ ಜಾಸ್ತಿ ಮಾಹಿತಿ ಗೊತ್ತಾಗಿಲ್ಲ.

5/5

ನಿಶ್ಚಿತಾರ್ಥ ಮಾಡಿಕೊಂಡ ಚಿಲ್ಲರ್‌ ಮಂಜುಗೆ ಗೆಳೆಯರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.