Photos: ಒಟ್ಟಿಗೆ ಕಾಣಿಸಿಕೊಂಡ 'ಕಾದಂಬರಿ' ಸೀರಿಯಲ್ ಸಹೋದರಿಯರು; ಗೆಳೆತನವನ್ನ ಸಂಭ್ರಮಿಸಿದ ನಟಿ ಶ್ವೇತಾ ಚಂಗಪ್ಪ - ಸಿಂಧು ಕಲ್ಯಾಣ್
ಉದಯ ಟಿವಿಯ ‘ಕಾದಂಬರಿ’ ಧಾರಾವಾಹಿಯಲ್ಲಿ ಸಹೋದರಿಯರಾಗಿ ಕಾಣಿಸಿಕೊಂಡವರು ಶ್ವೇತಾ ಚೆಂಗಪ್ಪ ಮತ್ತು ಸಿಂಧು ಕಲ್ಯಾಣ್. ಇದೀಗ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪ್ರೇಮಿಗಳ ದಿನದಂದು ಫ್ರೆಂಡ್‌ಶಿಪ್ ಡೇ ಆಚರಿಸಿದ್ದಾರೆ. ಆ ಕುರಿತು ಬರೆದುಕೊಂಡಿರುವ ಶ್ವೇತಾ ಚೆಂಗಪ್ಪ, "ಕಾದಂಬರಿ ಇಂದ ಶುರುವಾದ ಸ್ನೇಹ.. ಆದಿ ಇಂದ ಕೊನೆವರೆಗೆ... ವ್ಯಾಲೆಂಟೈನ್ಸ್ ಡೇ (Valentine's Day) ಆಚರಿಸಲು ಎಂಥಾ ಅದ್ಭುತವಾದ ಮಾರ್ಗವಿದು! ಇದು ವ್ಯಾಲೆಂಟೈನ್ಸ್ ಡೇಗಿಂತ ಫ್ರೆಂಡ್‌ಶಿಪ್ ಡೇ (Friendship Day) ತರಹವೇ ಇತ್ತು.. ತುಂಬಾ ಮಜಾ, ನಗು ಮತ್ತು ಹಂಚಿಕೊಳ್ಳಲು ನೂರಾರು ವಿಷಯಗಳು... ನನ್ನ 'ಫಾರ್‌ಎವರ್ ಫ್ರೆಂಡ್ಸ್' ನಾವು.." ಎಂದಿದ್ದಾರೆ. ಜೊತೆಗೆ ತಮ್ಮಿಬ್ಬರ ಕುಟುಂಬಗಳು ಒಟ್ಟಿಗೆ ಇರುವಂತಹ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
"ನಮ್ಮ ನಡುವಿನ ಬಾಂಧವ್ಯವನ್ನು ವಿವರಿಸಲು ಕೆಲವರಿಗೆ ಯಾವುದೇ ವಿವರಣೆ ಬೇಕಿಲ್ಲ.. ಕೆಲವು ಸಂಬಂಧಗಳು ಅಷ್ಟೇ ಪವಿತ್ರ ಮತ್ತು ನೈಜವಾಗಿರುತ್ತವೆ. ಜಗತ್ತಿಗಾಗಲಿ, ಸಮಾಜಕ್ಕಾಗಲಿ ಅಲ್ಲ, ಕೇವಲ ನಮಗಾಗಿ.." ಎಂದು ಬರೆದುಕೊಂಡಿರುವ ಶ್ವೇತಾ.
"ನನ್ನ ಎಲ್ಲಾ ಏಳುಬೀಳುಗಳಲ್ಲಿ ನನ್ನ ಜೊತೆಗಿರುವ ಈ ಅದ್ಭುತ ಜೋಡಿಯನ್ನು ನಾನು ತುಂಬಾ ಪ್ರೀತಿಸುತ್ತೇನೆ. ಏನೇ ಆದರೂ ಸದಾ ನನ್ನ ಜೊತೆ ನಿಲ್ಲುವ ಸಿಂಧು ಹಾಗೂ ಕಲ್ಯಾಣ್ ನಿಮಗೆ ಧನ್ಯವಾದಗಳು. ನಿಮ್ಮಿಬ್ಬರ ಮೇಲೆ ಅಪಾರ ಪ್ರೀತಿ" ಎಂದಿದ್ದಾರೆ ಶ್ವೇತಾ.
ಉದಯ ಟಿವಿಯ ಫೇಮಸ್ ಧಾರಾವಾಹಿ ಕಾದಂಬರಿಯಲ್ಲಿ ನಟಿಸಿದ್ದ ಶ್ವೇತಾ ಮತ್ತು ಸಿಂಧು
ಕಾದಂಬರಿ, ಕವನಾ, ಕಾವ್ಯ, ಕೀರ್ತನಾ, ಕವಿತಾ ಹೀಗೆ ಐವರು ಸಹೋದರಿಯ ಕಥೆಯನ್ನು ಹೇಳುವಂತಿದ್ದ ಕಾದಂಬರಿ ಸೀರಿಯಲ್
20 ವರ್ಷಗಳಿಂದಲೂ ಅದೇ ಹಳೆಯ ಆತ್ಮೀಯತೆ, ಬಾಂಧವ್ಯವನ್ನು ಉಳಿಸಿಕೊಂಡಿರುವ ಸಿಂಧು - ಶ್ವೇತಾ ಚೆಂಗಪ್ಪ
ಫೆ.14ರ ಪ್ರೇಮಿಗಳ ದಿನದಂದು ಶ್ವೇತಾ-ಸಿಂಧು ಸ್ನೇಹವನ್ನು ಸಂಭ್ರಮಿಸಿದ್ದಾರೆ. ಇಬ್ಬರು ಕೂಡ ತಮ್ಮ ಫ್ಯಾಮಿಲಿಗಳ ಜೊತೆಗೆ ಡಿನ್ನರ್ ಮಾಡಿದ್ದಾರೆ.