ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻಉಗ್ರಂʼ ಮಂಜು; ಈ ಮದುವೆಗೆ ಯಾರೆಲ್ಲಾ ಹೋಗಿದ್ರು ನೋಡಿ
ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಹಾಗೂ 'ಬಿಗ್ ಬಾಸ್ ಕನ್ನಡ' ಖ್ಯಾತಿಯ ಉಗ್ರಂ ಮಂಜು ಅವರು ಇಂದು (ಜ.23) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ, ಗುರು-ಹಿರಿಯರ ಸಮ್ಮುಖದಲ್ಲಿ ಮಂಜು ಅವರು ಸಾಯಿ ಸಂಧ್ಯಾ ಅವರ ಕೊರಳಿಗೆ ತಾಳಿ ಕಟ್ಟುವ ಮೂಲಕ ಹೊಸ ಬದುಕಿಗೆ ನಾಂದಿ ಹಾಡಿದರು. ಧರ್ಮಸ್ಥಳದಲ್ಲಿ ನಡೆದ ಈ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗಿಯಾಗಿದ್ದರು. ಮಂಜು ಅವರ ಕೈಹಿಡಿದಿರುವ ಸಾಯಿ ಸಂಧ್ಯಾ ಅವರು ವೃತ್ತಿಯಲ್ಲಿ ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಧರ್ಮಸ್ಥಳದ ಪವಿತ್ರ ಕ್ಷೇತ್ರದಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ಮಂಜು ಅವರ ಮದುವೆ ಶಾಸ್ತ್ರಗಳು ನೆರವೇರಿವೆ.
ಸಾಯಿ ಸಂಧ್ಯಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.
ಮದುವೆಗೂ ಮುನ್ನ ದಿನ (ನಿನ್ನೆ) ಮಂಜು ಅವರ ನಿವಾಸದಲ್ಲಿ ಸರಳವಾಗಿ ಅರಿಶಿಣ ಶಾಸ್ತ್ರ ನೆರವೇರಿತ್ತು. ಸಾಂಪ್ರದಾಯಿಕ ಪಂಚೆ ಧರಿಸಿ ಮಿಂಚಿದ್ದ ಮಂಜು ಅವರ ಅರಿಶಿಣ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಆಡಂಬರವಿಲ್ಲದೆ ಕೇವಲ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಮಂಜು ಮದುವೆಯಾಗಿದ್ದಾರೆ.
ಮೂಲಗಳ ಪ್ರಕಾರ, ಮಂಜು ಅವರು ಬೆಂಗಳೂರಿನಲ್ಲಿ ಆಪ್ತರು ಮತ್ತು ಚಿತ್ರರಂಗದ ಗಣ್ಯರಿಗಾಗಿ ಅದ್ದೂರಿ ಆರತಕ್ಷತೆ ಹಮ್ಮಿಕೊಳ್ಳಲಿದ್ದಾರಂತೆ.
'ಉಗ್ರಂ' ಸಿನಿಮಾದ ಮೂಲಕ ಖ್ಯಾತಿ ಪಡೆದ ಮಂಜು, ನಂತರ 'ಕಿರಿಕ್ ಪಾರ್ಟಿ', 'ಹೀರೋ', 'ಕಿಡಿ', 'ಕಿರೀಟ', 'ರಾನಿ' ಮತ್ತು 'ದೂರದರ್ಶನ'ದಂತಹ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ಧನರಾಜ್ ಮತ್ತು ಹನುಮಂತ ಕೂಡ ಮಂಜು ಮದುವೆಗೆ ಆಗಮಿಸಿದ್ದರು.
ಇತ್ತೀಚೆಗೆ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ 'ಮ್ಯಾಕ್ಸ್' ಚಿತ್ರದಲ್ಲಿನ ಮಂಜು ಅವರ ಖಡಕ್ ಅಭಿನಯ ಮತ್ತು ಡೈಲಾಗ್‌ಗಳಿಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.