ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Independence Day 2025: 2014-25ರವರೆಗೆ ಮೋದಿಯವರ ಸ್ವಾತಂತ್ರ್ಯ ದಿನದ ವೇಷಭೂಷಣದ ಒಂದು ಝಲಕ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ದಿನಾಚರಣೆಯ ವೇಷಭೂಷಣವು ಯಾವಾಗಲೂ ಗಮನ ಸೆಳೆಯುತ್ತದೆ. ದೆಹಲಿಯ ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವಾಗ ಅವರ ಆಯ್ಕೆಯ ವಸ್ತ್ರಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ರಾಷ್ಟ್ರೀಯ ಗೌರವವನ್ನು ಪ್ರತಿಬಿಂಬಿಸುತ್ತವೆ. 2014ರಿಂದ 2025ರವರೆಗಿನ ಮೋದಿಯವರ ಸ್ವಾತಂತ್ರ್ಯ ದಿನದ ವೇಷಭೂಷಣದ ಒಂದು ಝಲಕ್ ಇಲ್ಲಿದೆ ನೋಡಿ.

ಪ್ರಧಾನಮಂತ್ರಿ ನರೇಂದ್ರ ಮೋದಿ
1/12

2025ರ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಗಾಢ ಕೇಸರಿ ಟರ್ಬನ್ ಧರಿಸಿ, ಕ್ರೀಮ್ ಬಣ್ಣದ ತ್ರಿವರ್ಣ ಧ್ವಜದ ಗಡಿಯಿರುವ ಸ್ಟೋಲ್‌ನೊಂದಿಗೆ ಬಿಳಿ ಕುರ್ತಾ ಜೊತೆ ನೆಹರು ಜಾಕೆಟ್ ಧರಿಸಿದ್ದರು. ಈ ವೇಷವು ರಾಷ್ಟ್ರದ ಇತಿಹಾಸ, ಏಕತೆ, ಮತ್ತು ಹೆಮ್ಮೆಯನ್ನು ಸಂಕೇತಿಸಿತು.

2/12

2024ರಲ್ಲಿ ಮೋದಿ ಕಿತ್ತಳೆ, ಹಳದಿ, ಮತ್ತು ಹಸಿರು ಬಣ್ಣದ ರಾಜಸ್ಥಾನಿ ಲೆಹೆರಿಯಾ-ಪ್ರಿಂಟ್ ಟರ್ಬನ್ ಧರಿಸಿದ್ದರು. ಬಿಳಿ ಕುರ್ತಾ ನೀಲಿ ಬಂಧಗಾಲಾ ಜಾಕೆಟ್ ಈ ಲುಕ್‌ಗೆ ಮತ್ತಷ್ಟು ಮೆರೆಗು ತಂದಿತ್ತು.

3/12

2023ರಲ್ಲಿ ಬಹುವರ್ಣದ ರಾಜಸ್ಥಾನಿ ಬಂಧನಿ-ಪ್ರಿಂಟ್ ಟರ್ಬನ್ ಧರಿಸಿದ ಮೋದಿ, ಆಫ್-ವೈಟ್ ಕುರ್ತಾ ಮತ್ತು ಕಪ್ಪು ವಿ-ನೆಕ್ ಜಾಕೆಟ್‌ನೊಂದಿಗೆ ಸೊಗಸಾದ ಲುಕ್‌ನ್ನು ಪ್ರದರ್ಶಿಸಿದರು.

4/12

2022ರಲ್ಲಿ ಭಾರತೀಯ ಧ್ವಜದ ಬಣ್ಣಗಳಾದ ಕಿತ್ತಳೆ ಮತ್ತು ಹಸಿರು ಗೀರುಗಳಿರುವ ಬಿಳಿ ಟರ್ಬನ್ ಧರಿಸಿದ ಮೋದಿ, ಬಿಳಿ ಕುರ್ತಾ ಜತೆ ತಿಳಿನೀಲಿ ನೆಹರು ಜಾಕೆಟ್ ಧರಿಸಿದ್ದರು.

5/12

2021ರಲ್ಲಿ ಕೆಂಪು ಮಾದರಿಗಳು ಮತ್ತು ಗುಲಾಬಿ ಬಣ್ಣಟ ಟ್ರೇಲ್ ಹೊಂದಿರುವ ಕೇಸರಿ ಟರ್ಬನ್ ಧರಿಸಿದ ಮೋದಿ, ನೀಲಿ ಜಾಕೆಟ್ ಮತ್ತು ಕೇಸರಿ ಗಡಿಯಿರುವ ಬಿಳಿ ಸ್ಟೋಲ್‌ನೊಂದಿಗೆ ಕಾಣಿಸಿಕೊಂಡಿದ್ದರು.

6/12

2020ರ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಮೋದಿ ಕೇಸರಿ ಮತ್ತು ಕ್ರೀಮ್ ಬಣ್ಣದ ಟರ್ಬನ್ ಧರಿಸಿ, ಬಿಳಿ ಕುರ್ತಾ ಜೊತೆ ಕಿತ್ತಳೆ-ಬಿಳಿ ಸ್ಕಾರ್ಫ್ ಧರಿಸಿದ್ದರು.

7/12

2019ರಲ್ಲಿ ಕಸೂತಿಯ ಕೇಸರಿ ಟರ್ಬನ್‌ನೊಂದಿಗೆ ಸ್ಟೋಲ್ ಹೊಂದಿರುವ ಕಸೂತಿ ಮಾಡಿದ ಕೇಸರಿ ಪೇಟವನ್ನು ಧರಿಸಿದ್ದರು. ಸಂಪೂರ್ಣ ಬಿಳಿ ಸಾದಾ ಉಡುಪಿನಲ್ಲಿ ಪ್ರಧಾನಿ ಮೋದಿ ಕಾಣಿಸಿಕೊಂಡಿದ್ದರು.

8/12

2018ರಲ್ಲಿ ಪ್ರಧಾನಿ ಮೋದಿ ಕೆಂಪು ಮತ್ತು ಕೇಸರಿ ಮಿಶ್ರಿತ ಪೇಟ ಧರಿಸಿದ್ದರು. ಪೇಟ ಜತೆಯಲ್ಲಿ ಸರಳ ಬಿಳಿ ಕುರ್ತಾ-ಪೈಜಾಮಾದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದರು.

9/12

2017ರಲ್ಲಿ ಜ್ಯಾಮಿತೀಯ ಮತ್ತು ಸಾಂಪ್ರದಾಯಿಕ ಮಾದರಿಗಳಿರುವ ಗಾಢ ಹಳದಿ ಟರ್ಬನ್ ಧರಿಸಿದ ಮೋದಿ, ತಿಳಿಹಳದಿ ಕುರ್ತಾದೊಂದಿಗೆ ಸೊಗಸಾದ ಲುಕ್‌ನಲ್ಲಿ ಮಿಂಚಿದ್ದರು.

10/12

2016ರಲ್ಲಿ ಗುಲಾಬಿ ಮತ್ತು ಹಳದಿ ಟೈ-ಡೈ ಟರ್ಬನ್ ಧರಿಸಿದ ಮೋದಿ, ಸರಳ ಬಿಳಿ ಕುರ್ತಾ ಸೆಟ್‌ನೊಂದಿಗೆ ವೈವಿಧ್ಯಮಯ ಆಯ್ಕೆಯನ್ನು ಮಾಡಿದ್ದರು.

11/12

2015ರಲ್ಲಿ ಬಹುವರ್ಣದ ಗೀರುಗಳಿರುವ ಹಳದಿ ಟರ್ಬನ್ ಧರಿಸಿದ ಮೋದಿ, ತಿಳಿಹಳದಿ ಕುರ್ತಾ, ಬಿಳಿ ಪೈಜಾಮಾ, ಮತ್ತು ನೆಹರು ಜಾಕೆಟ್‌ನೊಂದಿಗೆ ಕಾಣಿಸಿಕೊಂಡಿದ್ದರು.

12/12

2014ರಲ್ಲಿ ಪ್ರಧಾನಿಯಾಗಿ ತಮ್ಮ ಮೊದಲ ಸ್ವಾತಂತ್ರ್ಯ ದಿನದ ಭಾಷಣದ ವೇಳೆ ಮೋದಿ ಹಸಿರು ಟ್ರೇಲ್ ಇರುವ ಕೆಂಪು ಜೋಧ್‌ಪುರಿ ಬಂಧೇಜ್ ಟರ್ಬನ್ ಧರಿಸಿದ್ದರು. ಇದರ ಜತೆ ಆಫ್-ವೈಟ್ ಕುರ್ತಾದಲ್ಲಿ ಕಾಣಿಸಿಕೊಂಡಿದ್ದರು.