ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Independence Day Fashion 2025: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ- ಸಿಂಪಲ್ ಕುರ್ತಾಗಳಿಗೆ ಹೆಚ್ಚಿದ ಬೇಡಿಕೆ

Independence Day Fashion 2025: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ, ಇದೀಗ ಸಿಂಪಲ್ ಲುಕ್‌ ನೀಡುವ ಕುರ್ತಾಗಳಿಗೆ ಬೇಡಿಕೆ ಮೊದಲಿಗಿಂತ ಹೆಚ್ಚಾಗಿದೆ. ಹಾಗಾದಲ್ಲಿ, ಯಾವ್ಯಾವ ಬಗೆಯವು ಮಾರುಕಟ್ಟೆಗೆ ಕಾಲಿಟ್ಟಿವೆ. ಆಯ್ಕೆ ಹೇಗೆ? ಈ ಕುರಿತಂತೆ ಇಲ್ಲಿದೆ ಸಿಂಪಲ್ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್
1/5

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ, ಇದೀಗ ಸಿಂಪಲ್ ಕುರ್ತಾಗಳಿಗೆ ಮೊದಲಿಗಿಂತ ಡಿಮ್ಯಾಂಡ್ ಹೆಚ್ಚಾಗಿದೆ. ಮಹಿಳೆಯರು, ಮಕ್ಕಳು ಹಾಗೂ ಪುರುಷರು ಧರಿಸಬಹುದಾದ ಕಾಲರ್ ರಹಿತ ಹಾಗೂ ಸಹಿತ ಕುರ್ತಾಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗಿದೆ.

2/5

ಕುರ್ತಾಗಳ ಅಬ್ಬರ

ಈ ಸೀಸನ್‌ನಲ್ಲಿ ಬಿಡುಗಡೆಯಾಗಿರುವ ಸೆಲ್ವಾರ್ ಕುರ್ತಾ, ಧೋತಿ ಕುರ್ತಾ, ಪೈಜಾಮಾ ಕುರ್ತಾ, ಶಾರ್ಟ್‌ ಕುರ್ತಾ, ಶರ್ಟ್‌ ಕುರ್ತಾ, ಲಾಂಗ್ ಕುರ್ತಾಗಳಲ್ಲಿ ಕೊಂಚ ವಿನ್ಯಾಸಗಳು ಬದಲಾಗಿವೆ. ನೋಡಲು ಸಿಂಪಲ್ ಆಗಿ ಕಂಡರೂ ಕಟ್ಸ್‌ ಹಾಗೂ ಸ್ಟಿಚ್ಚಿಂಗ್ ಪ್ಯಾಟರ್ನ್ ಡಿಫರೆಂಟ್ ಆಗಿವೆ. ಇತರೇ ಡ್ರೆಸ್‌ಗಳಂತೆ ಇವುಗಳಲ್ಲೂ ಸ್ಲಿಮ್ ಫಿಟ್‌ನಲ್ಲಿ ದೊರೆಯುತ್ತಿವೆ. ಅಲ್ಲದೇ ಥ್ರೆಡ್ ಹಾಗೂ ಪ್ರಿಂಟ್ಸ್‌ನವು ಕೂಡ ಚಾಲ್ತಿಯಲ್ಲಿವೆ. ಇನ್ನು ಮೆಷಿನ್ ಥ್ರೆಡ್ ವರ್ಕ್‌ನವು ಕೈಗೆಟಕುವ ದರದಲ್ಲಿ ದೊರೆಯುತ್ತಿವೆ. ಆದರೆ ಹ್ಯಾಂಡ್ ವರ್ಕ್‌ನ ಕುರ್ತಾಗಳು ಕೊಂಚ ದುಬಾರಿ ದರ ಹೊಂದಿವೆ ಎನ್ನಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

3/5

ನಾನಾ ಫ್ಯಾಬ್ರಿಕ್‌ಗಳಲ್ಲಿ ಕುರ್ತಾಗಳು

ಈ ಮೊದಲು ಕೇವಲ ಕಾಟನ್ ಹಾಗೂ ಖಾದಿಯಲ್ಲಿ ದೊರೆಯುತ್ತಿದ್ದ ಕುರ್ತಾಗಳು ಇದೀಗ ಕ್ರೇಪ್, ಜಾರ್ಜೆಟ್ ಹಾಗೂ ಸೆಮಿ ಸಿಂಥೆಟಿಕ್ ಫ್ಯಾಬ್ರಿಕ್‌ನಲ್ಲೂ ಆಗಮಿಸಿವೆ. ಕಾಲರ್‌ನಲ್ಲಿ ಸಿಂಪಲ್ ಡಿಸೈನ್ ಹಾಗೂ ನೆಕ್ ಡಿಸೈನ್‌ನವು ಟ್ರೆಂಡಿಯಾಗಿವೆ.

4/5

ಮೆನ್ಸ್ ಕುರ್ತಾಗಳಲ್ಲಿ ವಿಭಿನ್ನತೆ

ಇನ್ನು, ಈ ಸೀಸನ್‌ನ ಪುರುಷರ ಕುರ್ತಾಗಳಲ್ಲಿ ಹೊಸ ವಿನ್ಯಾಸಗಳು ಬಂದಿವೆ. ಸೀದಾ ಸಾದಾ ಕುರ್ತಾಗಳ ಜಾಗಕ್ಕೆ ಇದೀಗ ಪಾಕೆಟ್ ಕುರ್ತಾ, ಪ್ರಿಂಟ್ಸ್ ಚೆಕ್ಸ್‌ ಕುರ್ತಾಗಳು ಯುವಕರನ್ನು ಆಕರ್ಷಿಸಿವೆ. ಇದರೊಂದಿಗೆ ಮೈಕ್ರೋ ಥ್ರೆಡ್‌ ವರ್ಕ್ ಇರುವಂತವು ವಿಶೇಷವಾಗಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ ಎನ್ನುತ್ತಾರೆ ಮಾರಾಟಗಾರರಾದ ಧವನ್.

5/5

ಟ್ರೆಂಡಿ ಕಲರ್‌ನ ಕುರ್ತಾಗಳಿವು

ಕ್ರೀಮ್ ಶೇಡ್, ವೈಟ್, ಸನ್ಕಲರ್, ಕೇಸರಿ, ಬ್ರಿಕ್ರೆಡ್, ಡಸ್ಟ್ ಕಲರ್ ಸೇರಿದಂತೆ ಸಾಕಷ್ಟು ಡಾರ್ಕ್ ಮತ್ತು ನ್ಯೂಡ್ ಕಲರ್‌ನಲ್ಲಿ ಬಂದಿರುವ ಕುರ್ತಾಗಳು ನಾರ್ಮಲ್ ಪ್ಯಾಂಟ್ ಮೇಲೂ ಕೂಡ ಧರಿಸುವಂತಹ ವಿನ್ಯಾಸದಲ್ಲಿಯೂ ಆಗಮಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಕುರ್ತಾ ಪ್ರಿಯರಿಗೆ ಒಂದಿಷ್ಟು ಸಲಹೆ

  • ಸ್ವಾತಂತ್ರ್ಯ ದಿನಾಚಾರಣೆಗೆ ಮ್ಯಾಚ್ ಆಗುವ ಕುರ್ತಾ ಡಿಸೈನ್ ಸೆಲೆಕ್ಟ್ ಮಾಡಿ.
  • ಗುಣಮಟ್ಟವುಳ್ಳ ಫ್ಯಾಬ್ರಿಕ್‌ನ ಕುರ್ತಾಗಳನ್ನು ಖರೀದಿಸಿ.
  • ಟ್ರೆಂಡ್‌ನಲ್ಲಿರುವ ವಿನ್ಯಾಸದ್ದನ್ನು ಆಯ್ಕೆ ಮಾಡಿ.
  • ಕುರ್ತಾಗೆ ಸೂಟ್ ಆಗುವ ಪ್ಯಾಂಟನ್ನು ಧರಿಸಿ.
  • ನಿರ್ವಹಣೆ ಬಗ್ಗೆ ಖರೀದಿಸುವಾಗಲೇ ತಿಳಿದುಕೊಳ್ಳಿ.

ಶೀಲಾ ಸಿ ಶೆಟ್ಟಿ

View all posts by this author