ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Samantha Ruth Prabhu: ಸಮಂತಾ-ನೀಡಿಮೋರ್ ಡೇಟಿಂಗ್ ಮಾಡುತ್ತಿರುವುದು ನಿಜವೇ? ಏನು ಹೇಳುತ್ತಿವೆ ಈ ಚಿತ್ರಗಳು?

ಚಲನಚಿತ್ರ ನಿರ್ಮಾಪಕ ರಾಜ್ ನಿಡಿಮೋರು ಜತೆ ನಟಿ ಸಮಂತಾ ರುತ್ ಪ್ರಭು ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವದಂತಿ ಕೆಲವು ತಿಂಗಳಿನಿಂದ ಹರಿದಾಡುತ್ತಿದ್ದರೂ ಈವರೆಗೆ ಯಾರೂ ಸ್ಪಷ್ಟನೆಯನ್ನು ನೀಡಿಲ್ಲ. ಆದರೆ ಇದೀಗ ಸಮಂತಾ ಹಂಚಿಕೊಂಡಿರುವ ಚಿತ್ರಗಳು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ರಾಜ್ ನಿಡಿಮೋರು ಜತೆಗಿರುವ ಚಿತ್ರಗಳನ್ನು ಸ್ಯಾಮ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

1/7

ನಟ ನಾಗಚೈತ್ಯನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ನಟಿ ಸಮಂತಾ ರುತ್ ಪ್ರಭು ಕಳೆದ ಕೆಲವು ತಿಂಗಳಿನಿಂದ ಚಲನಚಿತ್ರ ನಿರ್ಮಾಪಕ ರಾಜ್ ನಿಡಿಮೋರು ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವದಂತಿ ಹುಟ್ಟಿಕೊಂಡಿತ್ತು. ಇದಕ್ಕೆ ಪುಷ್ಟಿ ನೀಡಿದ್ದು ಅವರಿಬ್ಬರೂ ಒಟ್ಟಿಗೆ ಇರುವ ಚಿತ್ರಗಳು.

2/7

ಆಗಾಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರಗಳನ್ನು ಹಂಚಿಕೊಳ್ಳುವ ನಟಿ ಸ್ಯಾಮ್ ಇತ್ತೀಚೆಗೆ ಹೆಚ್ಚಾಗಿ ಚಲನಚಿತ್ರ ನಿರ್ಮಾಪಕ ರಾಜ್ ನಿಡಿಮೋರು ಜತೆ ಇರುವ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಇದು ಅವರಿಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

3/7

ಇದೀಗ ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಾಜ್ ನಿಡಿಮೋರು ಜತೆಗಿರುವ ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮಂಗಳವಾರ ಅವರು ಮಿಚಿಗನ್‌ನ ಡೆಟ್ರಾಯಿಟ್‌ ಪ್ರವಾಸದ ಹಲವಾರು ಚಿತ್ರಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಅಲ್ಲಿ ಅವರು ತೆಲುಗು ಅಸೋಸಿಯೇಷನ್ ​​ಆಫ್ ನಾರ್ತ್ ಅಮೆರಿಕಾ (TANA) 2025ರಲ್ಲಿ ಪಾಲ್ಗೊಂಡಿದ್ದರು.

4/7

ಈ ಚಿತ್ರದಲ್ಲಿ ಹೆಚ್ಚು ಹೈಲೈಟ್ ಆಗಿರುವುದು ಸಮಂತಾ ಮತ್ತು ರಾಜ್ ನಿಡಿಮೋರು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿರುವುದು. ಇದು ಅವರ ಡೇಟಿಂಗ್ ವದಂತಿಯನ್ನು ಇನ್ನಷ್ಟು ಹೆಚ್ಚು ಮಾಡುವಂತಿದೆ. ಅದರಲ್ಲೂ ಒಂದು ಫೋಟೊದಲ್ಲಿ ರಾಜ್ ಮತ್ತು ಸಮಂತಾ ಜೋಡಿಯು ಒಟ್ಟಿಗೆ ನಡೆಯುವಾಗ ಪರಸ್ಪರ ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸುತ್ತಿರುವಂತೆ ಕಾಣುತ್ತಿದೆ. ಈ ಚಿತ್ರದಲ್ಲಿ ಸಮಂತಾ ದೊಡ್ಡ ಕಂದು ಬಣ್ಣದ ಸ್ವೆಟ್‌ಶರ್ಟ್ ಮತ್ತು ರಿಲ್ಯಾಕ್ಸ್ಡ್ ಡೆನಿಮ್‌ನಲ್ಲಿ ಸ್ಟೈಲಿಶ್ ಆಗಿ ಮಿಂಚಿದ್ದು, ರಾಜ್ ನೇವಿ ಜಾಕೆಟ್, ಜೀನ್ಸ್ ಮತ್ತು ನಿಯಾನ್ ಸ್ನೀಕರ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

5/7

ಇನ್ನೊಂದು ಚಿತ್ರದಲ್ಲಿ ಸಮಂತಾ ಮತ್ತು ರಾಜ್ ನಿಡಿಮೋರು ರೆಸ್ಟೋರೆಂಟ್‌ನಲ್ಲಿ ಅಕ್ಕಪಕ್ಕದಲ್ಲಿ ಕುಳಿತು ಸ್ನೇಹಿತರೊಂದಿಗೆ ಊಟ ಮಾಡುತ್ತಿದ್ದಾರೆ. ಮತ್ತೊಂದು ಫೋಟೊದಲ್ಲಿ ಸಮಂತಾ ಡಿಸೈನರ್ ಕ್ರೇಶ ಬಜಾಜ್ ಅವರ ಚಿನ್ನದ ಮೇಳದಲ್ಲಿ ಕಾಣಿಸಿಕೊಂಡಿದ್ದು, ಇನ್ನೊಂದರಲ್ಲಿ ಕೆಫೆಯಲ್ಲಿ ಒಬ್ಬಂಟಿಯಾಗಿ ಕುಳಿತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕೊನೆಯ ಫೋಟೊದಲ್ಲಿ ಸಮಂತಾ ಮುದ್ದಾದ ನಾಯಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

6/7

ಈ ಚಿತ್ರ ಸರಣಿಗೆ "ಡೆಟ್ರಾಯಿಟ್" ಎಂದು ಶೀರ್ಷಿಕೆ ನೀಡಿರುವ ಸಮಂತಾ ಅವರ ಫೋಟೊಗಳನ್ನು ನೋಡಿ ಅವರ ಸಾಕಷ್ಟು ಅಭಿಮಾನಿಗಳು ಕಾಮೆಂಟ್ ಕೂಡ ಮಾಡಿದ್ದಾರೆ. ಕೆಲವರು ಇದು ನಿಮ್ಮ ಪ್ರೀತಿಯ ಅಧಿಕೃತ ಚಿತ್ರಗಳೇ ಎಂದು ಪ್ರಶ್ನಿಸಿದ್ದರೆ, ಇನ್ನು ಕೆಲವರು ಕೊನೆಗೂ ನಿಮ್ಮ ಪ್ರೀತಿಯನ್ನು ಕಂಡುಕೊಂಡಿರಿ... ನಿಮಗಾಗಿ ಸಂತೋಷವಾಗಿದೆ ಎಂದು ಹೇಳಿದ್ದಾರೆ.

7/7

ಸಮಂತಾ ಮತ್ತು ರಾಜ್ ವೆಬ್ ಸರಣಿ ʼದಿ ಫ್ಯಾಮಿಲಿ ಮ್ಯಾನ್ʼ ಮತ್ತು ʼಸಿಟಾಡೆಲ್: ಹನಿ ಬನಿʼಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇವರಿಬ್ಬರು ಡೇಟಿಂಗ್ ಮಾಡುತ್ತಿರುವ ಬಗ್ಗೆ ಯಾರೂ ದೃಢೀಕರಿಸಿಲ್ಲ. ಇಬ್ಬರೂ ಇದನ್ನು ನಿರಾಕರಿಸಿಯೂ ಇಲ್ಲ. ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author