ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2026ರ ಸಂಕ್ರಾಂತಿಗೆ ದಕ್ಷಿಣ ಭಾರತದಲ್ಲಿ ಸಿನಿಮಾ ಹಬ್ಬ; ಒಂದು ವಾರದಲ್ಲಿ 7 ಸಿನಿಮಾಗಳು ತೆರೆಗೆ, ನಿಮ್ಮ ಆಯ್ಕೆ ಯಾವುದು?

ಈ ಸಲ 2026ರ ಸಂಕ್ರಾಂತಿ/ಪೊಂಗಲ್‌ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ಸಿನಿಮಾ ಹಂಗಾಮವೇ ನಡೆಯಲಿದೆ. ಅದರಲ್ಲೂ ಮುಖ್ಯವಾಗಿ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾಗಳು ಸಾಲುಗಟ್ಟಿ ತೆರೆಗೆ ಬರಲಿವೆ. ತಮಿಳಿನಲ್ಲಿ ಎರಡು ಮೇಜರ್‌ ಸಿನಿಮಾಗಳು ರಿಲೀಸ್‌ ಆದರೆ ತೆಲುಗಿನಲಿ 5 ಸಿನಿಮಾಗಳು ಒಂದಾದ ಮೇಲೊಂದು ತೆರೆಗೆ ಬರಲಿವೆ. ಈ ಏಳು ಚಿತ್ರಗಳಲ್ಲಿ ಯಾವ ಸಿನಿಮಾಗೆ ಪ್ರೇಕ್ಷಕರ ಪ್ರೀತಿ ಸಿಗಲಿದೆ ಎಂಬುದನ್ನು ಕಾದುನೋಡಬೇಕು.

1/7

ಜನ ನಾಯಗನ್‌ (Jana Nayagan) ಜನವರಿ 9

ತಮಿಳಿನ 'ಜನ ನಾಯಗನ್' ಒಂದು ರಾಜಕೀಯ ಹಿನ್ನೆಲೆಯುಳ್ಳ ಸಿನಿಮಾವಾಗಿದ್ದು, ದಳಪತಿ ವಿಜಯ್ ಅವರ ಕೊನೆಯ ಸಿನಿಮಾವೂ ಹೌದು. ಹಬ್ಬದ ರಜೆಯಲ್ಲಿ ಪೊಲಿಟಿಕಲ್‌ ಥ್ರಿಲ್ಲರ್‌ ಇಷ್ಟಪಡುವವರಿಗೆ ಈ ಸಿನಿಮಾ ಉತ್ತಮ ಆಯ್ಕೆ.

2/7

ದಿ ರಾಜಾ ಸಾಬ್ (The Raja Saab) ಜನವರಿ 9

ಪ್ರಭಾಸ್ ನಟನೆಯ ದಿ ರಾಜಾ ಸಾಬ್ ಸಿನಿಮಾ ಹಾರರ್-ಕಾಮಿಡಿ ಶೈಲಿಯಲ್ಲಿದೆ. ಮಾರುತಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ವಿಭಿನ್ನ ವಿಂಟೇಜ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

3/7

ಪರಾಶಕ್ತಿ (Parasakthi) ಜನವರಿ 10

ಸಂಕ್ರಾಂತಿ ರೇಸ್‌ನಲ್ಲಿ ಕುತೂಹಲ ಮೂಡಿಸಿರುವ ತಮಿಳಿನ ಪರಾಶಕ್ತಿ ಸಿನಿಮಾವು 'ಜನ ನಾಯಗನ್'ಗೆ ದೊಡ್ಡ ಪೈಪೋಟಿ ನೀಡಲಿದೆ ಎಂಬ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಶಿವಕಾರ್ತಿಕೇಯನ್‌, ರವಿ ಮೋಹನ್‌, ಅಥರ್ವ ಮತ್ತು ಶ್ರೀಲೀಲಾ ಮುಖ್ಯ ಭೂಮಿಕೆಯಲ್ಲಿದ್ದಾರೆ.

4/7

ಮನ ಶಂಕರ ವರ ಪ್ರಸಾದ್ ಗಾರು (Mana Shankara Vara Prasad Garu) ಜನವರಿ 12

ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಮನ ಶಂಕರ ವರ ಪ್ರಸಾದ್ ಗಾರು ಸಿನಿಮಾವು ಭಾವನಾತ್ಮಕ ಮತ್ತು ಕೌಟುಂಬಿಕ ಕಥಾಹಂದರವನ್ನು ಹೊಂದಿದೆ ಎನ್ನಲಾಗಿದೆ. ಅನಿಲ್‌ ರವಿಪುಡಿ ಇದರ ನಿರ್ದೇಶಕರು.

5/7

ಭರ್ತ ಮಹಾಶಯುಲಕು ವಿಜ್ಞಪ್ತಿ (Bhartha Mahasayulaki Wignyapthi) ಜನವರಿ 13

ತೆಲುಗು ನಟ ರವಿ ತೇಜ ಮತ್ತು ನಿರ್ದೇಶಕ ಕಿಶೋರ್ ತಿರುಮಲ ಕಾಂಬಿನೇಷನ್ ಸಿನಿಮಾ ಭರ್ತ ಮಹಾಶಯುಲಕು ವಿಜ್ಞಪ್ತಿ ಮೇಲೆ ಜಾಸ್ತಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ರವಿ ತೇಜಗೆ ಈ ಸಿನಿಮಾ ಗೆಲುವು ತುಂಬಾ ಮಹತ್ವದ್ದಾಗಿದೆ.

6/7

ಅನಗನಗಾ ಓಕ ರಾಜು (Anaganaga Oka Raju) ಜನವರಿ 14

ನವೀನ್ ಪೋಲಿಶೆಟ್ಟಿ, ಮೀನಾಕ್ಷಿ ಚೌಧರಿ ಅಭಿನಯದ ಅನಗನಗಾ ಓಕ ರಾಜು ಚಿತ್ರವು ಪಕ್ಕಾ ಕಾಮಿಡಿ ಎಂಟರ್ಟೈನರ್ ಆಗಿದ್ದು, ಈಗಾಗಲೇ ಪ್ರೋಮೋ, ಪೋಸ್ಟರ್‌ಗಳಿಂದ ಈ ಸಿನಿಮಾ ಎಲ್ಲರ ಗಮನಸೆಳೆದಿದೆ.

7/7

ನಾರಿ ನಾರಿ ನಡುಮ ಮುರಾರಿ (Nari Nari Naduma Murari) ಜನವರಿ 15

ಹಳೆಯ ಹಿಟ್ ಸಿನಿಮಾದ ಶೀರ್ಷಿಕೆಯನ್ನೇ ಹೊಂದಿರುವ ನಾರಿ ನಾರಿ ನಡುಮ ಮುರಾರಿ ಚಿತ್ರದಲ್ಲಿ ಶರ್ವಾನಂದ್‌ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.