Jewel Fashion 2025: ಸೀಸನ್ನಲ್ಲಿ ಟ್ರೆಂಡಿಯಾದ ವೈವಿಧ್ಯಮಯ ಪರ್ಲ್ ನೆಕ್ಲೇಸ್ಗಳಿವು
Jewel Fashion 2025: ಆಭರಣ ಲೋಕದಲ್ಲಿ ನಾನಾ ಬಗೆಯ ಪರ್ಲ್ ನೆಕ್ಲೇಸ್ಗಳು ಆಗಮಿಸಿವೆ. ಅವುಗಳಲ್ಲಿ 4 ವಿನ್ಯಾಸದ ಪರ್ಲ್ ಆಭರಣಗಳು ಅತಿ ಹೆಚ್ಚು ಟ್ರೆಂಡ್ನಲ್ಲಿವೆ. ಅವು ಯಾವುವು? ಸ್ಟೈಲಿಂಗ್ ಹೇಗೆ? ಈ ಕುರಿತಂತೆ ಜ್ಯುವೆಲರಿ ಡಿಸೈನರ್ಗಳು ವಿವರಿಸಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್


ಆಭರಣ ಲೋಕದಲ್ಲಿ ನಾನಾ ಬಗೆಯ ಮುತ್ತಿನ ಆಭರಣಗಳು ಕಾಲಿಟ್ಟಿದ್ದು, ಅವುಗಳಲ್ಲಿ 4 ಬಗೆಯ ಮುತ್ತಿನ ನೆಕ್ಲೇಸ್ಗಳು ಜ್ಯುವೆಲ್ ಪ್ರಿಯರ ಮನ ಗೆದ್ದಿವೆ. ಕುತ್ತಿಗೆಗೆ ಟೈಟಾಗಿ ಫಿಟ್ ಆಗಿರುವಂತೆ ಕಾಣುವ ಈ ಪರ್ಲ್ ಚೋಕರ್ಸ್ ಎಲ್ಲಾ ಬಗೆಯ ಎಥ್ನಿಕ್ ಔಟ್ಫಿಟ್ಗಳಿಗೆ ಹೇಳಿ ಮಾಡಿಸಿದಂತೆ ಕಾಣುತ್ತವೆ. ಮಧ್ಯ ಪೆಂಡೆಂಟ್ ಗಳಿರುತ್ತವೆ. ಅದರಲ್ಲೂ ಫೆಸ್ಟಿವ್ ಸೀಸನ್ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಟ್ರೆಡಿಷನಲ್ ಪೆಂಡೆಂಟ್ ಜತೆ ಇವು ದೊರೆಯುತ್ತಿವೆ. ಬಂಗಾರ ಮಾತ್ರವಲ್ಲ, ವನ್ ಗ್ರಾಮ್ ಗೋಲ್ಡ್ನಲ್ಲೂ ಇವು ಬೇಡಿಕೆ ಹೆಚ್ಚಿಸಿಕೊಂಡಿವೆ.

ರಾಯಲ್ ಪರ್ಲ್ ನೆಕ್ಲೇಸ್
ಪರ್ಲ್ ಕ್ವೀನ್ ಲೇಯರ್ ನೇಕ್ಲೇಸ್ ಮೊದಲಿನಿಂದಲೂ ಟ್ರೆಂಡಿಯಾಗಿರುವ ಜ್ಯುವೆಲರಿಗಳಲ್ಲೊಂದು. ರಾಯಲ್ ಫ್ಯಾಮಿಲಿಯ ರಾಯಲ್ ಡಿಸೈನ್ ಇದು ಎಂದರೂ ಅತಿಶಯೋಕ್ತಿಯಾಗದು. ಯಾಕೆಂದರೇ, ಲಂಡನ್ ಕ್ವೀನ್ ಎಲಿಜಬೆತ್ ಆಲ್ ಟೈಮ್ ಫೇವರೇಟ್ ಪರ್ಲ್ ಹಾರ ಇದಾಗಿತ್ತು. ಈ ವಿನ್ಯಾಸ ಎವರ್ಗ್ರೀನ್ ಪರ್ಲ್ ಜ್ಯುವೆಲರಿಯ ಲಿಸ್ಟ್ನಲ್ಲಿ ಇಂದಿಗೂ ಇದೆ.

ಲೇಯರ್ ಪರ್ಲ್ ನೆಕ್ಲೇಸ್
ಇವುಗಳಲ್ಲಿ, ಕುತ್ತಿಗೆಗೆ ಟೈಟಾಗಿ ಕೂರುವಂತಹ ಪರ್ಲ್ ನೆಕ್ಲೇಸ್/ಹಾರಗಳು ಹೆಚ್ಚು ಟ್ರೆಂಡಿಯಾಗಿವೆ. ಇನ್ನು, ಇಂಡೋ-ವೆಸ್ಟರ್ನ್ ಲುಕ್ಗೆ ಸಾಥ್ ನೀಡುವ ಸ್ವರೋಸ್ಕಿ ಹಾಗೂ ಹೈದ್ರಾಬಾದ್ನ ನಾನಾ ಬಗೆಯ ಮುತ್ತಿನ ಹಾರಗಳು ಇವುಗಳಲ್ಲಿ ಸೇರಿವೆ. ಎಲ್ಲಾ ಬಗೆಯ ಔಟ್ಫಿಟ್ ಹಾಗೂ ಸೀರೆಗಳಿಗೂ ಇವು ಮ್ಯಾಚ್ ಆಗುತ್ತವೆ ಎನ್ನುತ್ತಾರೆ ಜ್ಯುವೆಲರಿ ಡಿಸೈನರ್ಸ್.

ಪರ್ಲ್ಸ್ ಲಾಂಗ್ ಹಾರ
ಕಂಪ್ಲೀಟ್ ಎಥ್ನಿಕ್ ಲುಕ್ ನೀಡುವ ಬಿಗ್ ಪರ್ಲ್ಗಳಿರುವಂತಹ ಮುತ್ತಿನ ಲಾಂಗ್ ನೆಕ್ಲೇಸ್/ಹಾರಗಳು ಇಂದು ವಿವಾಹಿತ ಮಹಿಳೆಯರ ಜ್ಯುವೆಲರಿ ಫ್ಯಾಷನ್ನಲ್ಲಿ ಸೇರಿವೆ. ಸೀರೆ ಹಾಗೂ ಎಥ್ನಿಕ್ ಉಡುಪುಗಳಿಗೆ ಮ್ಯಾಚ್ ಆಗುವ ಇವು ಭಾರಿ ಗಾತ್ರದ ಪೆಂಡೆಂಟ್ನೊಂದಿದಿಗೆ ಧರಿಸುವುದು ಕಾಮನ್ ಆಗಿದೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್.

ಪರ್ಲ್ ಜ್ಯುವೆಲರಿ ಪ್ರಿಯರಿಗೆ ಟಿಪ್ಸ್
- ಇತರೇ ಡಿಸೈನ್ನ ಜ್ಯುವೆಲರಿಗಳೊಂದಿಗೆ ಮಿಕ್ಸ್ ಮಾಡಿ ಇರಿಸಬೇಡಿ.
- ಪರ್ಲ್ ನೆಕ್ಲೇಸ್ಗಳು ಇಂಡೋ-ವೆಸ್ಟರ್ನ್ ಔಟ್ಫಿಟ್ಗೂ ಮ್ಯಾಚ್ ಆಗುತ್ತವೆ.
- ಪರ್ಲ್ನಲ್ಲೂ ನಾನಾ ಬಗೆಯವು ಲಭ್ಯ. ಕೇಳಿ, ತಿಳಿದು ಖರೀದಿಸಿ.