ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kingdom Movie: ʼಕಿಂಗ್‌ಡಮ್ʼ ನಟ ವಿಜಯ್ ದೇವರಕೊಂಡ ಸಿನಿಮಾ ಕೆರಿಯರ್‌ಗೆ ಬಿಗ್ ಸಕ್ಸಸ್ ನೀಡುತ್ತಾ? ಫ್ಯಾನ್ಸ್‌ ಏನಂದ್ರು?

ʼಅರ್ಜುನ್ ರೆಡ್ಡಿʼ, ʼಗೀತಾ ಗೋವಿಂದಂʼ ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ವಿಜಯ್ ದೇವರಕೊಂಡ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಅವರ ಅಭಿನಯದ ʼಕಿಂಗ್‌ಡಮ್ʼ ಚಿತ್ರ ಇದೀಗ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಸ್ಪೈ ಸಸ್ಪನ್ಸ್ ಕಥೆಯಾದರಿತ ಈ ಸಿನಿಮಾ ನಿರೀಕ್ಷೆ ಹುಟ್ಟಿಸಿದ್ದು, ನಟ ವಿಜಯ್‌ಗೆ ದೊಡ್ಡ ಸಕ್ಸಸ್ ಸಿಗುವ ನಿರೀಕ್ಷೆ ಇದೆ.

Kingdom
1/5

ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ವಿಜಯ್ ದೇವರಕೊಂಡ ಅಭಿನಯದ ʼಡಿಯರ್ ಕಾಮ್ರೆಡ್‌ʼ, ʼದಿ ಫ್ಯಾಮಿಲಿ ಸ್ಟಾರ್ʼ, ʼಲೈಗರ್‌ʼ ಮತ್ತಿತರ ಸಿನಿಮಾಗಳು ಫ್ಲಾಪ್ ಆಗಿದ್ದು, ದೊಡ್ಡ ಮಟ್ಟದ ಸಕ್ಸಸ್ ಸಿಕ್ಕಿರಲಿಲ್ಲ. ʼಕಲ್ಕಿ2898 ಎಡಿʼ ಸಿನಿಮಾದಲ್ಲಿ ಸಣ್ಣ ಪಾತ್ರದ ಮೂಲಕ ನಟ ವಿಜಯ್ ದೇವರಕೊಂಡ ಹೈಲೆಟ್ ಆದ ಬಳಿಕ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಇದೀಗ ʼಕಿಂಗ್‌ಡಮ್‌ʼ ಸಿನಿಮಾ ಜು. 31ರಂದು ರಿಲೀಸ್ ಆಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸುದ್ದಿ ಮಾಡುತ್ತಿದೆ.

2/5

ವಿಜಯ್ ದೇವರಕೊಂಡ ʼಗೀತಾ ಗೋವಿದಂʼ ಸಿನಿಮಾದ ಸಕ್ಸಸ್‌ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಇಮೇಜ್ ಹೊಂದಿದ್ದಾರೆ. ಆದರೆ ಇತ್ತೀಚೆಗೆ ತೆರೆಕಂಡ ಕೆಲವು ಸಿನಿಮಾಗಳು ಅವರಿಗೆ ದೊಡ್ಡ ಹೊಡೆತ ನೀಡಿದ್ದವು. ಇದೀಗ ʼಕಿಂಗ್‌ಡಮ್ʼ ಸಿನಿಮಾದಲ್ಲಿ ಗೂಢಚಾರನ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ.

3/5

ʼಕಿಂಗ್‌ಡಮ್‌ʼ ಸಿನಿಮಾ ಬಗ್ಗೆ ಪ್ರೇಕ್ಷಕರು ಸೋಶಿಯಲ್ ಮಿಡಿಯಾದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ʼಕಿಂಗ್‌ಡಮ್ʼನಲ್ಲಿ ವಿಜಯ್ ಆ್ಯಕ್ಟಿಂಗ್ ಸೂಪರ್ ಆಗಿದೆ. ಕೆಲವು ದೃಶ್ಯಗಳು ಕುತೂಹಲ ಹುಟ್ಟಿಸುತ್ತವೆ. ಮೂವಿ ಸೂಪರ್ ಇದೆ ಎಂದು ಎಕ್ಸ್ ಬಳಕೆದಾರರೊಬ್ಬರು ಕಮೆಂಟ್ ಹಾಕಿದ್ದಾರೆ. ಮತ್ತೊಬ್ಬ ಬಳಕೆದಾರರು ಭಾರತೀಯ ಸಿನಿಮಾದ ಮಾಸ್ಟರ್‌ಪೀಸ್, ಸಿನಿಮಾ ರಾಜ್ಯಭಾರಕ್ಕೆ ಕಂಬ್ಯಾಕ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

4/5

ಅನಿರುದ್ಧ್ ರವಿಚಂದರ್‌ ಹಿನ್ನೆಲೆ ಸಂಗೀತ ನೀಡಿದ್ದು ಪ್ರೇಕ್ಷಕರ ಮನಗೆದ್ದಿದೆ. ಒಟ್ಟಾರೆಯಾಗಿ ನಟ ವಿಜಯ್ ದೇವರಕೊಂಡ ಅಭಿನಯದ ʼಕಿಂಗ್‌ಡಮ್ʼ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಹಲವರು ಸಿನಿಮಾದ ಮೊದಲಾರ್ಧವನ್ನು ಶ್ಲಾಘಿಸಿದರೆ, ಇನ್ನು ಕೆಲವರು ದ್ವಿತಿಯಾರ್ಧವನ್ನು ಸಾಧಾರಣ ಎಂದಿದ್ದಾರೆ.

5/5

ʼಕಿಂಗ್‌ಡಮ್ʼ ಸಿನಿಮಾವನ್ನು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಹಾಗೂ ಫಾರ್ಚೂನ್ ಫೋರ್ ಸಿನಿಮಾಸ್ ಅಡಿಯಲ್ಲಿ ನಾಗವಂಶಿ ಎಸ್. ಮತ್ತು ಸಾಯಿ ಸೌಜನ್ಯ ನಿರ್ಮಿಸಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್‌ನ ಈ ಸಿನಿಮಾದಲ್ಲಿ ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ. ವಿಜಯ್ ಅವರ ಸಹೋದರನ ಪಾತ್ರದಲ್ಲಿರುವ ಸತ್ಯದೇವ್ ಅದ್ಭುತವಾಗಿ ಅಭಿನಯಿಸಿದ್ದಾರೆ.