ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Lehenga Fashion 2026: ವೆಡ್ಡಿಂಗ್‌ ಫ್ಯಾಷನ್‌ಗೆ ಲಗ್ಗೆ ಇಟ್ಟ ನೆಟ್‌ ಲೆಹೆಂಗಾ

ಈ ಬಾರಿಯ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಪಾಸ್ಟೆಲ್‌ ಶೇಡ್‌ನ ನೆಟ್‌ ಲೆಹೆಂಗಾ ಸೂಪರ್‌ ಹಿಟ್‌ ಆಗಿವೆ. ಇದಕ್ಕೆ ಪೂರಕ ಎಂಬಂತೆ ಗಾಯಕಿ ಆಕೃತಿ ಕಕ್ಕರ್‌ ಧರಿಸಿದ ಈ ಲೆಹೆಂಗಾ ಇದೀಗ ವೈರಲ್‌ ಆಗಿದೆ. ಇದ್ಯಾವ ಬಗೆಯ ಲೆಹೆಂಗಾ. ಇಲ್ಲಿದೆ ವಿವರ.

ಚಿತ್ರಗಳು: ಆಕೃತಿ ಕಕ್ಕರ್‌, ಗಾಯಕಿ., ಫೋಟೋಗ್ರಾಫಿ: ವಿ ಕ್ಯಾಪ್ಚರ್‌ ಕಲೆಕ್ಟಿವ್ಸ್
1/5

ಈ ಬಾರಿಯ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಪಾಸ್ಟೆಲ್‌ ಶೇಡ್‌ನ ನೆಟ್‌ ಲೆಹೆಂಗಾಗಳು ಹಿಟ್‌ ಆಗಿವೆ. ಇದಕ್ಕೆ ಪೂರಕ ಎಂಬಂತೆ, ಗಾಯಕಿ ಆಕೃತಿ ಕಕ್ಕರ್‌ ತನ್ನ ಸಹೋದರಿ ಮದುವೆಯ ಸಮಾರಂಭದಲ್ಲಿ ಧರಿಸಿದ್ದ ಬ್ಯೂಟಿಫುಲ್‌ ಪಾಸ್ಟೆಲ್‌ ಶೇಡ್‌ನ ನೆಟ್‌ ಲೆಹೆಂಗಾ, ಈಗಾಗಲೇ ಈ ಜನರೇಷನ್‌ ಹುಡುಗಿಯರನ್ನು ಮದುವೆ ಮನೆಗಳಲ್ಲಿ ಸವಾರಿ ಮಾಡತೊಡಗಿದೆ.

2/5

ವೈರಲ್‌ ಆಯ್ತು ಆಕೃತಿ ಕಕ್ಕರ್‌ ನೆಟ್‌ ಲೆಹೆಂಗಾ

ಅಕೃತಿ ಕಾಕರ್‌ ಮೂಲತಃ ಸಿಂಗರ್‌ ಜತೆ ಜತೆಗೆ ಫ್ಯಾಷನ್‌ ಇನ್‌ಫ್ಲೂಯೆನ್ಸರ್‌, ತನ್ನ ಔಟ್‌ಫಿಟ್‌ಗಳ ಮೂಲಕವೇ ಫಾಲೋವರ್‌ಗಳನ್ನು ಸೆಳೆದಿರುವವರು. ಇದೀಗ ಅವರ ಈ ನೆಟ್‌ ಲೆಹೆಂಗಾ ಇದೀಗ ವೈರಲ್‌ ಆಗಿದೆ ಹಾಗೂ ಅದೇ ರೀತಿಯ ಲೆಹೆಂಗಾಗಳು ಮದುವೆ ಮನೆಯ ಸಂಭ್ರಮದಲ್ಲಿ ಕಾಣಿಸತೊಡಗಿವೆ ಎಂದಿದ್ದಾರೆ ಫ್ಯಾಷನ್‌ ವಿಶ್ಲೇಷಕರು.

3/5

ಏನಿದು ನೆಟ್‌ ಲೆಹೆಂಗಾ?

ಅಂದಹಾಗೆ, ನೆಟ್‌ ಲೆಹೆಂಗಾಗಳು ಎರಡು ಲೇಯರ್‌ ಹೊಂದಿರುತ್ತವೆ. ಸೂಕ್ಷ್ಮ ಫ್ಯಾಬ್ರಿಕ್‌ನ ಇವು ಸಿಂಪಲ್‌ ಡಿಸೈನ್‌ನಲ್ಲಿ ದೊರೆಯುತ್ತಿವೆ. ಕ್ರಾಪ್‌ ಟಾಪ್‌ನಂತಹ ಬ್ಲೌಸ್‌ನೊಂದಿಗೆ ಎ ಲೈನ್‌ ಲಾಂಗ್‌ ಸ್ಕರ್ಟ್‌ ಇಲ್ಲವೇ ಅಂಬ್ರೆಲ್ಲಾ ಕಟ್‌ನಲ್ಲಿ ಇವು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಸಾಫ್ಟ್ ಫ್ಯಾಬ್ರಿಕ್‌ ಆಗಿರುವುದರಿಂದ ಇವುಗಳಲ್ಲಿ ಹೆಚ್ಚೆನೂ ವಿನ್ಯಾಸ ಕಾಣ ಸಿಗದು. ಆದರೆ, ಧರಿಸಿದಾಗ ಅತ್ಯಾಕರ್ಷಕವಾಗಿ ಕಾಣಿಸುತ್ತವೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

4/5

ನೆಟ್‌ ಲೆಹೆಂಗಾ ಆಯ್ಕೆ ಹೇಗೆ?

  • ಉತ್ತಮ ಫ್ಯಾಬ್ರಿಕ್‌ ನೋಡಿ ಆಯ್ಕೆ ಮಾಡಿ.
  • ಪಾಸ್ಟೆಲ್‌ ಶೇಡ್‌ನವು ಟ್ರೆಂಡಿಯಾಗಿವೆ.
  • ಸಿಂಪಲ್‌ ಡಿಸೈನ್‌ಗೆ ಪ್ರಾಮುಖ್ಯತೆ ನೀಡಿ.
5/5
  • ಹೆಚ್ಚು ವಿನ್ಯಾಸದವನ್ನು ಚೂಸ್‌ ಮಾಡಬೇಡಿ.
  • ದುಪಟ್ಟಾವನ್ನು ಕೇಪ್‌ನಂತೆ ಧರಿಸಬಹುದು.

ಶೀಲಾ ಸಿ ಶೆಟ್ಟಿ

View all posts by this author