Aishwarya Shindogi: ಐಶ್ವರ್ಯಾ ಸಿಂಧೋಗಿ ಖರೀದಿಸಿದ ಹೊಸ ಕಾರು ಹೇಗಿದೆ?: ಇದರ ಬೆಲೆ ಎಷ್ಟು ಗೊತ್ತೇ?
Aishwarya Sindhogi New Car: ಐಶ್ವರ್ಯಾ ಹೊಚ್ಚ ಹೊಸ ಎಂಜಿ ಹೆಕ್ಟರ್ ಎಸ್‌ಯುವಿ (MG Hector SUV) ಖರೀದಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲೂ ಫುಲ್ ವೈರಲ್ ಆಗಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಐಶ್ವರ್ಯಾ ಸಿಂಧೋಗಿ ಇಂದು ಇಡೀ ಕರ್ನಾಟಕದ ಕ್ರಶ್ ಆಗಿದ್ದಾರೆ. ನಾಗಿಣಿ ಸೀರಿಯಲ್ ಮೂಲಕ ಫೇಮಸ್ ಆಗಿ ಬಳಿಕ ಬಿಗ್ ಬಾಸ್ ಮನೆಗೆ ಹೋಗಿದ್ದರು. ನಟ ಶಿಶಿರ್ ಶಾಸ್ತ್ರೀ ಜೊತೆ ಹೊಸ ಬ್ಯುಸಿನೆಸ್ ಕೂಡ ಶುರುಮಾಡಿರುವ ಐಶು ಈಗ ಸಖತ್ ಬ್ಯುಸಿಯಾಗಿದ್ದಾರೆ.
ಬಿಡುವಿನ ಸಮಯದಲ್ಲಿ ಐಶ್ವರ್ಯಾ ಅವರು ತಮ್ಮ ಕುಚುಕು ಸ್ನೇಹಿತರಾದ ಮೋಕ್ಷಿತಾ ಪೈ ಮತ್ತು ಶಿಶಿರ್ ಜೊತೆ ದೇಶ ವಿದೇಶ ಸುತ್ತುತ್ತಿದ್ದಾರೆ. ಈ ಮಧ್ಯೆ ಲಕ್ಷುರಿ ಕಾರು ಖರೀದಿಸಿ ಐಶ್ವರ್ಯ ಎಲ್ಲರ ಹುಬ್ಬೇರಿಸಿದ್ದಾರೆ.
ಹೌದು, ಐಶ್ವರ್ಯಾ ಸಿಂಧೋಗಿ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ದುಬಾರಿ ಬೆಲೆಯ ಕಾರನ್ನು ನಟಿ ಐಶ್ವರ್ಯ ಶಿಂಧೋಗಿ ಖರೀದಿ ಮಾಡಿದ್ದಾರೆ. ಹೊಚ್ಚ ಹೊಸ ಕಾರನ್ನು ಖರೀದಿ ಸಮಯದಲ್ಲಿ ಸ್ನೇಹಿತರಾದ ಮೋಕ್ಷಿತಾ ಪೈ ಹಾಗೂ ಶಿಶಿರ್ ಶಾಸ್ತ್ರೀ ಕೂಡ ಭಾಗಿಯಾಗಿದ್ದರು.
ಐಶ್ವರ್ಯಾ ಹೊಚ್ಚ ಹೊಸ ಎಂಜಿ ಹೆಕ್ಟರ್ ಎಸ್‌ಯುವಿ (MG Hector SUV) ಖರೀದಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲೂ ಫುಲ್ ವೈರಲ್ ಆಗಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
"ಒಂದು ದಿನ ನಾನು ನನ್ನ ತಂದೆಯ ಕಾರನ್ನು ತುಂಬಾ ಭಾರವಾದ ಮನಸ್ಸಿನಿಂದ, ಕಣ್ಣೀರು ಹಾಕುತ್ತ ಮಾರಾಟ ಮಾಡಿದೆ. ಆ ದಿನವೇ ನಾನು ಏನೇ ಆಗಲಿ, ಒಂದು ದಿನ ನಾನು ನನ್ನ ಸ್ವಂತ ಶ್ರಮದಿಂದ ಕಾರು ಖರೀದಿಸುವೆ ಎಂದು ನನಗೆ ನಾನೇ ಸವಾಲು ಹಾಕಿಕೊಂಡಿದ್ದೆ. 15.5.2025 ದಿನವೇ ಕಾರ್ ತಗೊಂಡೆ" ಎಂದು ನಟಿ ಐಶ್ವರ್ಯ ಶಿಂದೋಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಈ ಎಸ್‌ಯುವಿ ರೂ.14 ಲಕ್ಷದಿಂದ ರೂ.22.89 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 587 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ.