Mokshitha Pai: ಬ್ಲ್ಯಾಕ್ ಬ್ಯೂಟಿ ಮೋಕ್ಷಿ: ಕಪ್ಪು ಬಣ್ಣದ ಸೀರೆಯಲ್ಲಿ ಬಿಗ್ ಬಾಸ್ ಸುಂದರಿ
ಕಪ್ಪು ಬಣ್ಣದ ಸೀರೆ ಉಟ್ಟಿರುವ ಮೋಕ್ಷಿತಾ ಇದಕ್ಕೆ ಮ್ಯಾಚ್ ಆಗುವಂತಹ ಅದ್ಭುತವಾದ ಬ್ಲೌಸ್ ಹಾಕಿದ್ದಾರೆ. ಇದಕ್ಕೆ ಬಗೆಬಗೆಯ ಕಮೆಂಟ್ಗಳು ಬರುತ್ತಿದ್ದು, ನೀವು ಸಹಜ ಸುಂದರಿ, ಸೀರೆ ಮತ್ತು ಬ್ಲೌಸ್ ಎರಡೂ ಸಿಂಪಲ್ ಆಗಿ ಗ್ರ್ಯಾಂಡ್ ಆಗಿ ಕಾಣ್ತಾ ಇದ್ದೀರಿ ಎಂದರೆ ಮತ್ತೊಬ್ಬರು ನೀವು ಬಳ್ಳಿಯಂತೆ ಬಳುಕುತ್ತೀರಿ ನಿಮಗೆ ಯಾವ ಕಲರ್ ಸೀರೆ ಹಾಕಿದ್ರೂ ಚೆನ್ನಾಗಿ ಕಾಣುತ್ತದೆ ಎಂದು ಹೇಳಿದ್ದಾರೆ.

Mokshitha Pai

ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲೂ ಭಾಗವಹಿಸಿ, ಕನ್ನಡಿಗರ ಮನ ಗೆದ್ದಿದ್ದಾರೆ. ದೊಡ್ಮನೆಯೊಳಗೆ ತಮ್ಮ ಸೌಂದರ್ಯ, ಬೋಲ್ಡ್ ಆಗಿ ಆಟವಾಡುವ ರೀತಿ ಹಾಗೂ ನೇರವಾದ ಮಾತುಗಳಿಂದಲೇ ಜನರಿಗೆ ಇಷ್ಟವಾಗಿದ್ದರು. ಬಿಗ್ ಬಾಸ್ ಬಳಿಕ ನಟನೆಯಿಂದ ವಿರಾಮ ಪಡೆದಿರುವ ಇವರು ಸದ್ಯ ತಮ್ಮ ಫ್ರಿ ಟೈಮ್ ಎಂಜಾಯ್ ಮಾಡುತ್ತಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಮೋಕ್ಷಿತಾ ಪೈ ತಮ್ಮ ಗೆಳತಿ ಮಾನ್ಸಿ ಜೋಶಿ ಮದುವೆ, ಐಶ್ವರ್ಯಾ, ಶಿಶಿರ್ ಜೊತೆ ಟೆಂಪಲ್ ರನ್, ವಿವಿಧ ತಾಣಗಳಿಗೆ ಸ್ನೇಹಿತರ ಜೊತೆ ಟ್ರಾವೆಲ್ ಮಾಡುತ್ತಾ ಬ್ಯುಸಿಯಾಗಿ ಬಿಟ್ಟಿದ್ದಾರೆ. ಇತ್ತೀಚೆಷ್ಟೆ ಇವರು ವಿದೇಶಿ ಪ್ರವಾಸ ಕೂಡ ಮಾಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗರುವ ಮೋಕ್ಷಿತಾ, ಆಗಾಗ ಪ್ರವಾಸಕ್ಕೆ ತೆರಳಿದ ಪೋಟೋಗಳನ್ನು ತಮ್ಮ ಇನ್ಸ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೆ ಮೋಕ್ಷಿ ಅಕಾಶ ನೀಲಿ ಬಣ್ಣದ ಸಿಂಪಲ್ ಸಾರಿ ಉಟ್ಟು ಕೊರಳಿಗೆ ಚಿನ್ನ ಧರಿಸಿ ಫೋಟೋ ತೆಗೆಸಿಕೊಂಡಿದ್ದರು. ಇದೀಗ ಮತ್ತೊಂದು ಫೋಟೋ ವೈರಲ್ ಆಗುತ್ತಿದೆ.

ಕಪ್ಪು ಬಣ್ಣದ ಸೀರೆ ಉಟ್ಟಿರುವ ಮೋಕ್ಷಿತಾ ಇದಕ್ಕೆ ಮ್ಯಾಚ್ ಆಗುವಂತಹ ಅದ್ಭುತವಾದ ಬ್ಲೌಸ್ ಹಾಕಿದ್ದಾರೆ. ಇದಕ್ಕೆ ಬಗೆಬಗೆಯ ಕಮೆಂಟ್ಗಳು ಬರುತ್ತಿದ್ದು, ನೀವು ಸಹಜ ಸುಂದರಿ, ಸೀರೆ ಮತ್ತು ಬ್ಲೌಸ್ ಎರಡೂ ಸಿಂಪಲ್ ಆಗಿ ಗ್ರ್ಯಾಂಡ್ ಆಗಿ ಕಾಣ್ತಾ ಇದ್ದೀರಿ ಎಂದರೆ ಮತ್ತೊಬ್ಬರು ನೀವು ಬಳ್ಳಿಯಂತೆ ಬಳುಕುತ್ತೀರಿ ನಿಮಗೆ ಯಾವ ಕಲರ್ ಸೀರೆ ಹಾಕಿದ್ರೂ ಚೆನ್ನಾಗಿ ಕಾಣುತ್ತದೆ ಎಂದು ಹೇಳಿದ್ದಾರೆ.

ಬಿಗ್ಬಾಸ್ ನಂತರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿರುವ ಪಾರು ಆಗಾಗ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸುತ್ತಾರೆ. ಅಂದ ಹಾಗೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಮೋಕ್ಷಿತಾ ಪೈ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ.

ಈಗಾಗಲೇ ಮೋಕ್ಷಿತಾ ಪೈ ಅವರ ಹೊಸ ಸಿನಿಮಾ ಶೂಟಿಂಗ್ ಮುಕ್ತಾಯಗೊಂಡಿದೆ. ‘ಮಿಡಲ್ ಕ್ಲಾಸ್ ರಾಮಾಯಣ' ಎಂಬುದು ಸಿನಿಮಾ ಹೆಸರಾಗಿದ್ದು, ಈ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.