ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Monsoon Fashion 2025: ಮಾನ್ಸೂನ್ ಮಳೆ ಗಾಳಿಗೆ ಮರಳಿದ ಫ್ಯಾಷನ್ ಪ್ರಿಯರ ಟರ್ಟಲ್ ನೆಕ್ ಡ್ರೆಸ್

ಮಾನ್ಸೂನ್ ಸೀಸನ್‌ಗೆ ಮ್ಯಾಚ್ ಆಗುವಂತಹ ಮಿಕ್ಸ್ ಮ್ಯಾಚ್ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿರುವ ನಾನಾ ಬಗೆಯ ಟರ್ಟಲ್ ನೆಕ್ ಔಟ್‌ಫಿಟ್‌ಗಳು ಮಳೆಗಾಲದ ಫ್ಯಾಷನ್‌ಗೆ ಮರಳಿವೆ. ಯಾವ್ಯಾವ ಬಗೆಯವು ಈ ಸೀಸನ್‌ನಲ್ಲಿವೆ? ಆಯ್ಕೆ ಹೇಗೆ? ಈ ಎಲ್ಲದರ ಕುರಿತಂತೆ ಇಲ್ಲಿದೆ ವಿವರ.

ಚಿತ್ರ ಕೃಪೆ: ಪಿಕ್ಸೆಲ್
1/5

ಟರ್ಟಲ್ ನೆಕ್ ಡ್ರೆಸ್‌

ಈ ಬಾರಿಯ ಮಾನ್ಸೂನ್‌ಗೆ ವೈವಿಧ್ಯಮಯ ವಿನ್ಯಾಸದ ಟರ್ಟಲ್ ನೆಕ್ ಡ್ರೆಸ್‌ಗಳು ಮರಳಿವೆ. ಆದರೆ ನಾನಾ ಬಗೆಯ ಮಿಕ್ಸ್ ಮ್ಯಾಚ್ ಫ್ಯಾಷನ್‌ನಲ್ಲಿ ಕಾಣಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅದರಲ್ಲೂ ಲೈಟ್‌ವೇಟ್ ಫ್ಯಾಬ್ರಿಕ್‌ನಲ್ಲಿ ಬಂದಿವೆ. ಎಂದಿನಂತೆ ಫುಲ್‌ ಸ್ಲೀವ್ ಸ್ವೆಟರ್‌ ಸ್ಟೈಲ್‌ನ ಟೀ ಶರ್ಟ್, ಪುಲ್ಓವರ್, ಫ್ರಾಕ್, ಟಾಪ್ ಹಾಗೂ ಕ್ಯಾಶುವಲ್ ಉಡುಪುಗಳಲ್ಲಿ ಕಾಣಿಸಿಕೊಂಡಿವೆ.

2/5

ವೆಸ್ಟರ್ನ್ ಕಾನ್ಸೆಪ್ಟ್ ಔಟ್‌ಫಿಟ್

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಟರ್ಟಲ್ ನೆಕ್ ಡಿಸೈನರ್‌ವೇರ್‌ಗಳು ಇದೀಗ ಕಾರ್ಪೋರೇಟ್ ಕ್ಷೇತ್ರದವರನ್ನು ಅತಿ ಹೆಚ್ಚು ಆಕರ್ಷಿಸಿವೆ. ಇವು ಅಫಿಶಿಯಲ್ ಲುಕ್ ನೀಡುತ್ತವೆ. ಸಾಮಾನ್ಯ ಡ್ರೆಸ್‌ಗಳಂತೆ ಇವು ಕಾಣಿಸುವುದಿಲ್ಲ. ನೋಡಲು ವಿಭಿನ್ನ ಲುಕ್‌ ನೀಡುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಕ್ಯಾಶುವಲ್ ಧರಿಸುವವರಿಗೆ ಇವು ಹೇಳಿ ಮಾಡಿಸಿದ ಔಟ್‌ಫಿಟ್ ಎನ್ನಬಹುದು. ಇದನ್ನು ಬ್ಲೇಝರ್, ಕಾರ್ಡಿಗಾನ್ ಇಲ್ಲವೇ ಶ್ರಗ್ಸ್ ಜತೆಯಲ್ಲಿಯೂ ಧರಿಸಬಹುದು ಎನ್ನುತ್ತಾರೆ ಡಿಸೈನರ್ ರಾಕಿ ಧವನ್.

3/5

ಪರ್ಸನಾಲಿಟಿಗೆ ತಕ್ಕಂತಿರಲಿ ಟರ್ಟಲ್ ನೆಕ್‌ಡ್ರೆಸ್

ಉದ್ದ ಕತ್ತು ಇರುವವರಿಗೆ ಈ ನೆಕ್‌ಲೈನ್ ಸುಂದರವಾಗಿ ಕಾಣಿಸುತ್ತದೆ. ಕತ್ತು ಚಿಕ್ಕ ಇರುವವರಿಗೆ ಇದು ಸೂಟ್ ಆಗದು. ಇನ್ನು ಸೀಸನ್‌ಗೆ ತಕ್ಕಂತೆ ಶೇಡ್ಸ್ ಹಾಗೂ ಕಲರ್‌ಗಳನ್ನು ಆಯ್ಕೆ ಮಾಡಿದಲ್ಲಿ ಟ್ರೆಂಡಿಯಾಗಿಯೂ ಕಾಣಿಸಬಹುದು. ಇನ್ನು ಕ್ರಾಪ್ ಟಾಪ್‌ನವು ಕಾಲೇಜು ಹುಡುಗಿಯರಿಗೆ ಸೂಟ್ ಆಗುತ್ತವೆ. ಸ್ಲೀವ್ಲೆಸ್‌ ಟರ್ಟಲ್ ನೆಕ್ ಟಾಪ್ ಕಾರ್ಡಿಗಾನ್ ಇಲ್ಲವೇ ಬ್ಲೇಝರ್ ಜತೆ ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣಿಸುತ್ತವೆ. ಅಷ್ಟೇಕೆ! ಸ್ಟ್ರಾಪ್ ಡ್ರೆಸ್‌ ಅನ್ನು ಇದರ ಮೇಲೆ ಧರಿಸಬಹುದು ಎಂದು ಸ್ಟೈಲಿಸ್ಟ್ ಜೆನ್ ಟಿಪ್ಸ್‌ ನೀಡುತ್ತಾರೆ.

4/5

ಮಿಕ್ಸ್ ಮ್ಯಾಚ್ ಪರ್ಫೆಕ್ಟ್‌ ಆಗಿರಲಿ

ಇವನಿಂಗ್ ಸ್ಕರ್ಟ್ಸ್ ಅಥವಾ ಮಿನಿ ಸ್ಕರ್ಟ್ಸ್ ಜತೆಯೂ ಇವನ್ನು ಧರಿಸಬಹುದು. ಇದರ ಜತೆಗೆ ಹೈ ಹೀಲ್ಸ್ ಸಖತ್ ಮ್ಯಾಚ್ ಆಗುತ್ತದೆ. ಬ್ಯಾಗಿ ಸ್ವೆಟ್ ಪ್ಯಾಂಟ್ಸ್, ಸ್ಲಿಂಕಿ ಟರ್ಟಲ್ ನೆಕ್ ಟಾಪ್, ಕ್ಲಾಸಿಕ್ ಕೊಂಬೊ ಲುಕ್‌ ನೀಡುತ್ತವೆ. ಟೀನೇಜ್ ಹುಡುಗಿಯರಿಗೆ ಹಾಗೂ ವರ್ಕಿಂಗ್ ವುಮೆನ್‌ಗೆ, ಕಾರ್ಪೋರೇಟ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಇದು ಪರ್ಫೆಕ್ಟ್ ಡ್ರೆಸ್ ಕೋಡ್ ಎನ್ನುತ್ತಾರೆ ಡಿಸೈನರ್ ರೇಷ್ಮಾ. ಟರ್ಟಲ್ ನೆಕ್ ಔಟ್‌ಫಿಟ್ ಕಂಪ್ಲೀಟ್ ಕತ್ತನ್ನು ಆವರಿಸಿಕೊಳ್ಳುತ್ತದೆ. ಹಾಗಾಗಿ ಯಾವುದೇ ಆಕ್ಸೆಸರೀಸ್ ಧರಿಸುವುದು ಬೇಡ. ಆಕ್ಸೆಸರೀಸ್ ಧರಿಸಲೇ ಬೇಕಿದ್ದಲ್ಲಿ ಲಾಂಗ್‌ಚೈನ್ ಧರಿಸಬಹುದು ಎನ್ನುತ್ತಾರೆ ಫ್ಯಾಷನಿಸ್ಟಾ ಜಿಯಾ.

5/5

ಟರ್ಟಲ್ ನೆಕ್‌ ಪ್ರಿಯರಿಗೆ ಒಂದಿಷ್ಟು ಸಲಹೆ

  • ಉದ್ದ ಕತ್ತು ಇರುವವರು ಯಾವುದೇ ಕಲರ್‌ನದ್ದನ್ನು ಧರಿಸಬಹುದು.
  • ಫ್ರಿ ಹೇರ್‌ ಸ್ಟೈಲ್‌ಗಿಂತ ಪೋನಿಟೇಲ್ ಹಾಕಿದಲ್ಲಿ ಕ್ಲಾಸಿ ಲುಕ್ ಪಡೆಯಬಹುದು.
  • ಯಾವುದೇ ಲೇಯರ್ ಲುಕ್ ನೀಡುವ ಕೋಟ್, ಶ್ರಗ್ಸ್ ಇಲ್ಲವೇ ಬ್ಲೇಝರ್‌ ನೋಡಲು ಕ್ಲಾಸಿ ಲುಕ್ ನೀಡುತ್ತದೆ.

ಶೀಲಾ ಸಿ ಶೆಟ್ಟಿ

View all posts by this author