Namrata Shirodkar: ನಿಕ್ ಜೋನಾಸ್ ಮ್ಯೂಸಿಕ್ ಕನ್ಸರ್ಟ್ಗೆ ಮಹೇಶ್ ಬಾಬು ಪತ್ನಿ ಭಾಗಿ; ಅಪರೂಪ ಫೋಟೋಗಳು ಇಲ್ಲಿವೆ
ಬಾಲಿವುಡ್ ನಟಿ (Bollywood actress) ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಪತಿ, ಗಾಯಕ ನಿಕ್ ಜೋನಾಸ್ (Nick Jonas) ಅವರ ಬ್ರಾಡ್ವೇ ಕಾರ್ಯಕ್ರಮ ( Broadway show) 'ದಿ ಲಾಸ್ಟ್ ಫೈವ್ ಇಯರ್ಸ್' ( The Last Five Years) ಅನ್ನು ವೀಕ್ಷಿಸಲು ತೆಲುಗು ನಟ ಮಹೇಶ್ ಬಾಬು (Mahesh Babu) ಅವರ ಪತ್ನಿ, ನಟಿ, ರೂಪದರ್ಶಿ ನಮ್ರತಾ ಶಿರೋಡ್ಕರ್ (Namrata Shirodkar) ಅವರು ತಮ್ಮ ಮಕ್ಕಳೊಂದಿಗೆ ಇತ್ತೀಚೆಗೆ ಅಮೆರಿಕಕ್ಕೆ (america) ತೆರಳಿದ್ದರು. ಮಕ್ಕಳಾದ ಸಿತಾರಾ ಮತ್ತು ಗೌತಮ್ ಅವರು ನಿಕ್ ಜೋನಾಸ್ ಅವರೊಂದಿಗೆ ತೆಗೆದಿರುವ ಚಿತ್ರಗಳನ್ನು ನಮ್ರತಾ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.



ಪ್ರಿಯಾಂಕಾ ಚೋಪ್ರಾ ಮತ್ತು ಮಹೇಶ್ ಬಾಬು ಅವರು ಶೀಘ್ರದಲ್ಲೇ ಎಸ್.ಎಸ್. ರಾಜಮೌಳಿ ಅವರ ಮುಂದಿನ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ, ಈ ಚಿತ್ರಕ್ಕೆ ತಾತ್ಕಾಲಿಕವಾಗಿ ಎಸ್ ಎಸ್ ಎಂಬಿ 29 ಎಂದು ಹೆಸರಿದಲಾಗಿದೆ. ರಾಜಮೌಳಿ ಅವರ ತಂದೆ ಬರೆದಿರುವ ಈ ಚಿತ್ರವು ಇಂಡಿಯಾನಾ ಜೋನ್ಸ್ನಂತೆಯೇ ಒಂದು ಸಾಹಸ ಚಿತ್ರಕಥೆಯಾಗಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ನಟ ಪೃಥಿವಿರಾಜ್ ಸುಕುಮಾರನ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ದಿ ಲಾಸ್ಟ್ ಫೈವ್ ಇಯರ್ಸ್ ಅನ್ನು ಜೇಸನ್ ರಾಬರ್ಟ್ ಬ್ರೌನ್ ಬರೆದಿದ್ದಾರೆ. ಟೋನಿ ಪ್ರಶಸ್ತಿ ವಿಜೇತ ಆಡ್ರಿಯೆನ್ ವಾರೆನ್ ಜೊತೆ ನಿಕ್ ನಟಿಸುವುದರೊಂದಿಗೆ ಅವರು ಬ್ರಾಡ್ವೇಗೆ ಪಾದಾರ್ಪಣೆ ಮಾಡಿದ್ದಾರೆ. ಈ ಸಂಗೀತ ಕಾರ್ಯಕ್ರಮವು ವಿಭಿನ್ನ ಸಮಯ ಮತ್ತು ದೃಷ್ಟಿಕೋನಗಳಲ್ಲಿ ದಂಪತಿಯ ಸಂಬಂಧದ ಕಥೆಯನ್ನು ಹೆಣೆದಿದೆ. ಇದರಲ್ಲಿ ನಿಕ್ ಉದಯೋನ್ಮುಖ ಕಾದಂಬರಿಕಾರ ಜೇಮೀ ವೆಲ್ಲರ್ಸ್ಟೈನ್ ಪಾತ್ರವನ್ನು ನಿರ್ವಹಿಸಿದ್ದಾರೆ.

ಕೆಲವೇ ದಿನಗಳ ಹಿಂದೆ ಮಹೇಶ್ ಬಾಬು ಅವರು ತಮ್ಮ ಕುಟುಂಬದೊಂದಿಗೆ ಇಟಲಿ ಪ್ರವಾಸ ಮಾಡಿದ್ದ ಸರಣಿ ಚಿತ್ರಗಳನ್ನು ನಮ್ರತಾ ಹಂಚಿಕೊಂಡಿದ್ದರು. ಈ ಚಿತ್ರಗಳ ಜೊತೆಗೆ ಅವರು ಇನ್ಸ್ಟಾಗ್ರಾಮ್ನಲ್ಲಿ ಒಂದು ದೀರ್ಘ ಟಿಪ್ಪಣಿಯನ್ನು ಬರೆದು ಅಲ್ಲಿನ ಸುಂದರ ಅನುಭವಗಳನ್ನು ಹಂಚಿಕೊಂಡಿದ್ದರು.

ನಿಕ್ ಜೋನಾಸ್ ಅಭಿನಯದ ಬಗ್ಗೆ ಬರೆದಿರುವ ನಮ್ರತಾ, ದಿ ಲಾಸ್ಟ್ ಫೈವ್ ಇಯರ್ಸ್ ವೀಕ್ಷಿಸಿದೆ. ನಿಕ್ ನಿಮ್ಮ ಅಭಿನಯ ಸಂಪೂರ್ಣವಾಗಿ ಅದ್ಭುತವಾಗಿತ್ತು. ನೀವು ತುಂಬಾ ನೈಜ್ಯವಾಗಿ ಮತ್ತು ಮನಮುಟ್ಟುವಂತೆ ಅಭಿನಯಿಸಿದ್ದೀರಿ. ಅನೇಕ ಭಾವನೆಗಳನ್ನು ಹೊಂದಿರುವ ಅದ್ಭುತ ಸಂಗೀತವನ್ನು ನೋಡುವುದು ತುಂಬಾ ಸಂತೋಷ ಕೊಟ್ಟಿದೆ. ಈ ಸುಂದರವಾದ ಪ್ರದರ್ಶನಕ್ಕೆ ಅಪಾರ ಅಭಿನಂದನೆಗಳು ಮತ್ತು ಈ ವಿಶೇಷ ಸಂಜೆಗಾಗಿ ಪ್ರಿಯಾಂಕಾ ಅವರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

ನಮ್ರತಾ ಶಿರೋಡ್ಕರ್ ಅವರು ತಮ್ಮ ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು, ನಿಕ್ ಅವರ ಅಭಿನಯ ಸಂಪೂರ್ಣವಾಗಿ ಅದ್ಭುತ ಎಂದು ಹೇಳಿದ್ದಾರೆ. ಈ ವಿಶೇಷ ಸಂಜೆಗಾಗಿ ನಮ್ರತಾ ಅವರು ನಿಕ್ ಅವರ ಪತ್ನಿ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಧನ್ಯವಾದಗಳನ್ನೂ ಕೂಡ ಅರ್ಪಿಸಿದ್ದಾರೆ.

ನಮ್ರತಾ ಅವರು ಗುರುವಾರ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸಂಜೆಯ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಒಂದು ಚಿತ್ರದಲ್ಲಿ ನಮ್ರತಾ ತಮ್ಮ ಮಗಳು ಸಿತಾರಾ, ಮಗ ಗೌತಮ್ ಮತ್ತು ಸ್ನೇಹಿತನೊಂದಿಗೆ ನಿಕ್ ಜೊತೆ ಪೋಸ್ ನೀಡಿದರು. ಪ್ರೇಕ್ಷಕರ ನಡುವೆ ಕುಳಿತು ಪಾಪ್ಕಾರ್ನ್ ಸವಿಯುತ್ತಾ ಕಾರ್ಯಕ್ರಮವನ್ನು ಆನಂದಿಸಿರುವುದಾಗಿ ಇನ್ನೊಂದು ಚಿತ್ರದಲ್ಲಿ ತೋರಿಸಿದ್ದಾರೆ.

ಗಾಯಕ ನಿಕ್ ಜೋನಾಸ್ ಅವರ ಬ್ರಾಡ್ವೇ ಕಾರ್ಯಕ್ರಮ 'ದಿ ಲಾಸ್ಟ್ ಫೈವ್ ಇಯರ್ಸ್' ವೀಕ್ಷಿಸಲು ನಮ್ರತಾ ಶಿರೋಡ್ಕರ್ ತಮ್ಮ ಮಕ್ಕಳಾದ ಗೌತಮ್ ಮತ್ತು ಸಿತಾರ ಅವರೊಂದಿಗೆ ಅಮೆರಿಕಕ್ಕೆ ತೆರಳಿದ್ದರು. ಕಾರ್ಯಕ್ರಮದ ವೇಳೆ ನಿಕ್ ಜೊತೆಗೆ ಫೋಟೋ ತೆಗೆದುಕೊಂಡು ಅದನ್ನು ಅವರು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.