ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Navaratri Fashion 2025: ನವರಾತ್ರಿ ದಾಂಡಿಯಾ ಲೆಹೆಂಗಾ ಆಯ್ಕೆಗೆ 5 ಸಿಂಪಲ್ ಐಡಿಯಾ

Navaratri Fashion 2025: ನವರಾತ್ರಿಯ ದಾಂಡಿಯಾಗೆ ಧರಿಸುವ ಲೆಹೆಂಗಾಗಳು ದುಬಾರಿಯಾಗಿದ್ದರೇ ಸಾಲದು! ನೋಡಲು ಕೂಡ ಆಕರ್ಷಕವಾಗಿರಬೇಕು. ಥೀಮ್‌ಗೆ ಹೊಂದುವಂತಿರಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಆಯ್ಕೆ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಒಂದೈದು ಸಿಂಪಲ್ ಟಿಪ್ಸ್ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಚಿತ್ರಗಳು: ಲಕ್ಷ್ಮಿ ಕೃಷ್ಣ ಸೆಲೆಬ್ರೆಟಿ ಫ್ಯಾಷನ್ ಡಿಸೈನರ್
1/5

ಈ ಬಾರಿಯ ನವರಾತ್ರಿಯ ದಾಂಡಿಯಾ ಸೀಸನ್‌ನಲ್ಲಿ ಗ್ರ್ಯಾಂಡ್ ವೆರೈಟಿ ಲೆಹೆಂಗಾಗಳು ಎಂಟ್ರಿ ನೀಡಿವೆ. ಈ ಕಾರ್ಯಕ್ರಮದಲ್ಲಿ ಧರಿಸುವ ವೆಡ್ಡಿಂಗ್ ಲೆಹೆಂಗಾಗಳು ಕೇವಲ ದುಬಾರಿಯಾಗಿದ್ದರೇ ಸಾಲದು! ನೋಡಲು ಕೂಡ ಆಕರ್ಷಕವಾಗಿರಬೇಕು ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿ ಕೃಷ್ಣ. ಈ ಕುರಿತಂತೆ ಒಂದೈದು ಸಿಂಪಲ್ ಟಿಪ್ಸ್ ನೀಡಿದ್ದಾರೆ.

2/5

ದಾಂಡಿಯಾ ಥೀಮ್‌ಗೆ ತಕ್ಕಂತೆ ಲೆಹೆಂಗಾ ಸೆಲೆಕ್ಷನ್ ಮಾಡಿ

ನವರಾತ್ರಿಯ ಥೀಮ್ ಅಂದರೇ, ನೀವು ಹೋಗುವ ದಾಂಡಿಯಾ ಥೀಮ್‌ಗೆ ತಕ್ಕಂತೆ ಲೆಹೆಂಗಾ ಆಯ್ಕೆ ಮಾಡಬೇಕು. ಆಗಷ್ಟೇ ಥೀಮ್‌ಗೆ ತಕ್ಕಂತೆ ಕಾಣಿಸಬಹುದು.

ಸೆಲೆಬ್ರೆಟಿ ಲುಕ್ ಲೆಹೆಂಗಾ ಆಯ್ಕೆ

ನವರಾತ್ರಿಯ ದಾಂಡಿಯಾ ಸಮಾರಂಭಗಳಲ್ಲಿ ಸೆಲೆಬ್ರೆಟಿಯಂತೆ ಕಾಣಿಸಲು ಆದಷ್ಟೂ ಮೊದಲೇ ತಾರೆಯರ ಲೆಹೆಂಗಾಗಳನ್ನು ನೋಡಿ, ಫೋಟೋಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ. ಕೇವಲ ಬಾಯಿ ಮಾತಿನಲ್ಲಾದಲ್ಲಿ ಹುಡುಕುವುದು ಕಷ್ಟವಾಗಬಹುದು. ನೀವು ಭೇಟಿ ನೀಡುವ ಬೋಟಿಕ್ ಅಥವಾ ಲೆಹೆಂಗಾ ಸೆಂಟರ್‌ಗಳಲ್ಲಿ ನಿಮ್ಮ ಆಯ್ಕೆ ಹಾಗೂ ಫೋಟೋ ತೋರಿಸಿ. ಹುಡುಕಲು ಸುಲಭವಾಗುವುದು.

3/5

ಟ್ರೆಂಡಿ ಲೆಹೆಂಗಾ ಆಯ್ಕೆ ಮಾಡಿ

ದಾಂಡಿಯಾಗೆ ಲೆಹೆಂಗಾ ಕೊಳ್ಳುವ ಸಮಯದಲ್ಲಿ ಟ್ರೆಂಡಿಯಾಗಿರುವ ಡಿಸೈನ್ಸ್ ಕುರಿತಂತೆ ಅಂತರ್ಜಾಲದಲ್ಲಿ, ಫ್ಯಾಷನ್ ಮ್ಯಾಗಜೀನ್‌ಗಳಲ್ಲಿ ನೋಡಿ ತಿಳಿದುಕೊಳ್ಳಿ. ಲಕ್ಷ ರೂ. ಬೆಲೆಬಾಳುವ ಇವುಗಳ ರಿಪ್ಲೀಕಾ ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಇಂತವನ್ನು ಕೂಡ ಖರೀದಿಸಬಹುದು.

4/5

ಬಾಡಿ ಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಫ್ಯಾಬ್ರಿಕ್ ಆಯ್ಕೆ ಮಾಡಿ

ದಾಂಡಿಯಾ ಡ್ಯಾನ್ಸ್ ಪ್ರಕಾರಕ್ಕೆ ತಕ್ಕಂತೆ ಲೆಹೆಂಗಾ ಫ್ಯಾಬ್ರಿಕ್ ಆಯ್ಕೆ ಮಾಡಿ. ಕೆಲವರು ಭಾರಿ ತೂಕವಿರುವ ಲೆಹೆಂಗಾ ಆಯ್ಕೆ ಮಾಡಿ, ಭಾರ ಹೊರಲಾರದೇ, ಇತ್ತ ನಡೆಯಲಾರದೇ ಅತ್ತ ದಾಂಡಿಯಾದಲ್ಲಿ ಡ್ಯಾನ್ಸ್ ಮಾಡಲಾರದೇ ಒದ್ದಾಡುತ್ತಾರೆ. ಅದಕ್ಕಾಗಿ ಲೆಹೆಂಗಾ ಫ್ಯಾಬ್ರಿಕ್ ಆಯ್ಕೆ ಮಾಡುವಾಗ ಕೈಯಲ್ಲಿ ಹಿಡಿದು ಟ್ರಯಲ್ ನೋಡಿ, ಖರೀದಿಸಿ.

5/5

ಕಲರ್ / ಡಿಸೈನ್‌ಗೆ ಆದ್ಯತೆ ನೀಡಿ

ಧರಿಸುವವರ ಸ್ಕಿನ್ ಟೋನ್‌ಗೆ ತಕ್ಕಂತೆ ಗ್ರ್ಯಾಂಡ್ ಆಗಿರಬೇಕು. ಹ್ಯಾಂಡ್ ಎಂಬ್ರಾಯ್ಡರಿ ಹಾಗೂ ಡಿಸೈನ್ಸ್ ಮತ್ತು ಕಲರ್‌ಗೆ ಆದ್ಯತೆ ನೀಡಬೇಕು. ಪರ್ಸನಾಲಿಟಿಗೆ ತಕ್ಕಂತೆ ಲೆಹೆಂಗಾದ ಉದ್ದ ಹೊಂದಬೇಕು.

ಶೀಲಾ ಸಿ ಶೆಟ್ಟಿ

View all posts by this author