ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Navaratri Fashion 2025: ನವರಾತ್ರಿಯಲ್ಲಿ ಉಲ್ಲಾಸ ಮೂಡಿಸುವ ಪಿಂಕ್ ವರ್ಣ

ಇಂದೇ ಈ ವರದಿ ಹೋಗಬೇಕಿದೆ. Navaratri Fashion 2025: ನವರಾತ್ರಿಯಲ್ಲಿನ ಗುಲಾಬಿ ವರ್ಣ ಅತ್ಯಾಕರ್ಷಕವಾಗಿ ಕಾಣಿಸುವುದು ಮಾತ್ರವಲ್ಲ, ಉಲ್ಲಾಸ ಮೂಡಿಸುವುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಶೇಡ್‌ನ ಸ್ಟೈಲಿಂಗ್ ಟಿಪ್ಸ್ ಕುರಿತಂತೆ ಒಂದಿಷ್ಟು ವಿವರಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಚಿತ್ರಗಳು: ಕೃಪಾ
1/5

ಪಿಂಕ್ ಅಂದರೇ ಗುಲಾಬಿ ವರ್ಣ ನವರಾತ್ರಿಯ ಉಲ್ಲಾಸವನ್ನು ಹೆಚ್ಚಿಸುತ್ತದೆ. ಎಂತಹವರನ್ನು ಸುಂದರ ಹಾಗೂ ಆಕರ್ಷಕವಾಗಿ ಬಿಂಬಿಸುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಬಹುತೇಕ ಮಹಿಳೆಯರ ಫೇವರೇಟ್ ಕಲರ್ ಗುಲಾಬಿ

ನೋಡಲು ಆಹ್ಲಾದಕರ ಎನಿಸುವ ಈ ವರ್ಣ ಬಹುತೇಕ ಹೆಣ್ಣುಮಕ್ಕಳ ಫೇವರೆಟ್‌ ವರ್ಣ ಎಂದರೂ ಅತಿಶಯೋಕ್ತಿಯಾಗದು. ಕಲರ್ ಫ್ಯಾಷನ್ ಕುರಿತ ಸಮೀಕ್ಷೆಯೊಂದರ ಪ್ರಕಾರ, ಭಾರತೀಯ ಮಹಿಳೆಯರ ಫೇವರೆಟ್ ಲಿಸ್ಟ್‌ನಲ್ಲಿ ರಾಯಲ್ ಬ್ಲೂ ಹಾಗೂ ಗುಲಾಬಿ ವರ್ಣ ಇದೆಯಂತೆ. ಕೇವಲ ಗುಲಾಬಿ ವರ್ಣದಲ್ಲೆ ಲೆಕ್ಕವಿಲ್ಲದಷ್ಟು ಶೇಡ್‌ಗಳ ಡಿಸೈನರ್‌ವೇರ್‌ಗಳು ಬಹುತೇಕ ಮಹಿಳೆಯರ ವಾರ್ಡ್ರೋಬ್‌ನಲ್ಲಿದೆಯಂತೆ.

2/5

ಪಿಂಕ್ ಗುಲಾಬಿಯ ನಾನಾ ಶೇಡ್‌ಗಳು

ಕ್ಯಾಂಡಿ ಪಿಂಕ್, ಮೆಜಂತಾ ಪಿಂಕ್, ಲೈಟ್‌ಪಿಂಕ್, ಬಬಲ್ಗಮ್ ಪಿಂಕ್, ರಾಣಿ ಪಿಂಕ್, ತಿಳಿ ಗುಲಾಬಿ ಹೀಗೆ ಸಾಕಷ್ಟು ಗುಲಾಬಿ ಶೇಡ್‌ಗಳು ಇಂದು ಫ್ಯಾಷನ್‌ಲೋಕದಲ್ಲಿ ಟ್ರೆಂಡಿಯಾಗಿವೆ.

ಪಿಂಕ್ ಸೀರೆಗಳಲ್ಲಿ ಹೂವಿನಂತೆ ನಳನಳಿಸಿ

ರೇಷ್ಮೆ ಸೀರೆ, ಸೆಮಿ ಸಿಲ್ಕ್, ಲೆನಿನ್, ಅರ್ಗಾನ್ಜಾ, ಕಾಟನ್, ಬನಾರಸಿ ಹೀಗೆ ನಾನಾ ಫ್ಯಾಬ್ರಿಕ್‌ನ ಗುಲಾಬಿ ಸೀರೆಗಳು ಇಂದು ಸೀರೆ ಲೋಕದಲ್ಲಿ ಬಂದಿವೆ. ರೇಷ್ಮೆಯ ಬಾರ್ಡರ್‌ ಹಾಗೂ ಬಾರ್ಡರ್‌ ಲೆಸ್‌ ಗುಲಾಬಿ ಸೀರೆಗಳು ಕೂಡ ಹೊಸ ರೂಪದಲ್ಲಿ ರೀ ಎಂಟ್ರಿ ನೀಡಿವೆ.

3/5

ಪಿಂಕ್ ಡಿಸೈನರ್‌ವೇರ್‌ಗಳು

ಮಾನೋಕ್ರೋಮ್ ಶೇಡ್‌ನ ಲೆಹೆಂಗಾ ಹಾಗೂ ಸಲ್ವಾರ್ ಕಮೀಝ್ ಹಾಗೂ ಡಿಸೈನರ್ ಅನಾರ್ಕಲಿಗಳು ಈಗಾಗಲೇ ನವರಾತ್ರಿಯ ಡ್ರೆಸ್‌ಕೋಡ್‌ನ ಗ್ರ್ಯಾಂಡ್‌ ವಿನ್ಯಾಸದಲ್ಲಿ ಸೇರಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ವಾರ್ಡ್ರೋಬ್‌ನೊಳಗಿನ ಡಿಸೈನರ್‌ವೇರ್‌ಗೆ ಹೊಸ ರೂಪ ನೀಡಿ

ನಿಮ್ಮ ಬಳಿ ಈಗಾಗಲೇ ಗುಲಾಬಿ ವರ್ಣದ ಉಡುಪಿದ್ದಲ್ಲಿ, ಅದಕ್ಕೆ ಹೊಸ ರೂಪ ನೀಡಿ ಧರಿಸಿ. ಉದಾಹರಣೆಗೆ ಸೆಲ್ವಾರ್ ಕಮೀಝ್‌ಗೆ ಪಿಂಕ್ ಬಾಂದನಿ ಇಲ್ಲವೇ ಬನಾರಸಿ ದುಪಟ್ಟಾ ಧರಿಸಿ. ಸೀರೆಯಾದಲ್ಲಿ ಕ್ರಾಪ್ ಬ್ಲೌಸ್ ಪ್ರಯೋಗ ಮಾಡಿ. ಆಕ್ಸೆಸರೀಸ್ ಬದಲಿಸಿ. ಡಿಫರೆಂಟ್ ಲುಕ್ ಸಿಗುವುದು.

4/5

ಮೇಕಪ್‌ ತಿಳಿಯಾಗಿರಲಿ

ಗುಲಾಬಿ ವರ್ಣದ ಡಿಸೈನರ್‌ವೇರ್‌ಗಳಿಗೆ ಆದಷ್ಟೂ ಮೇಕಪ್‌ ತಿಳಿಯಾಗಿರಬೇಕು. ಡಾರ್ಕ್ ಮೇಕಪ್‌ ಬೇಡ. ತುಟಿಗೆ ಶಿಮ್ಮರಿಂಗ್‌ ಲಿಪ್‌ಸ್ಟಿಕ್‌ ಲೇಪಿಸಿ. ಕಣ್ಣಿಗೆ ಗಾಢ ಐ ಮೇಕಪ್‌ ಬೇಡ.

5/5

ಗುಲಾಬಿ ವರ್ಣದಲ್ಲಿ ಕಾಣಲು ಬಯಸುವವರು ಗಮನಿಸಬೇಕಾದ ಅಂಶಗಳು

  • ಹೇರ್‌ ಸ್ಟೈಲ್ ಯಾವುದಾದರೂ ಸರಿ ಹೊಂದುತ್ತದೆ.
  • ಗಾಢ ಗುಲಾಬಿ ಬಣ್ಣದ ಉಡುಪಾದಲ್ಲಿ ಬಂಗಾರದ ಆಭರಣಗಳನ್ನು ಧರಿಸಿ.
  • ತಿಳಿ ವರ್ಣದ ಡಿಸೈನರ್‌ವೇರ್ ಧರಿಸಿದಲ್ಲಿ ಸಿಲ್ವರ್‌ ಲುಕ್ ನೀಡಬಹುದು.

ಶೀಲಾ ಸಿ ಶೆಟ್ಟಿ

View all posts by this author