ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Navaratri Fashion 2025: ನವರಾತ್ರಿಯಲ್ಲಿ ಹೀಗಿರಲಿ ಶ್ವೇತ ವರ್ಣದ ಸ್ಟೈಲಿಂಗ್

Navaratri Fashion 2025: ನವರಾತ್ರಿಯಲ್ಲಿ ಬಿಳಿ ಬಣ್ಣದ ಉಡುಪು ಅಥವಾ ಸೀರೆ ಧರಿಸುವವರು, ಫ್ಯಾಬ್ರಿಕ್ ಹಾಗೂ ಡಿಸೈನ್ ಆಯ್ಕೆಯ ಆಧಾರದ ಮೇಲೆ ಔಟ್‌ಲುಕ್ ನಿರ್ಧರಿಸಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತಂತೆ ಒಂದಿಷ್ಟು ಸಿಂಪಲ್ ಸಲಹೆ ನೀಡಿದ್ದಾರೆ.

ಚಿತ್ರಗಳು: ಶಿಲ್ಪಾ ಗೌಡ
1/5

ನವರಾತ್ರಿಯಲ್ಲಿ ಬಿಳಿ ಬಣ್ಣದ ಉಡುಪು ಅಥವಾ ಸೀರೆ ಧರಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಬಿಳಿ ಬಣ್ಣವು ಇತರೇ ಬಣ್ಣಗಳಂತಲ್ಲ. ಬಿಳಿ ವರ್ಣ ಶಾಂತಿಯ ಪ್ರತೀಕ. ಬಿಳಿ ಬಣ್ಣದಲ್ಲೂ ನಾನಾ ಶೇಡ್‌ಗಳನ್ನು ಕಾಣಬಹುದು. ಹಾಗಾಗಿ ಫ್ಯಾಬ್ರಿಕ್ ಆಯ್ಕೆಯ ಆಧಾರದ ಮೇಲೆ ಔಟ್‌ಲುಕ್ ನಿರ್ಧರಿತವಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತಂತೆ ಸಿಂಪಲ್ ಟಿಪ್ಸ್ ನೀಡಿದ್ದಾರೆ.

2/5

ಶ್ವೇತ ವರ್ಣದ ಸೀರೆಗಳ ಸ್ಟೈಲಿಂಗ್

ಸೆಲೆಬ್ರೆಟಿಗಳು ಇಲ್ಲವೇ ತಾರೆಯರು ಡಿಸೈನರ್ ವೈಟ್ ಸೀರೆ ಪ್ರಿಫರ್ ಮಾಡುತ್ತಾರೆ. ಇನ್ನು ಸಾಮಾನ್ಯ ಮಹಿಳೆಯರಾದಲ್ಲಿ ಕಾಟನ್ ಅಥವಾ ಲೆನಿನ್ ಬಿಳಿ ಬಣ್ಣದ ಅದರಲ್ಲೂ ಪ್ರಿಂಟ್ಸ್ ಅಥವಾ ಕೊಂಚ ಅಬ್ಸ್ಟ್ರಾಕ್ಟ್ ಇಲ್ಲವೇ ಜಿಯಾಮೆಟ್ರಿಕಲ್ ಡಿಸೈನ್‌ನ ಸೀರೆಯನ್ನು ಕಾಂಟ್ರಸ್ಟ್ ಶೇಡ್ ಅಥವಾ ಇತರೇ ಕಲರ್ ಮಿಕ್ಸ್ ಆಗಿರುವ ಸೀರೆಯನ್ನು ಆಯ್ಕೆ ಮಾಡುತ್ತಾರೆ. ಇನ್ನು ಸಾಟಿನ್ನ ವೈಟ್ ಸ್ಟ್ರೈಪ್ಸ್ ಶಿಫಾನ್‌ನ ಡಬ್ಬಲ್ ವೈಟ್, ಕ್ರೇಪ್‌ನ ಫ್ಲೋರಲ್ ಪ್ರಿಂಟ್ಸ್ ವೈಟ್ ಮೊದಲ್ ಹಾಗೂ ಅಜ್ರಾಕ್ ಸಾಫ್ಟ್ ಸೀರೆಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಈ ಸೀರೆಯನ್ನು ಉಡುವವರು ಹೆಚ್ಚು ಜ್ಯುವೆಲರಿ ಧರಿಸುವ ಅಗತ್ಯವಿಲ್ಲ. ಇಂಡೋ-ವೆಸ್ಟರ್ನ್ ಲುಕ್ ನೀಡುವ ಜ್ಯುವೆಲರಿ ಧರಿಸಬಹುದು. ಸಿಂಪಲ್ ಸೀರೆಯಾದಲ್ಲಿ ಮೇಕಪ್‌ನಿಂದಿಡಿದು ಎಲ್ಲವನ್ನೂ ಸಿಂಪಲ್ ಆಗಿ ಮ್ಯಾಚ್ ಮಾಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ರಾಶಿ. ಅವರ ಪ್ರಕಾರ, ಬಿಳಿಯಲ್ಲಿ ಹಾಫ್ ವೈಟ್, ಕ್ರೀಮಿಶ್ ವೈಟ್, ಐವರಿ ವೈಟ್ನ ಸೀರೆ ಶೇಡ್‌ಗಳು ಲಭ್ಯ. ಸೀರೆ ತಕ್ಕಂತೆ ಸ್ಟೈಲಿಂಗ್ ಮಾಡಿದಾಗ ಮಾತ್ರ ಎಲಿಗೆಂಟ್ ಲುಕ್ ನೀಡುತ್ತದೆ ಎನ್ನುತ್ತಾರೆ.

3/5

ಬಿಳಿಯ ಬಣ್ಣದ ಎಥ್ನಿಕ್‌ವೇರ್ಸ್

ಪ್ರತಿ ಮಹಿಳೆಯ ಬಳಿ ಒಂದಲ್ಲ ಒಂದು ಬಿಳಿ ಬಣ್ಣದ ಕುರ್ತಾ, ಚೂಡಿದಾರ್, ಸೆಲ್ವಾರ್ ಅಥವಾ ಸ್ಕರ್ಟ್ ಇದ್ದೇ ಇರುತ್ತದೆ. ಇನ್ನು ಹೊಸತನ್ನು ಕೊಳ್ಳದೇ ಹಳೆಯ ವೈಟ್ ಡ್ರೆಸ್ ಧರಿಸುವುದಾದಲ್ಲಿ ಹೊಸ ಜ್ಯುವೆಲರಿ ಧರಿಸುವುದರ ಮೂಲಕ ನ್ಯೂ ಲುಕ್ ನೀಡಬಹುದು. ಸಿಂಪಲ್ ಲುಕ್‌ಗಾಗಿ ಪರ್ಲ್ ಸೆಟ್ ಅಥವಾ ಕ್ರಿಸ್ಟಲ್ ಸೆಟ್ ಧರಿಸಬಹುದು. ಎದ್ದು ಕಾಣಬೇಕಿದ್ದಲ್ಲಿ ಬ್ಲಾಕ್ ಮೆಟಲ್ ಸೆಟ್ ಧರಿಸಬಹುದು. ಲೈಟ್ ಪ್ರಿಂಟ್ಸ್ ಇರುವ ವೈಟ್ ವನ್ ಪೀಸ್ ಅನಾರ್ಕಲಿ ಗೌನ್ ಕೂಡ ಇದೀಗ ಟ್ರೆಂಡ್‌ನಲ್ಲಿದೆ. ಲಾಂಗ್ ಸ್ಟ್ರೇಟ್ ಕಟ್ ಕುರ್ತಾಗಳು ಲಭ್ಯ ಎನ್ನುತ್ತಾರೆ ಸ್ಟೈಲಿಸ್ಟ್ ರಾಣಿ.

4/5
  • ವೈಟ್ ಸೀರೆಗಳಲ್ಲಿ ಇದೀಗ ಶಿಫಾನ್‌ನ ಫ್ರಿಲ್ ಸೀರೆ, ಮೊದಲ್, ಅಜ್ರಾಕ್ ಸೀರೆಗಳು ಟ್ರೆಂಡ್‌ನಲ್ಲಿವೆ.
  • ಬಿಳಿಯ ನಾನಾ ಶೇಡ್‌ನ ಎಥ್ನಿಕ್‌ವೇರ್ಸ್ ಗೋಲ್ಡನ್ ಹ್ಯಾಂಡ್‌ವರ್ಕ್‌ನಲ್ಲಿ ದೊರೆಯುತ್ತಿವೆ.
5/5

ನವರಾತ್ರಿಯಲ್ಲಿ ಬಿಳಿ ಬಣ್ಣದ ಉಡುಪು ಅಥವಾ ಸೀರೆ ಧರಿಸುವವರು, ಫ್ಯಾಬ್ರಿಕ್ ಹಾಗೂ ಡಿಸೈನ್ ಆಯ್ಕೆಯ ಆಧಾರದ ಮೇಲೆ ಔಟ್‌ಲುಕ್ ನಿರ್ಧರಿಸಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಶೀಲಾ ಸಿ ಶೆಟ್ಟಿ

View all posts by this author