ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Navaratri Nailart 2025: ಬ್ಯೂಟಿ ಲೋಕದಲ್ಲಿ ಟ್ರೆಂಡಿಯಾಯ್ತು ನವರಾತ್ರಿ ನೇಲ್ ಆರ್ಟ್

ನವರಾತ್ರಿ ಫೆಸ್ಟೀವ್ ಸೀಸನ್‌ನಲ್ಲಿ ಈಗಾಗಲೇ ನಾನಾ ಬಗೆಯ ನೇಲ್ ಆರ್ಟ್ ಡಿಸೈನ್‌ಗಳು ಎಂಟ್ರಿ ನೀಡಿವೆ. ಇವು ರೆಡಿ ಟು ವೇರ್ ಪ್ರೆಸ್ ಆನ್ ಸ್ಟಿಕ್ಕರ್ಸ್‌ನಲ್ಲೂ ದೊರೆಯುತ್ತಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಇನ್ಸ್ಟಾಗ್ರಾಮ್
1/5

ಹೊಸ ನೇಲ್ ಆರ್ಟ್ ಡಿಸೈನ್‌ಗಳು ಎಂಟ್ರಿ

ದಸರಾ ಹಾಗೂ ನವರಾತ್ರಿ ಫೆಸ್ಟೀವ್ ಸೀಸನ್‌ನಲ್ಲಿ ಈಗಾಗಲೇ ನಾನಾ ಬಗೆಯ ನೇಲ್ ಆರ್ಟ್ ಡಿಸೈನ್‌ಗಳು ಎಂಟ್ರಿ ನೀಡಿವೆ. ಇವುಗಳೊಂದಿಗೆ ಇನ್ಸ್ಟಂಟ್ ರೆಡಿ ಟು ವೇರ್ ಪ್ರೆಸ್ ಆನ್ ನೇಲ್ ಸ್ಟಿಕ್ಕರ್‌ಗಳು ಕೂಡ ಮಾರುಕಟ್ಟೆಗೆ ಬಂದಿವೆ.

2/5

ದುರ್ಗಾ ಮಾತೆಯ ನಾನಾ ಚಿತ್ತಾರಗಳು

ನವರಾತ್ರಿಯ ಸೀಸನ್‌ನಲ್ಲಿ ನೇಲ್ ಆರ್ಟ್ ಕ್ಷೇತ್ರದಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ನೇಲ್ ಆರ್ಟ್ ಡಿಸೈನ್‌ಗಳು ಎಂಟ್ರಿ ನೀಡಿವೆ. ನೇಲ್ ಆರ್ಟ್ ಪ್ರಿಯರನ್ನು ಸೆಳೆಯುತ್ತಿವೆ. ಅವುಗಳಲ್ಲಿ, ಕೋಲಾಟ ಅಂದರೆ, ದಾಂಡಿಯಾದ ಚಿತ್ತಾರಗಳು ಹೆಚ್ಚು ಪಾಪುಲರ್ ಆಗಿವೆ. ದುರ್ಗಾ ಮಾತೆಯ ನಾನಾ ಮುಖಗಳು, ಕಾಳಿಯ ಮುಖ, ಹೀಗೆ ದೇವಿಯ ನಾನಾ ಮುಖಗಳು ಸೀಸನ್‌ನಲ್ಲಿ ನೇಲ್ ಆರ್ಟ್‌ನಲ್ಲಿ ಸೇರಿಕೊಂಡಿವೆ.

3/5

ಉಗುರುಗಳ ಮೇಲೆ ಗೊಂಬೆಗಳ ಸಾಲು

ನಾನಾ ಬಗೆಯ ಗೊಂಬೆಗಳ ಚಿತ್ತಾರಗಳು ಹಾಗೂ ದಸರಾ ಥೀಮ್‌ಗೆ ಸಂಬಂಧಿಸಿದ ಚಿತ್ರಗಳು ಕೂಡ ನೇಲ್ ಆರ್ಟ್ ಡಿಸೈನ್‌ನಲ್ಲಿ ಸೇರಿಕೊಂಡಿವೆ.

4/5

ಪ್ರೆಸ್ ಆನ್ ನೇಲ್ ಸ್ಟಿಕ್ಕರ್ಸ್

ಈ ದಸರಾ ಸೀಸನ್‌ನಲ್ಲಿ ಗಂಟೆಗಟ್ಟಲೇ ನೇಲ್ ಆರ್ಟ್ ಸಲೂನ್‌ನಲ್ಲಿ ಕುಳಿತು ನೇಲ್ ಆರ್ಟ್ ಮಾಡಲು ಸಮಯವಿಲ್ಲದವರಿಗೆಂದೇ ಇದೀಗ ಇನ್ಸ್ಟಂಟ್ ಆಗಿ ಹಚ್ಚಬಹುದಾದ ಪ್ರೆಸ್ ಆನ್ ನೇಲ್ಸ್ ಸ್ಟಿಕ್ಕರ್ಸ್ ಮಾರುಕಟ್ಟೆಗೆ ಕಾಲಿಟ್ಟಿವೆ. ಆಯಾ ಮಹಿಳೆಯರು ಉಗುರುಗಳಿಗೆ ಮ್ಯಾಚ್ ಆಗುವಂತಹ ಡಿಫರೆಂಟ್ ಡಿಸೈನ್‌ನವು ದೊರೆಯುತ್ತಿವೆ. ಇವನ್ನು ಹಚ್ಚುವುದು ತೀರಾ ಸುಲಭ ಕೂಡ ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್ ಜನ್ಯಾ. ಅವರ ಪ್ರಕಾರ, ಇವು ಟೆಂಪರರಿಯಾದರೂ ಅತಿ ಸುಲಭವಾಗಿ ಹಚ್ಚಿ ಉಗುರುಗಳನ್ನು ವಿನ್ಯಾಸಗೊಳಿಸಬಹುದು. ಈ ಪ್ರೆಸ್ ಆನ್ ನೇಲ್ ಸ್ಟಿಕ್ಕರ್‌ಗಳಲ್ಲಿ ಸಾಮಾನ್ಯವಾಗಿ ದುರ್ಗೆಯ ವಧನ, ದಾಂಡಿಯಾ, ಗೊಂಬೆಗಳ ಚಿತ್ರಗಳವು ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಮಾರಾಟಗಾರರು.

5/5

ನವರಾತ್ರಿ / ದಸರಾ ನೇಲ್ ಆರ್ಟ್ ಪ್ರಿಯರಿಗೆ 5 ಸಿಂಪಲ್ ಟಿಪ್ಸ್

  • ಹೆಚ್ಚು ಸಮಯವಿದ್ದಲ್ಲಿ ನೇಲ್ಆರ್ಟ್ ಸಲೂನ್‌ಗೆ ಭೇಟಿ ನೀಡಬಹುದು.
  • ಸಮಯಾವಕಾಶ ಕಡಿಮೆ ಇದ್ದಲ್ಲಿ ಪ್ರೆಸ್ ಆನ್ ಸ್ಟಿಕ್ಕರ್ಸ್ ಹಚ್ಚಿಕೊಳ್ಳಬಹುದು.
  • ಬ್ರ್ಯಾಂಡೆಡ್‌ ಪ್ರೆಸ್ ಆನ್ ಸ್ಟಿಕ್ಕರ್‌ಗಳು ಬಾಳಿಕೆ ಬರುತ್ತವೆ.
  • ನೇಲ್ ಪಾಲಿಶ್ ಕಿಟ್ ಇದ್ದಲ್ಲಿ ನೀವೇ ಚಿತ್ತಾರ ಮೂಡಬಹುದು.
  • ಮೊದಲು ಮೆನಿಕ್ಯೂರ್ ಮಾಡಿಸಿ, ನೇಲ್ ಆರ್ಟ್ ಮಾಡಿಸಿ.

ಶೀಲಾ ಸಿ ಶೆಟ್ಟಿ

View all posts by this author