Nia Sharma: ಈ ನಟಿಯ ಬೋಲ್ಡ್ ಫೋಟೋಶೂಟ್ಗೆ ಪಡ್ಡೆ ಹುಡುಗರು ಫುಲ್ ಫಿದಾ!
ನಿಯಾ ಶರ್ಮಾ ತಮ್ಮ ಇತ್ತೀಚಿನ ಬೋಲ್ಡ್ ಫೋಟೋಗಳ ಮೂಲಕ ಮತ್ತೊಮ್ಮೆ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ತಮ್ಮ ಗ್ಲಾಮರಸ್ ಹಾಗೂ ಫ್ಯಾಷನ್ ಸೆನ್ಸ್ ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಸರುವಾಸಿಯಾದ ಇವರು ಈ ಭಾರಿ ಇನ್ಸ್ಟಾಗ್ರಾಮ್ನಲ್ಲಿ ಹಲವಾರು ಅದ್ಭುತ ಫೋಟೋಗಳನ್ನು ಹಂಚಿಕೊಂಡಿದ್ದಾರೆ.



ಹಿಂದಿ ಸೀರಿಯಲ್ ಮತ್ತು ಮಾಡೆಲಿಂಗ್ ಮೂಲಕ ಖ್ಯಾತಿ ಪಡೆದ ನಟಿ ನಿಯಾ ಶರ್ಮಾ ಇತ್ತೀಚೆಗೆ ಬೋಲ್ಡ್ ಫೋಟೋ ದಿಂದಲೇ ಸುದ್ದಿಯಲ್ಲಿರುತ್ತಾರೆ.ʼಖತ್ರೋನ್ ಕಿ ಖಿಲಾಡಿ ಮೇಡ್ ಇನ್ ಇಂಡಿಯಾʼ ಶೋದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಖ್ಯಾತಿ ಪಡೆದ ನಿಯಾ ಶರ್ಮಾ ಬ್ರೌನ್ ಸ್ವಿಮ್ಮಿಂಗ್ ಸೂಟ್ನಲ್ಲಿ ಬೋಲ್ಡ್ ಆಗಿ ಕಂಡಿದ್ದಾರೆ.

ನಟಿ ಬ್ಯುಸಿ ಕೆಲಸದ ನಡುವೆಯೂ ಜಾಲಿ ಟ್ರಿಪ್ ಕೈಗೊಂಡಿದ್ದು ವೆಕೇಷನ್ ಅನ್ನು ಮಸ್ತ್ ಎಂಜಾಯ್ ಮಾಡಿದ್ದಾರೆ. ವೈರಲ್ ಫೋಟೋಗಳಲ್ಲಿ, ನಿಯಾ ಕಂದು ಬಣ್ಣದ ಬೋಲ್ಡ್ ಸ್ವಿಮ್ ವೇರ್ ಮತ್ತು ಸ್ಕರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಿಯಾ ಶರ್ಮಾ ಇದೇ ಔಟ್ ಫಿಟ್ನಲ್ಲಿ ಬಹಳಷ್ಟು ಬೋಲ್ಡ್ ಆಗಿ ಕಂಡಿದ್ದಾರೆ. ಸಿಂಪಲ್ ಮೇಕಪ್ ಹಾಗೂ ಹೇರ್ ಸ್ಟೈಲ್ನಿಂದ ವಿಭಿನ್ನವಾಗಿ ಕಂಡಿದ್ದು ವಿವಿಧ ಭಂಗಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.

ನಿಯಾ ಜೊತೆಗೆ ಸಹ ನಟಿಯರಾದ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಕೂಡ ಜೊತೆಯಾಗಿದ್ದಾರೆ. ಒಂದು ಫೋಟೋದಲ್ಲಿ, ನಿಯಾ ಮತ್ತು ಅಂಕಿತಾ ತಮ್ಮ ಸ್ಟೈಲಿಶ್ ಸ್ವಿಮ್ವೇರ್ನಲ್ಲಿ ಒಟ್ಟಾಗಿ ಫೋಟೋ ಗೆ ಪೋಸ್ ನೀಡಿದ್ದು, ಇಬ್ಬರ ಫೋಟೋಗಳಿಗೂ ಫ್ಯಾನ್ಸ್ ಲೈಕ್ಸ್ ಕಾಮೆಂಟ್ ನೀಡಿದ್ದಾರೆ.

ʼಏಕ್ ಹಜಾರೋನ್ ಮೇ ಮೇರಿ ಬೆಹ್ನಾ ಹೈʼ, ʼಜಮೈ ರಾಜಾʼ, ʼಇಷ್ಕ್ ಮೇ ಮಾರ್ಜಾವಾನ್ʼ, ʼನಾಗಿನ್ 4ʼ ಮುಂತಾದ ಟಿವಿ ಶೋ ಮೂಲಕ ಫೇಮ್ ಗಿಟ್ಟಿಸಿಕೊಂಡ ಇವರು ಡ್ಯಾನ್ಸಿಂಗ್ ಶೋ ʼಜಲಕ್ ದಿಖ್ಲಾ ಜಾʼ ಸೀಸನ್ 10ರಲ್ಲಿಯೂ ಸ್ಪರ್ಧಿಸಿದ್ದರು.