Megha Shetty: ನಟಿ ಮೇಘಾ ಶೆಟ್ಟಿ ನೀಲಾಂಬರಿ ಲುಕ್ ಕಂಡು ಫ್ಯಾನ್ಸ್ ಫುಲ್ ಫಿದಾ!
ಜೊತೆ ಜೊತೆಯಲಿ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟಿ ಮೇಘಾ ಶೆಟ್ಟಿ ಅವರು ತನ್ನ ಅದ್ಭುತ ಅಭಿನಯದ ಮೂಲಕ ಅಪಾರ ಮಟ್ಟಿಗೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತ್ರಿಬಲ್ ರೈಡಿಂಗ್ , ದಿಲ್ ಪಸಂದ್ ಸಿನಿಮಾದಲ್ಲಿ ನಟಿಸಿ ಖ್ಯಾತಿ ಪಡೆದ ನಟಿ ಮೇಘಾ ಶೆಟ್ಟಿ ಅವರು ಇತ್ತೀಚೆಗೆ ಪರ ಭಾಷೆಯಲ್ಲಿಯೂ ಕೂಡ ಬಹುಬೇಡಿಕೆ ಪಡೆಯುತ್ತಿದ್ದಾರೆ.

ಮೇಘಾ ಶೆಟ್ಟಿ


ನಟಿ ಮೇಘಾ ಶೆಟ್ಟಿ ಅವರು ಆಗಸ್ಟ್ 4ರಂದು ತಮ್ಮ 27ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿಂದೆಯೇ ಅವರು ತಮಿಳು ಚಿತ್ರರಂಗದಲ್ಲಿ ಉತ್ತಮ ಆಫರ್ ಸಿಗುತ್ತಿರುವ ಕುರಿತು ತಿಳಿಸಿದ್ದು ಅಭಿಮಾನಿಗಳಿಗೂ ಈ ವಿಚಾರ ಸಂತಸ ತಂದಿತ್ತು. ಇದೀಗ ಅದರ ಬೆನ್ನಲ್ಲೆ ಅವರ ಕೆಲ ಫೋಟೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

ನಟಿ ಮೇಘಾ ಶೆಟ್ಟಿ ಅವರಿಗೆ ಫಿಟ್ನೆಸ್, ಡಯೆಟ್ , ಯೋಗ , ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಯನ್ನು ಅವರು ಹೊಂದಿದ್ದಾರೆ. ಅಂತೆಯೇ ತಮ್ಮ ಫೋಟೊ ಶೂಟ್ ವಿಡಿಯೋ ಕೂಡ ಅವರು ಆಗಾಗ ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಈ ಬಾರಿ ವೈರಲ್ ಆದ ಫೋಟೋದಲ್ಲಿ ನಟಿ ಮೇಘಾ ಶೆಟ್ಟಿ ಅವರು ಸೀರೆ ಉಟ್ಟು ಸ್ಟನಿಂಗ್ ಲುಕ್ ನಿಂದ ಪಡ್ಡೆ ಹುಡುಗರ ನಿದ್ದೆಕದ್ದಿದ್ದಾರೆ.

ನಟಿ ಮೇಘಾ ಶೆಟ್ಟಿ ಅವರು ಹಸಿರು ಬಣ್ಣದ ಸೀರೆಯಲ್ಲಿ ಸಖತ್ ಬೋಲ್ಡ್ ಆಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದ ಕಾರಣ ಕ್ಲಾಸಿಕ್ ಆಗಿಯೂ ಇವರು ಮಿಂಚಿದ್ದಾರೆ. ಯಾವುದೇ ಡಿಸೈನ್ ಇಲ್ಲದ ಈ ಸೀರೆಯೂ ಅವರ ಅಂದಕ್ಕೆ ಹೊಸ ಮೆರುಗು ನೀಡಿದಂತಿದೆ.

ಸಿಂಪಲ್ ಮೇಕಪ್ ಹಾಗೂ ಫ್ರಿ ಹೇರ್ ಸ್ಟೈಲ್ ನಿಂದ ನಟಿ ಮೇಘಾ ಶೆಟ್ಟಿ ಅವರು ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಯಾವುದೇ ಆಭರಣ ಧರಿಸದೆ ಡಿಫರೆಂಟ್ ಆಗಿರುವ ಮೂಗುತಿ ಯನ್ನು ಧರಿಸುವ ಮೂಲಕ ಹೆಚ್ಚು ಹೈಲೆಟ್ ಆಗಿದ್ದಾರೆ. ಸೀರೆಯನ್ನು ಕೂಡ ಬಹಳ ವಿಭಿನ್ನವಾಗಿ ತೊಟ್ಟಿದ್ದು ಸೆಕ್ಸಿಯಾಗಿ ಕಂಡಿದ್ದಾರೆ.

ಮೂಗುತಿ ಸುಂದರಿಯಂತೆ ಮೇಘಾ ಶೆಟ್ಟಿ ಅವರು ಈ ಫೋಟೊದಲ್ಲಿ ಕ್ಲಾಸಿಕಲ್ ಆಗಿಯೂ ಸಹ ಕಂಡಿದ್ದಾರೆ. ಸ್ಲೀವ್ ಲೆಸ್ ಬ್ಲೌಸ್ ನಿಂದ ಸೀರೆಯಲ್ಲಿ ವಿಭಿನ್ನವಾಗಿ ಮಿಂಚಿದ್ದಾರೆ. ಗ್ರೀನ್ ಕಲರ್ ಬ್ಯಾಕ್ ಗ್ರೌಂಡ್ ನಲ್ಲಿ ನೈಟ್ ಎಫೆಕ್ಟ್ ನೊಂದಿಗೆ ಈ ಫೋಟೊ ಶೂಟ್ ಮಾಡಿಸಿಕೊಂಡ ಕಾರಣ ಗ್ಲಾಮರಸ್ ಆಗಿ ನಟಿ ಮೇಘಾ ಕಂಡಿದ್ದಾರೆ.

ಈ ಫೋಟೊ ಕಂಡ ಅವರ ಫ್ಯಾನ್ಸ್ ಸೋಶಿಯಲ್ ಮಿಡಿಯಾದಲ್ಲಿ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿ ದ್ದಾರೆ. ನಿಮ್ಮ ಸೌಂದರ್ಯಕ್ಕೆ ಸಾಟಿ ಬೇರೇನಿಲ್ಲ. ಈ ನೀಲಾಂಬರಿಯ ಲುಕ್ ತುಂಬಾ ಇಷ್ಟ ವಾಯಿತು ಕಾಮೆಂಟ್ ಹಾಕಿದ್ದಾರೆ. ಲುಕ್ಕಿಂಗ್ ಸೋ ಬ್ಯುಟಿಫುಲ್, ಮುಂದಿನ ಸಿನಿಮಾಕ್ಕಾಗಿ ಕಾಯುತ್ತಿದ್ದೇವೆ ಎಂದು ಮತ್ತೊಬ್ಬ ನೆಟ್ಟಿಗರು ಕೂಡ ಕಾಮೆಂಟ್ ಹಾಕಿದ್ದರು

2019ರಲ್ಲಿ ಜೀ ಕನ್ನಡದ ಜೊತೆ ಜೊತೆ ಧಾರವಾಹಿಯ ಮುಗ್ದ ಹುಡುಗಿ ಅನು ಪಾತ್ರದಲ್ಲಿ ಇವರು ಮಿಂಚಿದ್ದರು. ಬಳಿಕ 2022ರಲ್ಲಿ ತ್ರಿಬಲ್ ರೈಡಿಂಗ್ ಹಾಗೂ ದಿಲ್ ಪಸಂದ್ ಮತ್ತು 2023ರಲ್ಲಿ ಕೈವಾ ಸಿನಿಮಾದಲ್ಲಿ ಮಿಂಚಿದ್ದರು. ಬಳಿಕ ಕಲರ್ಸ್ ಕನ್ನಡ ಧಾರವಾಹಿಯ ಮುದ್ದು ಸೊಸೆಗೆ ಪ್ರೊಡ್ಯೂಸರ್ ಆಗಿದ್ದಾರೆ.

ಇದೀಗ ತಮಿಳಿನ ಕಾಳೈಯನ್ ಸಿನಿಮಾದಲ್ಲಿ ಕೂಡ ಇವರು ಅಭಿನಯಿಸಲಿದ್ದಾರೆ. ಈ ಮೂಲಕ ಕಾಲಿವುಡ್ನಲ್ಲಿ ಮತ್ತಷ್ಟು ಸಿನಿಮಾ ಆಫರ್ ಬರುತ್ತಾ ಎಂದು ಕಾದು ನೋಡಬೇಕು.