Poila Boishakh 2025: ಪಶ್ಚಿಮ ಬಂಗಾಳದ ಪೊಯಿಲಾ ಬೈಸಾಖ್ ಹೇಗಿರುತ್ತೆ? ಇಲ್ಲಿವೆ ಫೋಟೋಸ್
ಪೊಹೆಲಾ ಬೋಯಿಶಾಖ್, ಅಥವಾ ಪೊಯಿಲಾ ಬೈಸಾಖ್ ಅಥವಾ ನೊಬೊಬೋರ್ಷೊ ಎಂದೂ ಕರೆಯಲ್ಪಡುತ್ತದೆ, ಇದು ಬಂಗಾಳಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ . ಬಂಗಾಳಿ ಸೌರ ಕ್ಯಾಲೆಂಡರ್ನಲ್ಲಿ ಬೊಯಿಶಾಖ್ನ ಮೊದಲ ದಿನದಂದು ಆಚರಿಸಲಾಗುವ ಈ ಉತ್ಸಾಹಭರಿತ ಹಬ್ಬವನ್ನು ಬಾಂಗ್ಲಾದೇಶದಾದ್ಯಂತ ಮತ್ತು ಪಶ್ಚಿಮ ಬಂಗಾಳ, ತ್ರಿಪುರ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತದೆ.



ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚರಣೆಯ ನಡುವೆ ರಾಜ್ಯದಾತ್ಯಂತ 2025 ರ ಪೊಹೆಲಾ ಬೊಯಿಶಾಖ್ನನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಪೋಹೆಲಾ ಬೋಯಿಶಾಖ್ ಎಂದೂ ಕರೆಯಲ್ಪಡುವ ನಬ ಬರ್ಷಾ, ಬಂಗಾಳಿ ಕ್ಯಾಲೆಂಡರ್ನ ಮೊದಲ ದಿನವಾಗಿದೆ. "ಪೋಹೆಲಾ" ಎಂದರೆ ಮೊದಲು ಮತ್ತು ಬಂಗಾಳಿ ವರ್ಷದ ಮೊದಲ ತಿಂಗಳನ್ನು "ಬೋಯಿಶಾಖ್" ಎಂದು ಕರೆಯಲಾಗುತ್ತದೆ.

ಬಂಗಾಳಿ ಕಲ್ಯಾಣ ಸಮಿತಿಯ ಸದಸ್ಯರು ಬಂಗಾಳಿ ಹೊಸ ವರ್ಷಾಚರಣೆಗೆ ಮುಂಚಿತವಾಗಿ ಪ್ರಭಾತ್ ಫೆರಿಯಲ್ಲಿ ಭಾಗವಹಿಸಿದ್ದಾರೆ. ಜನರು ಪ್ರಾರ್ಥನೆ ಸಲ್ಲಿಸಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

ಬಂಗಾಳದ ಬೀದಿಗಳು ಇಂದು ವರ್ಣರಂಜಿತವಾಗಿದ್ದವು. ಮಹಿಳೆಯರು ಬಂಗಾಳಿ ಉಡುಗೆತೊಟ್ಟು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಬಂಗಾಳಿ ಹೊಸ ವರ್ಷವನ್ನು ಆಚರಿಸುವ ಆಚರಣೆಯ ಸಮಯದಲ್ಲಿ ಜನರು ಬೀದಿಯಲ್ಲಿ ಮೆರವಣಿಗೆ ನಡೆಸುತ್ತಿರುವಾಗ ಭದ್ರತಾ ಸಿಬ್ಬಂದಿಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾವಲು ಕಾದಿದ್ದಾರೆ.

ಡ್ರೈಕ್ ಪಂಚಾಂಗ್ ಪ್ರಕಾರ, ಬಂಗಾಳಿ ಯುಗವನ್ನು ಪ್ರಾಚೀನ ಬಂಗಾಳದ ರಾಜ ಶೋಶಾಂಗ್ಕೊ ಪ್ರಾರಂಭಿಸಿದನು ಎಂದು ನಂಬಲಾಗಿದೆ, ಇದು ಗ್ರೆಗೋರಿಯನ್ ಕ್ಯಾಲೆಂಡರ್ನಲ್ಲಿ ಸುಮಾರು 594 CE ಯಷ್ಟು ಹಿಂದಿನದು. ಈ ಶುಭ ದಿನದಂದು ಜನರು ಸಮೃದ್ಧ ಸುಗ್ಗಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ವ್ಯಾಪಾರಿಗಳು ಹೊಸ ಹಣಕಾಸು ವರ್ಷವನ್ನು ಹಾಲ್ ಖಾತಾ ಎಂದು ಕರೆಯಲ್ಪಡುವ ತಮ್ಮ ಹೊಸ ಲೆಕ್ಕಪತ್ರ ಪುಸ್ತಕಗಳನ್ನು ತೆರೆಯುವ ಮೂಲಕ ಪ್ರಾರಂಭಿಸುತ್ತಾರೆ.

ಕುಟುಂಬದೊಂದಿಗೆ ಪೊಯ್ಲಾ ಬೈಸಾಖ್ ಆಚರಿಸಲು, ಸಾಂಪ್ರದಾಯಿಕ ಬಂಗಾಳಿ ಉಡುಪನ್ನು ಧರಿಸಿ ಮತ್ತು ಆಶೀರ್ವಾದಕ್ಕಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರಾರಂಭಿಸಲಾಗುತ್ತದೆ. ಮಿಶ್ತಿ ದೋಯಿ ಮತ್ತು ರೋಶೊಗೊಲ್ಲಾದಂತಹ ಸಿಹಿ ತಿನಿಸುಗಳೊಂದಿಗೆ ಹಬ್ಬದ ಭೋಜನವನ್ನು ತಯಾರಿಸಲಾಗುತ್ತದೆ. ಕೋಲ್ಕತ್ತಾದಲ್ಲಿ, ಈ ದಿನವನ್ನು ಹೆಚ್ಚಾಗಿ ಪ್ರಮುಖ ಸ್ಥಳಗಳಲ್ಲಿ ಭವ್ಯ ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ.