Pooja Hegde: ಕಾಂಜೀವರಂ ಸೀರೆಯುಟ್ಟ ಮಸ್ತಾಗಿ ಪೋಸ್ ಕೊಟ್ಟ ನಟಿ ಪೂಜಾ ಹೆಗ್ಡೆ
ಬಹುಭಾಷಾ ಸಿನಿಮಾಗಳಲ್ಲಿ ತೆರೆಹಂಚಿಕೊಂಡಿರುವ ಕರಾವಳಿ ಬೆಡಗಿ ನಟಿ ಪೂಜಾ ಹೆಗ್ಡೆ ತಮ್ಮ ಗ್ಲ್ಯಾಮರ್ ಲುಕ್ನಿಂದಲೂ ಸದ್ದು ಮಾಡುತ್ತಿರುತ್ತಾರೆ. ಇದೀಗ ಅವರು ರೇಷ್ಮೆ ಸೀರೆ ಧರಿಸಿ ಫೋಟೊಗಳಿಗೆ ಪೋಸ್ ನೀಡಿದ್ದಾರೆ. ನಟಿಯ ಈ ಸೊಬಗಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Pooja Hegde


ʼಮುಗಮೂಡಿ' ತಮಿಳು ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನಟಿ ಪೂಜಾ ಹೆಗ್ಡೆ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ನಲ್ಲೂ ನಟಿಸಿದ್ದಾರೆ. ಸದ್ಯ ನಟಿ ಕಾಂಜಿವರಂ ಸೀರೆ ಧರಿಸಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು. ಇವರ ಲುಕ್ಗೆ ಫ್ಯಾನ್ಸ್ ಮನ ಸೋತಿದ್ದಾರೆ.

ಪೂಜಾ ಹೆಗ್ಡೆ ಕಾಂಜೀವರಂ ಸೀರೆ ಧರಿಸಿ ಪೋಸ್ ನೀಡಿದ ಫೋಟೊಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಗಾಢ ನೇರಳೆ ಬಣ್ಣದ ಸೀರೆಯಲ್ಲಿ ನಟಿ ಮಹಾರಾಣಿಯಂತೆ ಕಂಡಿದ್ದು ಲಕ್ಷಾಂತರ ಲೈಕ್, ಕಾಮೆಂಟ್ ಬಂದಿದೆ.

ಪೂಜಾ ಹೆಗ್ಡೆ ಹಸಿರು ಮತ್ತು ಗೋಲ್ಡ್ ಕಾಂಬಿನೇಶನ್ ಸೀರೆಯಲ್ಲಿಯೂ ಮಿಂಚಿದ್ದಾರೆ. ಜತೆಗೆ ಕೈಗೆ ಹಸಿರು ಪ್ಲೈನ್ ಬಳೆಗಳನ್ನು ಧರಿಸಿದ್ದು ಸೀರೆಗೆ ತಕ್ಕನಾದ ಆಭರಣ ತೊಟ್ಟು ಸಾಂಪ್ರಾದಾಯಿಕವಾಗಿ ರೆಡಿಯಾಗಿದ್ದಾರೆ.

ಜತೆಗೆ ಪೂಜಾ ಹೆಗ್ಡೆ ಆಕರ್ಷಕವಾದ ಹಳದಿ ಬಣ್ಣದ ಸೀರೆ ಉಟ್ಟುಕೊಂಡು ಪೋಸ್ ಕೊಟ್ಟಿದ್ದಾರೆ. ನಟಿ ಸೀರೆಗೆ ಮ್ಯಾಚ್ ಆಗುವ ಆಭರಣ ತೊಟ್ಟು ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ. ಅವರ ಫೋಟೊ ಇದೀಗ ಬಹಳಷ್ಟು ವೈರಲ್ ಆಗಿದೆ.

ನಾಗ ಚೈತನ್ಯ ಅಭಿನಯದ 'ಒಕಾ ಲೈಲಾ ಕೋಸಂ' ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿಕೊಟ್ಟ ಪೂಜಾ ಹೆಗ್ಡೆ ನಂತರ ವರುಣ್ ತೇಜ್ ನಟಿಸಿದ 'ಮುಕುಂದ' ಚಿತ್ರದಲ್ಲೂ ಕಾಣಿಸಿಕೊಂಡರು. ಬಾಲಿವುಡ್ನಲ್ಲೂ ಮಿಂಚಿದ ಅವರು ಹೃತಿಕ್ ರೋಷನ್ ಜತೆ ʼಮೊಹೆಂಜೊ ದಾರೋʼ ಚಿತ್ರದಲ್ಲಿ ನಟಿಸಿದ್ದಾರೆ.

ಪ್ರಸ್ತುತ ರಜನಿಕಾಂತ್ ʼಕೂಲಿʼ ಸಿನಿಮಾದ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜತೆಗೆ ಹಿಂದಿಯ ʼಹೇ ಜವಾನಿʼ ಮತ್ತು ತಮಿಳಿನಲ್ಲಿ ದಳಪತಿ ವಿಜಯ್ ಅವರ ಕೊನೆಯ ಚಿತ್ರ ʼಜನನಾಯಕನ್ʼ, ಲಾರೆನ್ಸ್ ಅವರೊಂದಿಗೆ ʼಕಾಂಚನಾʼ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.