Ramayana Movie: ಬಿಗ್ ಬಜೆಟ್ ʼರಾಮಾಯಣʼ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸುವ ಕಲಾವಿದರಿವರು
ಬಾಲಿವುಡ್ನ ಬಿಗ್ ಬಜೆಟ್ ಸಿನಿಮಾ ʼರಾಮಾಯಣʼ ಮುಂದಿನ ವರ್ಷ ತೆರೆಗೆ ಬರಲಿದ್ದು, ಶೂಟಿಂಗ್ ಭರದಲ್ಲಿ ನಡೆಯುತ್ತಿದೆ. ನಿತೇಶ್ ತಿವಾರಿ ನಿರ್ದೇಶದಲ್ಲಿ ಮೂಡಿ ಬರುವ ಈ ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಹಲವು ಜನಪ್ರಿಯ ಕಲಾವಿದರು ಅಭಿನಯಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಮುಖ್ಯ ಪಾತ್ರವರ್ಗವನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
                                Ramayana -
 Pushpa Kumari
                            
                                Jun 10, 2025 7:13 PM
                                
                                Pushpa Kumari
                            
                                Jun 10, 2025 7:13 PM
                             
                    ಬಾಲಿವುಡ್ನಲ್ಲಿ ತಯಾರಾಗುತ್ತಿರುವ 'ರಾಮಾಯಣ' ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಬಗ್ಗೆ ಕುತೂಹಲಕಾರಿ ವಿಚಾರಗಳು ಒಂದೊಂದಾಗಿ ಹೊರ ಬೀಳುತ್ತಿವೆ. ʼರಾಮಾಯಣʼ ಸಿನಿಮಾದ ಸ್ಟಾರ್ ಕಾಸ್ಟ್ ಬಗ್ಗೆ ತಿಳಿಯಲು ಸಿನಿ ಪ್ರಿಯರು ಕಾತುರರಾಗಿದ್ದಾರೆ. ಈಗಾಗಲೇ ರಾಮನಾಗಿ ರಣಬೀರ್ ಕಪೂರ್ ಮತ್ತು ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸುವುದು ಪಕ್ಕಾ ಆಗಿದೆ.
 
                    ರಾಮಾಯಣದಲ್ಲಿ ನಾಯಕಿಯಾಗಿ, ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ ಸಾಯಿ ಪಲ್ಲವಿ ಹಾಗೂ ಕೈಕೇಯಿಯಾಗಿ ನಟಿ ಲಾರಾ ದತ್ತಾ ನಟಿಸಲಿದ್ದಾರೆ.
 
                    ಸದ್ಯ ಬಾಲಿವುಡ್ನಲ್ಲಿ ಮಿಂಚುತ್ತಿರುವ ನಟಿಯರಾದ ರಾಕುಲ್ ಪ್ರೀತ್ ಸಿಂಗ್ ಶೂರ್ಪನಖಿ ಮತ್ತು ಕಾಜಲ್ ಅಗರ್ವಾಲ್ ಮಂಡೋದರಿಯಾಗಿ ನಟಿಸಲಿದ್ದಾರೆ.
 
                    ʼರಾಮಾಯಣʼದಲ್ಲಿ ಬರುವ ಮುಖ್ಯ ಪಾತ್ರಗಳಲ್ಲಿ ಹನುಮಂತ ಕೂಡ ಒಂದು. ನಟ ಸನ್ನಿ ಡಿಯೋಲ್ ಈ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಕ್ಷ್ಮಣನಾಗಿ ನಟ, ನಿರೂಪಕ, ನಿರ್ಮಾಪಕ ರವಿ ದುಬೆ ನಟಿಸಲಿದ್ದಾರೆ.
 
                    ʼರಾಮಾಯಣʼ ಸೀರಿಯಲ್ನಲ್ಲಿ ರಾಮನಾಗಿ ಖ್ಯಾತಿ ಪಡೆದಿದ್ದ ನಟ ಅರುಣ್ ಗೋವಿಲ್ ಈ ʼರಾಮಾಯಣʼ ಸಿನಿಮಾದಲ್ಲಿ ದಶರಥನಾಗಿ ಕಾಣಿಸಿಕೊಂಡರೆ, ರಾಮನ ಸಹೋದರ ಭರತನಾಗಿ ಆದಿನಾಥ್ ಕೊಠಾರೆ ಬಣ್ಣಹಚ್ಚಲಿದ್ದಾರೆ.
 
                    ನಟಿ ಇಂದಿರಾ ಕೃಷ್ಣನ್ ರಾಣಿ ಕೌಸಲ್ಯೆ ಪಾತ್ರವನ್ನು ನಿರ್ವಹಿಸಲಿದ್ದಾರೆ. ಶೀಬಾ ಚಡ್ಡಾ ಮಂಥರೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
 
                    ಕುನಾಲ್ ಕಪೂರ್ ಇಂದ್ರ ದೇವನಾಗಿ ನಟಿಸಲಿದ್ದಾರೆ ಹಾಗೂ ನಟ ವಿವೇಕ್ ಒಬೆರಾಯ್ ವಿದ್ಯುದ್ವಿಜ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.
 
                    ʼರಾಮಾಯಣʼ ಭಾಗ 1 2026ರ ದೀಪಾವಯಂದು ಬಿಡುಗಡೆಯಾಗಲಿದ್ದು, 'ರಾಮಾಯಣʼ ಭಾಗ 2 2027ರ ದೀಪಾವಳಿಯಂದು ರಿಲೀಸ್ ಆಗಲಿದೆ. ಬಾಲಿವುಡ್ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದ್ದು, ಚಿತ್ರದ ತಯಾರಿ ಭರ್ಜರಿಯಾಗಿಯೇ ನಡೆಯುತ್ತಿದೆ.
