ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramayana Movie: ಬಿಗ್ ಬಜೆಟ್ ʼರಾಮಾಯಣʼ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸುವ ಕಲಾವಿದರಿವರು

ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ ʼರಾಮಾಯಣʼ ಮುಂದಿನ ವರ್ಷ ತೆರೆಗೆ ಬರಲಿದ್ದು, ಶೂಟಿಂಗ್‌ ಭರದಲ್ಲಿ ನಡೆಯುತ್ತಿದೆ. ನಿತೇಶ್ ತಿವಾರಿ ನಿರ್ದೇಶದಲ್ಲಿ ಮೂಡಿ ಬರುವ ಈ ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್‌, ಸಾಯಿ ಪಲ್ಲವಿ ಸೇರಿದಂತೆ ಹಲವು ಜನಪ್ರಿಯ ಕಲಾವಿದರು ಅಭಿನಯಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಮುಖ್ಯ ಪಾತ್ರವರ್ಗವನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Ramayana
1/8

ಬಾಲಿವುಡ್‌ನಲ್ಲಿ ತಯಾರಾಗುತ್ತಿರುವ 'ರಾಮಾಯಣ' ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಬಗ್ಗೆ ಕುತೂಹಲಕಾರಿ ವಿಚಾರಗಳು ಒಂದೊಂದಾಗಿ ಹೊರ ಬೀಳುತ್ತಿವೆ. ʼರಾಮಾಯಣʼ ಸಿನಿಮಾದ ಸ್ಟಾರ್ ಕಾಸ್ಟ್​ ಬಗ್ಗೆ ತಿಳಿಯಲು ಸಿನಿ ಪ್ರಿಯರು ಕಾತುರರಾಗಿದ್ದಾರೆ. ಈಗಾಗಲೇ ರಾಮನಾಗಿ ರಣಬೀರ್ ಕಪೂರ್ ಮತ್ತು ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸುವುದು ಪಕ್ಕಾ ಆಗಿದೆ.

2/8

ರಾಮಾಯಣದಲ್ಲಿ ನಾಯಕಿಯಾಗಿ, ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ ಸಾಯಿ ಪಲ್ಲವಿ ಹಾಗೂ ಕೈಕೇಯಿಯಾಗಿ ನಟಿ ಲಾರಾ ದತ್ತಾ ನಟಿಸಲಿದ್ದಾರೆ.

3/8

ಸದ್ಯ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿಯರಾದ ರಾಕುಲ್ ಪ್ರೀತ್ ಸಿಂಗ್ ಶೂರ್ಪನಖಿ ಮತ್ತು ಕಾಜಲ್ ಅಗರ್ವಾಲ್ ಮಂಡೋದರಿಯಾಗಿ ನಟಿಸಲಿದ್ದಾರೆ.

4/8

ʼರಾಮಾಯಣʼದಲ್ಲಿ ಬರುವ ಮುಖ್ಯ ಪಾತ್ರಗಳಲ್ಲಿ ಹನುಮಂತ ಕೂಡ ಒಂದು. ನಟ ಸನ್ನಿ ಡಿಯೋಲ್ ಈ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಕ್ಷ್ಮಣನಾಗಿ ನಟ, ನಿರೂಪಕ, ನಿರ್ಮಾಪಕ ರವಿ ದುಬೆ ನಟಿಸಲಿದ್ದಾರೆ.

5/8

ʼರಾಮಾಯಣʼ ಸೀರಿಯಲ್‌ನಲ್ಲಿ ರಾಮನಾಗಿ ಖ್ಯಾತಿ ಪಡೆದಿದ್ದ ನಟ ಅರುಣ್ ಗೋವಿಲ್ ಈ ʼರಾಮಾಯಣʼ ಸಿನಿಮಾದಲ್ಲಿ ದಶರಥನಾಗಿ ಕಾಣಿಸಿಕೊಂಡರೆ, ರಾಮನ ಸಹೋದರ ಭರತನಾಗಿ ಆದಿನಾಥ್ ಕೊಠಾರೆ ಬಣ್ಣಹಚ್ಚಲಿದ್ದಾರೆ.

6/8

ನಟಿ ಇಂದಿರಾ ಕೃಷ್ಣನ್ ರಾಣಿ ಕೌಸಲ್ಯೆ ಪಾತ್ರವನ್ನು ನಿರ್ವಹಿಸಲಿದ್ದಾರೆ. ಶೀಬಾ ಚಡ್ಡಾ ಮಂಥರೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

7/8

ಕುನಾಲ್ ಕಪೂರ್ ಇಂದ್ರ ದೇವನಾಗಿ ನಟಿಸಲಿದ್ದಾರೆ ಹಾಗೂ ನಟ ವಿವೇಕ್ ಒಬೆರಾಯ್ ವಿದ್ಯುದ್ವಿಜ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

8/8

ʼರಾಮಾಯಣʼ ಭಾಗ 1 2026ರ ದೀಪಾವಯಂದು ಬಿಡುಗಡೆಯಾಗಲಿದ್ದು, 'ರಾಮಾಯಣʼ ಭಾಗ 2 2027ರ ದೀಪಾವಳಿಯಂದು ರಿಲೀಸ್‌ ಆಗಲಿದೆ. ಬಾಲಿವುಡ್​​ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದ್ದು, ಚಿತ್ರದ ತಯಾರಿ ಭರ್ಜರಿಯಾಗಿಯೇ ನಡೆಯುತ್ತಿದೆ.