Ratan Tata: ರತನ್ ಟಾಟಾ ಪುಣ್ಯತಿಥಿ; ಕೈಗಾರಿಕೋದ್ಯಮಿಯ ಯಶೋಗಾಥೆಯ ಒಂದು ಮೆಲುಕು
Ratan Tata Death Anniversary: ದೇಶ ಕಂಡ ಅತ್ಯಂತ ಗೌರವಯುತ, ಸೇವಾ ಮನೋಭಾವದ ಉದ್ಯಮಿ ರತನ್ ಟಾಟಾ ಅವರ ಪುಣ್ಯಸ್ಮರಣೆ. ಕಳೆದ ವರ್ಷ ವಯೋ ಸಹಜ ಕಾಯಿಲೆಗಳಿಂದ ತಮ್ಮ 86ನೇ ವಯಸ್ಸಿನಲ್ಲಿ ರತನ್ ತಮ್ಮ ಕೊನೆಯುಸಿರೆಳೆದಿದ್ದರು. ಕಳೆದ ಒಂದು ಶತಮಾನದಲ್ಲಿ ದೇಶ ಕಂಡ ಅತ್ಯಂತ ಗೌರವಯುತ, ಸೇವಾ ಮನೋಭಾವದ ಹೊಂದಿದ್ದ ಅವರ ಜೀವನ ಚರಿತ್ರೆ, ಬೆಳೆದು ಬಂದ ಹಾದಿ, ಕಂಪನಿಯ ಅಂಶಗಳು, ಆಸ್ತಿ ಮಾಹಿತಿ ಸೇರಿದಂತೆ ಪ್ರಮುಖ ಅಂಶಗಳು ಇಲ್ಲಿವೆ.
ಇಂದು ದೇಶ ಕಂಡ ಅತ್ಯಂತ ಗೌರವಯುತ, ಸೇವಾ ಮನೋಭಾವದ ಉದ್ಯಮಿ ರತನ್(Ratan Tata) ಟಾಟಾ ಅವರ ಪುಣ್ಯಸ್ಮರಣೆ. ಕಳೆದ ವರ್ಷ ವಯೋ ಸಹಜ ಕಾಯಿಲೆಗಳಿಂದ ತಮ್ಮ 86ನೇ ವಯಸ್ಸಿನಲ್ಲಿ ರತನ್ ತಮ್ಮ ಕೊನೆಯುಸಿರೆಳೆದಿದ್ದರು. ಉದ್ಯಮ ಮತ್ತು ಸಮಾಜಕ್ಕೆ ಅವರು ನೀಡಿದ ಅಮೋಘ ಕೊಡುಗೆಗಳನ್ನು ದೇಶ ಸ್ಮರಿಸುತ್ತಿರುವಾಗ, ತಮ್ಮ ಸಹಾನುಭೂತಿ ಮತ್ತು ಸೇವಾ ಮನೋಭಾವದಿಂದ ಹೃದಯದಲ್ಲಿ ಸ್ಥಾನ ಪಡೆದಿದ್ದ ರತನ್ ಅವರ ಅನುಪಸ್ಥಿತಿಯ ನೋವು ಅಸಂಖ್ಯಾತ ಜೀವಗಳಲ್ಲಿ ಇನ್ನೂ ಕಾಡುತ್ತಿದೆ. ದೊಡ್ಡ ಆಸ್ತಿವಂತರಾಗಿದ್ದರೂ ಅನಾಥಾಶ್ರಮದಲ್ಲೇ ಬೆಳೆದಿದ್ದ ರತನ್ ಟಾಟಾ ಜೀವನದ ಅವಿಸ್ಮರಣೀಯ ಮೈಲುಗಲ್ಲುಗಳನ್ನು ಮೆಲುಕು ಹಾಕೋಣ.
1971: ಸಂಕಷ್ಟದಲ್ಲಿದ್ದ ನ್ಯಾಷನಲ್ ರೇಡಿಯೋ ಆ್ಯಂಡ್ ಎಲೆಕ್ಟ್ರಾನಿಕ್ಸ್ ಕಂಪನಿ (ನೆಲ್ಕೋ)ಯ ನಿರ್ದೇಶಕರಾಗಿ ನೇಮಕ
1974: ಟಾಟಾ ಸನ್ಸ್ ಬೋರ್ಡ್‌ನ ನಿರ್ದೇಶಕರಾಗಿ ನೇಮಕ.
1975: ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲ್ಲಿ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಪ್ರೋಗ್ರಾಂ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
1981: ಟಾಟಾ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿ ನೇಮಕ. ಎರಡು ವರ್ಷಗಳ ನಂತರ, ಟಾಟಾ ಕಾರ್ಯತಂತ್ರದ ಯೋಜನೆಯನ್ನು ರೂಪಿಸುವ ಮೂಲಕ ಟಾಟಾ ಇಂಡಸ್ಟ್ರೀಸ್ ಅನ್ನು ಉನ್ನತ ತಂತ್ರಜ್ಞಾನ ಉದ್ಯಮಗಳಿಗೆ ಪ್ರವರ್ತಕರನ್ನಾಗಿ ಪರಿವರ್ತನೆಗೊಳಿಸಿದರು.
1986-1989: ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಅಧ್ಯಕ್ಷರಾಗಿ ಸೇವೆ
1991: ಜೆ.ಆರ್.ಡಿ ಟಾಟಾ ಅವರಿಂದ ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್‌ಗಳ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ
2000: ಭಾರತ ಸರ್ಕಾರದ ಮೂರನೇ ಅತ್ಯಂತ ಗೌರವಯುತ ನಾಗರಿಕ ಪ್ರಶಸ್ತಿ ಪದ್ಮ ಭೂಷಣ್ ಪ್ರದಾನ14. ಬ್ರಿಟಿಷ್ ಕಂಪನಿಯಾದ ಬ್ರನ್ನರ್ ಮಾಂಡ್ ಮತ್ತು ಯುರೋಪಿಯನ್ ಉಕ್ಕಿನ ದೈತ್ಯ ಕೋರಸ್ ಅನ್ನು ಸ್ವಾಧೀನಪಡಿಸಿಕೊಂಡ ಟಾಟಾ ಕೆಮಿಕಲ್ಸ್
ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಸ್ವಾಧೀನಪಡಿಸಿಕೊಂಡ ಟಾಟಾ. ಅದೇ ವರ್, ಭಾರತದ ಅತ್ಯಂತ ಕೈಗೆಟುಕುವ ಕಾರು ಟಾಟಾ ನ್ಯಾನೋ ಕಾರು ಬಿಡುಗಡೆ.
2008: ಭಾರತದ ದ್ವಿತೀಯ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಪದ್ಮ ವಿಭೂಷಣ್ ಪಡೆದ ರತನ್
2012: ಟಾಟಾ ಸಮೂಹದೊಂದಿಗಿನ ಐದು ದಶಕಗಳ ಸೇವೆಯ ನಂತರ ಟಾಟಾ ಸನ್ಸ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು, ಸೈರಸ್ ಮಿಸ್ಟ್ರಿಗೆ ದಾರಿ ಮಾಡಿಕೊಟ್ಟ ರತನ್. ಬಳಿಕ ಟಾಟಾ ಸನ್ಸ್‌ನ ಗೌರವಾಧ್ಯಕ್ಷರಾಗಿ ನೇಮಕ18. ಮಾರ್ಚ್ 2021ರಲ್ಲಿ ನಡೆದ ಕಾನೂನು ಹೋರಾಟದ ನಂತರ, ರತನ್ ಟಾಟಾ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ ಸೈರಸ್ ಮಿಸ್ತ್ರಿ. ಬಳಿಕ, ಟಾಟಾ ಗ್ರೂಪ್‌ನ ಹಂಗಾಮಿ ಅಧ್ಯಕ್ಷರಾಗಿ ಸೇವೆ
2020: ರತನ್ ಟಾಟಾ ಮಾರ್ಗದರ್ಶನದಲ್ಲಿ, COVID-19 ಮಹಾಮಾರಿಗೆ ಸಂಬಂಧಿಸಿದ ನೆರವು ಕಾರ್ಯಗಳಿ ಬೆಂಬಲಿಸಲು ₹1,500 ಕೋಟಿ ದೇಣಿಗೆ ನೀಡಲು ಮುಂದಾದ ಟಾಟಾ ಟ್ರಸ್ಟ್‌ಗಳು
2022: ಹಿರಿಯ ನಾಗರಿಕರಿಗಾಗಿ ಯುವ ಪದವೀಧರರೊಂದಿಗೆ ಸಂಪರ್ಕ ಸಾಧಿಸುವ ಸಹವರ್ತಿ ಸ್ಟಾರ್ಟ್ಅಪ್ ಗುಡ್‌ಫೆಲೋಸ್ ಅನ್ನು ಪ್ರಾರಂಭ.
2023: ಮಹಾರಾಷ್ಟ್ರ ಸರ್ಕಾರವು ರತನ್ ಟಾಟಾ ಅವರಿಗೆ ತನ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ “ಉದ್ಯೋಗ ರತ್ನ” ಪ್ರಶಸ್ತಿ ನೀಡಿ ಗೌರವಿಸಿತು.