Sankranti Fashion 2026: ಸಂಕ್ರಾಂತಿಗೆ ಇಲ್ಲಿದೆ 2 ಶೈಲಿಯ ಗ್ರ್ಯಾಂಡ್ ಸೀರೆ ಡ್ರೇಪಿಂಗ್ ಐಡಿಯಾ
ಸಂಕ್ರಾಂತಿಯ ಸಂಭ್ರಮಕ್ಕೆ ಸಾಥ್ ನೀಡುವ 2 ಶೈಲಿಯ ಸೀರೆ ಡ್ರೇಪಿಂಗ್ ಟ್ರೆಂಡಿಯಾಗಿವೆ. ನೋಡಲು ಡಿಫರೆಂಟ್ ಲುಕ್ ನೀಡುವುದು ಹಾಗೂ ನಿಮ್ಮನ್ನು ಅತ್ಯಾಕರ್ಷಕವಾಗಿಸುವುದು ಎನ್ನುವ ಸೀರೆ ಡ್ರೇಪಿಸ್ಟ್ ಲೌಕ್ಯ, ಎರಡು ಬಗೆಯ ಈ ಸೀರೆ ಡ್ರೇಪಿಂಗ್ ಹಾಗೂ ಸ್ಟೈಲಿಂಗ್ ಬಗ್ಗೆ ವಿವರಿಸಿದ್ದಾರೆ.
ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಸೀರೆ ಡ್ರೇಪಿಂಗ್ (ಚಿತ್ರದಲ್ಲಿರುವವರು: ಲೌಕ್ಯ, ಶಿಲ್ಪಾ, ಪ್ರಕೃತಿ) -
ಸಂಕ್ರಾಂತಿಯ ಸಂಭ್ರಮಕ್ಕೆ ಸೀರೆ ಉಡುವುದು ಕಾಮನ್. ಆದರೆ, ಈ ಬಾರಿ ನೀವು ಉಡುವ ಸೀರೆಯ ಡ್ರೇಪಿಂಗ್ ವಿಭಿನ್ನವಾಗಿಸಿ. ನೋಡಲು ಡಿಫರೆಂಟ್ ಲುಕ್ ನೀಡುವುದು ಹಾಗೂ ನಿಮ್ಮನ್ನು ಅತ್ಯಾಕರ್ಷಕವಾಗಿಸುವುದು ಎನ್ನುವ ಸೀರೆ ಡ್ರೇಪಿಸ್ಟ್ ಲೌಕ್ಯ 2 ಬಗೆಯ ಈ ಸೀರೆ ಡ್ರೇಪಿಂಗ್ ಹಾಗೂ ಸ್ಟೈಲಿಂಗ್ ಬಗ್ಗೆ ವಿವರಿಸಿದ್ದಾರೆ.
ಟ್ರೆಂಡಿಯಾಗಿರುವ ನಟಿ ಸ್ನೇಹಾ ಡಬಲ್ ಸೀರೆ ಡ್ರೇಪಿಂಗ್
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿರುವ ನಟಿ ಸ್ನೇಹಾ ಉಟ್ಟಿರುವ ಡಬಲ್ ಸೀರೆಯ ಡಬಲ್ ಡ್ರೇಪಿಂಗನ್ನು ಈ ಹಬ್ಬದಂದು ಉಟ್ಟು ನೋಡಿ. ಈ ಸೀರೆ ಶೈಲಿಯು ಸಾಕಷ್ಟು ಟ್ರೆಂಡಿಯಾಗಿದೆ. ಇದಕ್ಕಾಗಿ ಎರಡು ಕಾಂಟ್ರಾಸ್ಟ್ ಶೇಡ್ ಗ್ರ್ಯಾಂಡ್ ಸೀರೆ ಆಯ್ಕೆ ಮಾಡಿ. ಮೊದಲೇ ಒಂದು ಸೀರೆಯನ್ನು ಪ್ರೀ ಡ್ರೇಪ್ ಮಾಡಿಡಿ. ಲೆಹೆಂಗಾ ಸೀರೆಯಂತೆ ನೆರಿಗೆಯನ್ನು ಪಿನ್ ಮಾಡಿಟ್ಟುಕೊಂಡಿರಿ. ಉಡುವಾಗ ಟಕ್ ಮಾಡಿ ಲಂಗದಂತೆ ಉಟ್ಟುಕೊಳ್ಳಿ. ಸೆರಗನ್ನು ಬಲಗೈನಲ್ಲಿ ತೆಗೆದುಕೊಳ್ಳಿ. ಈಗ ಮತ್ತೊಂದು ಕಾಂಟ್ರಾಸ್ಟ್ ಬಣ್ಣದ ಸೀರೆಯನ್ನು ದಾವಣಿಯಂತೆ ನೆರಿಗೆ ಮಾಡಿ ಟಕ್ ಮಾಡಿ ಸೆರಗನ್ನು ಪ್ಲೀಟ್ ಮಾಡಿ ಪಿನ್ ಮಾಡಿ. ಕನ್ಫ್ಯೂಸ್ ಆಗುತ್ತಿದ್ದಲ್ಲಿ ಈ ಶೈಲಿಯ ಡ್ರೇಪಿಂಗ್ ಕುರಿತಂತೆ ಯುಟ್ಯೂಬ್ನಲ್ಲಿಯೂ ಮಾಹಿತಿ ಲಭ್ಯ.
ಲೆಹೆಂಗಾ ಮೇಲೆ ಸೀರೆ ಡ್ರೇಪಿಂಗ್
ಈ ಶೈಲಿ ಸೀರೆ ಉಡುವುದು ಇತ್ತೀಚೆಗೆ ಫ್ಯಾಷನ್ ಆಗಿದೆ. ಹುಡುಗಿಯರು ಮಾತ್ರವಲ್ಲ, ಮಹಿಳೆಯರು ಕೂಡ ಲೆಹೆಂಗಾವನ್ನು ಧರಿಸಿ, ಸೀರೆ ಉಟ್ಟಲ್ಲಿ ಹಳೆಯ ಲೆಹೆಂಗಾಗೂ ಹೊಸ ಲುಕ್ ನೀಡಬಹುದು. ಇದಕ್ಕಾಗಿ ಯಾವುದೇ ಲೆಹೆಂಗಾ ಆಯ್ಕೆ ಮಾಡಿಕೊಂಡು ಧರಿಸಬಹುದು. ಇದಕ್ಕೆ ಕಾಂಟ್ರಸ್ಟ್ ಆಗಿರುವಂತಹ ಸೀರೆ ಆಯ್ಕೆ ಮಾಡಿ ದಾವಣಿಯಂತೆ ನೆರಿಗೆ ಮಾಡಬೇಕು. ಹಿಂಭಾಗದಲ್ಲಿ ಒಂದಿಷ್ಟು ನೆರಿಗೆಗಳನ್ನು ಮಾಡಿ ಸಿಕ್ಕಿಸಬೇಕು. ಮುಂಭಾಗದಲ್ಲಿ ಕೊಂಚ ಲೂಸಾಗಿ ನೆರಿಗೆ ಮಾಡಿ ಡಾಬು ಧರಿಸಬೇಕು.
- ಸೀರೆಯನ್ನು ಪ್ರೀ ಡ್ರೇಪಿಂಗ್ ಮಾಡಿದಲ್ಲಿ ಈ ಶೈಲಿಯಲ್ಲಿ ಉಡಲು ಸುಲಭವಾಗುತ್ತದೆ.
- ಈ ರೀತಿಯ ಸೀರೆಗಳನ್ನು ಸ್ಟೈಲಿಂಗ್ ಮಾಡಲು ಮತ್ತೊಬ್ಬರ ಸಹಾಯ ಅತ್ಯಗತ್ಯ.
- ಸೀರೆಯ ಆಯ್ಕೆ ಮೇಲೆ ಇವುಗಳ ಲುಕ್ ನಿರ್ಧರಿತವಾಗುತ್ತದೆ.