ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Season Fashion 2026: ಟ್ರೆಂಡಿಯಾದ ಅಮೈರಾ ಧರಿಸಿದ ಕೋ ಆರ್ಡ್ ಶರಾರ ಸೂಟ್‌

ಬಾಲಿವುಡ್‌ ನಟಿ ಅಮೈರಾ ದಸ್ತೂರ್‌ ಧರಿಸಿದ ಮಾನೋಕ್ರೋಮ್‌ ಶೇಡ್‌ನ ಶರಾರ ಕೋ ಆರ್ಡ್ ಸೂಟ್‌ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ. ಮೊದಲೆಲ್ಲ ಕಾಂಟ್ರಸ್ಟ್ ಶೇಡ್‌ನಲ್ಲಿ ದೊರೆಯುತ್ತಿದ್ದ ಈ ಶರಾರ ಸೂಟ್‌ಗಳು, ಇದೀಗ ಮಾನೋಕ್ರೋಮ್‌ ಕಲರ್‌ನಲ್ಲಿ ಅದರಲ್ಲೂ ಕೋ ಆರ್ಡ್ ಸೆಟ್‌ನಲ್ಲಿ ಎಂಟ್ರಿ ನೀಡಿದ್ದು, ಸದ್ಯ ಎಥ್ನಿಕ್‌ವೇರ್‌ ಕೆಟಗರಿಯಲ್ಲಿ ಟಾಪ್‌ ಲಿಸ್ಟ್ ಸೇರಿವೆ.‌

ಚಿತ್ರಗಳು: ಅಮೈರಾ ದಸ್ತೂರ್‌, ನಟಿ
1/5

ಸಖತ್‌ ಟ್ರೆಂಡಿ

ಬಾಲಿವುಡ್‌ ನಟಿ ಅಮೈರಾ ದಸ್ತೂರ್‌ ಧರಿಸಿದ ಮಾನೋಕ್ರೋಮ್‌ ಶೇಡ್‌ನ ಕೋ ಆರ್ಡ್ ಶರಾರ ಸೂಟ್‌ ಟ್ರೆಂಡಿಯಾಗಿದೆ.

2/5

ಮಾನೋಕ್ರೋಮ್‌ ಶರಾರ ಸೂಟ್‌

ಹೌದು, ಮೊದಲೆಲ್ಲ ಕಾಂಟ್ರಸ್ಟ್ ಶೇಡ್‌ನಲ್ಲಿ ದೊರೆಯುತ್ತಿದ್ದ ಈ ಶರಾರ ಸೂಟ್‌ಗಳು, ಇದೀಗ ಮಾನೋಕ್ರೋಮ್‌ ಕಲರ್‌ನಲ್ಲಿ ಅದರಲ್ಲೂ ಕೋ ಆರ್ಡ್ ಸೆಟ್‌ನಲ್ಲಿ ಎಂಟ್ರಿ ನೀಡಿದ್ದು, ಸದ್ಯ ಎಥ್ನಿಕ್‌ವೇರ್‌ ಕೆಟಗರಿಯಲ್ಲಿ ಟಾಪ್‌ ಲಿಸ್ಟ್ ಸೇರಿವೆ. ಎಥ್ನಿಕ್‌ ವೇರ್‌ ಹೈ ಫ್ಯಾಷನ್‌ ಲಿಸ್ಟ್‌ನಲ್ಲಿ ಹಂಗಾಮ ಎಬ್ಬಿಸಿವೆ.

3/5

ಅಮೈರಾ ದಸ್ತೂರ್‌ ಶರಾರ

ಇನ್ನು, ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ಬಾಲಿವುಡ್‌ ನಟಿ ಅಮೈರಾ ದಸ್ತೂರ್‌ ಧರಿಸಿದ್ದ, ಸ್ಕೈ ಬ್ಲ್ಯೂ ಸ್ಟ್ರಾಪ್‌ ಶರಾರ ಮಾನೋಕ್ರೋಮ್‌ ಕೋ ಆರ್ಡ್ ಸೂಟ್‌ ಈ ಔಟ್‌ಫಿಟ್‌ ಸದ್ಯ ಯುವತಿಯರನ್ನು ಸೆಳೆದಿರುವುದು ಮಾತ್ರವಲ್ಲ, ಆನ್‌ಲೈನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

4/5

ಏನಿದು ಶರಾರ ಸೂಟ್‌

ನಾರ್ತ್‌ ಇಂಡಿಯಾದಲ್ಲಿ ಸಾಕಷ್ಟು ಪ್ರಚಲಿತದಲ್ಲಿರುವ ಮೊಗಲರ ಕಾಲದ ವಿನ್ಯಾಸದ ಎಥ್ನಿಕ್‌ವೇರ್‌ ಇದು. ಕಾಲಕಳೆದಂತೆ ವಿನ್ಯಾಸಗಾರರ ಕೈಗೆ ಸಿಲುಕಿ ಹೊಸ ರೂಪವನ್ನು ಪಡೆದುಕೊಂಡು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಬಿಡುಗಡೆಗೊಳ್ಳುತ್ತಲೇ ಇದೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್ ರಾಕಿ. ಅವರ ಪ್ರಕಾರ, ಮಂಡಿ ಭಾಗದಲ್ಲಿ ಚಿಕ್ಕ ಚಿಕ್ಕ ನೆರಿಗೆ ಹೊಂದಿರುವ ಪ್ಯಾಂಟನ್ನು ಶರಾರ ಎನ್ನಲಾಗುತ್ತದೆ. ಇದರ ಜತೆಗೆ ಧರಿಸುವ ಕಮೀಝ್‌ ಸೇರಿದಂತೆ ಈ ಎರಡನ್ನು ಒಟ್ಟಾರೆ ಶರಾರ ಸೂಟ್‌ ಎನ್ನಲಾಗುತ್ತದೆ.

5/5

ಶರಾರ ಸೂಟ್‌ ಪ್ರಿಯರಿಗೆ ಟಿಪ್ಸ್

ಪರ್ಸನಾಲಿಟಿಗೆ ಹೊಂದುವಂತಹ ಡಿಸೈನ್‌ ಆಯ್ಕೆ ಮಾಡಿ.

  • ನಿಮ್ಮ ಆಯ್ಕೆಗೆ ತಕ್ಕಂತೆ ಸ್ಲೀವ್‌ ಡಿಸೈನ್‌ ವಿನ್ಯಾಸ ಬದಲಿಸಬಹುದು.
  • ಲೈಟ್‌ ಕಲರ್‌ನ ಕೋ ಆರ್ಡ್ ಸೂಟ್‌ ಆಯ್ಕೆ ಮಾಡಿ.
  • ಈ ಔಟ್‌ಫಿಟ್‌ ಧರಿಸಿದಾಗ ಆದಷ್ಟೂ ಕಾಲಿಗೆ ಸಿಲುಕುವಂತಹ ಪಾದರಕ್ಷೆಗಳನ್ನು ಧರಿಸಬೇಡಿ. ಕೊಂಚ ಹೀಲ್ಸ್ ಸ್ಯಾಂಡಲ್‌ಗಳನ್ನೇ ಧರಿಸಿ.

ಶೀಲಾ ಸಿ ಶೆಟ್ಟಿ

View all posts by this author