ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Season Shopping 2026: ವೀಕೆಂಡ್‌ಗೂ ಮುನ್ನವೇ ಶುರುವಾಯ್ತು ವ್ಯಾಲೆಂಟೈನ್ಸ್ ಡೇ ಶಾಪಿಂಗ್

Valentines Day Shopping: ವಾರಕ್ಕೂ ಮುನ್ನವೇ ವ್ಯಾಲೆಂಟೈನ್ಸ್ ಡೇ ಶಾಪಿಂಗ್ ಎಲ್ಲೆಡೆ ಆರಂಭಗೊಂಡಿದೆ. ಥೀಮ್‌ಗೆ ತಕ್ಕಂತೆ ಶಾಪಿಂಗ್ ಮಾಡುವ ಕ್ರೇಝ್ ಕೂಡ ಇದೀಗ ಶುರುವಾಗಿದೆ. ಯಾವುದೆಲ್ಲಾ ಬೇಡಿಕೆ ಹೆಚ್ಚಿಸಿಕೊಂಡಿದೆ. ಈ ಕುರಿತ ವರದಿ ಇಲ್ಲಿದೆ.

ಚಿತ್ರಗಳು: ಮಿಂಚು
1/5

ವ್ಯಾಲೆಂಟೈನ್ಸ್ ಡೇ ಗೆ ಇನ್ನೂ ಒಂದು ವಾರ ಬಾಕಿ ಇದೆ. ಆಗಲೇ ಶಾಪಿಂಗ್ ಶುರುವಾಗಿದೆ. ಇದಕ್ಕೆ ಪೂರಕ ಎಂಬಂತೆ, ಮಾಲ್‌ಗಳಲ್ಲಿ ಹಾಗೂ ಶಾಪಿಂಗ್ ಸೆಂಟರ್‌ಗಳಲ್ಲಿ ವೈವಿಧ್ಯಮಯ ಗಿಫ್ಟ್ ಐಟಂಗಳು ಹಾಗೂ ಔಟ್‌ಫಿಟ್‌ಗಳು ಎಂಟ್ರಿ ನೀಡಿವೆ.

2/5

ವ್ಯಾಲೆಂಟೈನ್ಸ್ ವೀಕ್ ಸ್ಪೆಷಲ್ ಶಾಪಿಂಗ್

ಇತ್ತೀಚಿನ ವರ್ಷಗಳಲ್ಲಿ ವ್ಯಾಲೆಂಟೈನ್ಸ್ ಡೇಗಾಗಿ ಶಾಪಿಂಗ್ ಮಾಡುವ ಕಾನ್ಸೆಪ್ಟ್ ಹುಟ್ಟಿಕೊಂಡಿದೆ. ಅಷ್ಟೇಕೆ! ವಾರಗಟ್ಟಲೇ ವ್ಯಾಲೆಂಟೈನ್ಸ್ ವೀಕ್ ಆಚರಿಸುವುದು ಕೂಡ ಚಾಲ್ತಿಯಲ್ಲಿದೆ. ಇದಕ್ಕೆ ಪೂರಕ ಎಂಬಂತೆ, ವಯಸ್ಸಿನ ಭೇದ-ಭಾವವಿಲ್ಲದೇ ಯುವಕ-ಯುವತಿಯರು, ಮಹಿಳೆಯರು ಹಾಗೂ ಪುರುಷರು ಎಲ್ಲರೂ ತಮ್ಮ ಪ್ರೀತಿ ಪಾತ್ರರಿಗೆ ಇಷ್ಟವಾದಂತಹ ವಸ್ತುಗಳನ್ನು, ಔಟ್‌ಫಿಟ್‌ಗಳನ್ನು ಈಗಾಗಲೇ ಶಾಪಿಂಗ್ ಮಾಡುತ್ತಿದ್ದಾರೆ ಎನ್ನುತ್ತಾರೆ ಮಾಲ್‌ವೊಂದರ ಶಾಪಿಂಗ್ ಸೆಂಟರ್‌ನ ಮ್ಯಾನೇಜರ್ ರಕ್ಷ್. ಅವರ ಪ್ರಕಾರ, ಪ್ರೀತಿ ವ್ಯಕ್ತಪಡಿಸಲು ಈ ಕಾನ್ಸೆಪ್ಟ್ ಸಹಾಯ ಮಾಡುತ್ತಿದೆ. ಪರಿಣಾಮ, ಶಾಪಿಂಗ್ ಸೆಂಟರ್‌ಗಳಲ್ಲಿ ಬಿಸ್‌ನೆಸ್ ಹೆಚ್ಚುತ್ತಿದೆ ಎನ್ನುತ್ತಾರೆ.

3/5

ಬೇಡಿಕೆ ಹೆಚ್ಚಿಸಿಕೊಂಡಿರುವ ಗಿಫ್ಟ್ ಐಟಂಗಳಿವು

ಫೆಬ್ರವರಿ 7 ಅಂದರೇ ಶನಿವಾರದಿಂದ ಆರಂಭಗೊಳ್ಳುವ ವ್ಯಾಲೆಂಟೈನ್ಸ್ ಡೇ ವೀಕ್‌ನಲ್ಲಿ ರೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇಗಳು ನಮೂದಾಗಿವೆ. ಈ ಹಿನ್ನೆಲೆಯಲ್ಲಿ ಪ್ರೇಮಿಗಳಿಗೆ ಇಷ್ಟವಾಗುವಂತಹ ಎಲ್ಲಾ ಬಗೆಯ ಗಿಫ್ಟ್ ಐಟಂಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಎನ್ನುತ್ತಾರೆ ಶಾಪ್ವೊಂದರ ಸೇಲ್ಸ್ ಮೆನ್ ರಾಜಾ.

4/5

ವ್ಯಾಲೆಂಟೈನ್ಸ್ ಡೇಗೆ ಬಂತು ಔಟ್‌ಫಿಟ್ಸ್

ಇನ್ನು, ವ್ಯಾಲೆಂಟೈನ್ಸ್ ಡೇಗೆಂದೇ ನಾನಾ ಬಗೆಯ ಔಟ್‌ಫಿಟ್‌ಗಳು ಈಗಾಗಲೇ ಕಾಲಿಟ್ಟಿವೆ. ಅವುಗಳಲ್ಲಿ ಟ್ವಿನ್ನಿಂಗ್ ಡ್ರೆಸ್‌ಗಳು ಹೊಸ ರೂಪದಲ್ಲಿ ಬಂದಿದ್ದು, ಯೂನಿಸೆಕ್ಸ್ ಉಡುಗೆಗಳು ಕೂಡ ಕಾಣಿಸಿಕೊಂಡಿವೆ. ಎಂದಿನಂತೆ ನಾನಾ ಶೇಡ್‌ನ ರೆಡ್ ಡ್ರೆಸ್‌ಗಳು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಆಗಮಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ.

5/5

ವ್ಯಾಲೆಂಟೈನ್ಸ್ ಡೇ ಶಾಪಿಂಗ್ ಪ್ರಿಯರೇ ಗಮನಿಸಿ

  • ಟ್ರೆಂಡಿಯಾಗಿರುವ ಐಟಂಗಳಿಗಿಂತ ನಿಮ್ಮ ಪ್ರೀತಿ ಪಾತ್ರರಿಗೆ ಏನಿಷ್ಟ ಎಂಬುದನ್ನು ಗಮನಿಸಿ, ಖರೀದಿಸಿ.
  • ಆನ್‌ಲೈನ್‌ನಲ್ಲೂ ಊಹೆಗೂ ಮೀರಿದ ಗಿಫ್ಟ್ಸ್ ಹಾಗೂ ಔಟ್‌ಫಿಟ್‌ಗಳೂ ದೊರೆಯುತ್ತಿವೆ. ಆಯಾ ದಿನಕ್ಕೆ ಹೋಮ್ ಡಿಲೆವರಿ ಸೌಲಭ್ಯ ಕೂಡ ಲಭ್ಯ.
  • ಕಸ್ಟಮೈಸ್ಡ್ ಗಿಫ್ಟ್ ಐಂಟಗಳು ಇಂದು ಪಾಪುಲರ್ ಆಗಿವೆ.

ಶೀಲಾ ಸಿ ಶೆಟ್ಟಿ

View all posts by this author