Shilpa Shetty: ಕುಡ್ಲದ ಬೆಡಗಿ ಶಿಲ್ಪಾ ಶೆಟ್ಟಿಗೆ ಬರ್ತ್ಡೇ ಸಂಭ್ರಮ; ಇಲ್ಲಿದೆ ನಟಿಯ ಬೋಲ್ಡ್ ಫೋಟೋಸ್
Shilpa Shetty Birthday:ಬಾಲಿವುಡ್ ಫಿಟ್ನೆಸ್ ಬ್ಯೂಟಿ ಶಿಲ್ಪಾ ಶೆಟ್ಟಿ ಇಂದು 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತನ್ನ ಮೆಚ್ಚಿನ ನಟಿಗೆ ಅಭಿ ಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಶುಭ ಹಾರೈಸುತ್ತಿದ್ದಾರೆ. ಅಭಿನಯದ ಜೊತೆಗೆ ಫಿಟ್ನೆಸ್ ನಲ್ಲೂ ತೊಡಗಿಸಿ ಕೊಂಡಿರುವ ನಟಿಯ ಕೆಲ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.



ಬಾಲಿವುಡ್ನ ಖ್ಯಾತ ನಟಿಯಾಗಿ ಶಿಲ್ಪಾ ಶೆಟ್ಟಿ ಮಿಂಚಿದ್ದಾರೆ. ಸದ್ಯ ನಟಿ ಸಿನಿಮಾದಿಂದ ದೂರವಿದ್ದು ಯೋಗ ,ಫಿಟ್ನೆಸ್ ನತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ್ದ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಹೆಚ್ಚಾಗಿ ರಿಯಾಲಿಟಿ ಶೋಗಳ ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಿದ್ದಾರೆ.

ಶಿಲ್ಪಾ ಶೆಟ್ಟಿಗೆ ವರ್ಷ 50 ಆಗಿದ್ದರೂ ಅವರ ಯಂಗ್ ಲುಕ್ ಹಾಗೆಯೇ ಇದೆ. ಇದಕ್ಕೆ ಕಾರಣ ಅವರ ಫಿಟ್ನೆಸ್.. ಡಯಟ್, ಯೋಗ ವರ್ಕೌಟ್ಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಇವರು ಫ್ಯಾಷನ್ ಪ್ರಿಯರು ಆಗಿದ್ದಾರೆ.

ಮಾಡೆಲಿಂಗ್ ಮಾಡಿರುವ ಶಿಲ್ಪಾ ಶೆಟ್ಟಿ ತಮ್ಮ ವಸ್ತ್ರ ವಿನ್ಯಾಸದಿಂದ ಅಭಿಮಾನಿಗಳನ್ನು ತನ್ನತ್ತ ಮತ್ತಷ್ಟು ಸೆಳೆದು ಕೊಂಡಿದ್ದಾರೆ. ಅವರ ಸೀರೆಯ ಅದ್ಭುತ ಫ್ಯಾಶನ್ ಲುಕ್ ನ ಫೋಟೋ ವೈರಲ್ ಆಗುತ್ತಿದೆ.

90 ರ ದಶಕದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ಇವರು 1993 ರ ಥ್ರಿಲ್ಲರ್ 'ಬಾಜಿಗರ್' ಚಿತ್ರದಲ್ಲಿ ನಟಿಯ ಅದ್ಭುತ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ನಟಿ ರೆಡ್ ಬ್ಲೇಜರ್ ಕೋಟ್ ಧರಿಸಿ ಸಖತ್ ಸ್ಟೈಲಿಶ್ ಆಗಿ ಕಂಡಿದ್ದಾರೆ.

ಸ್ಟೈಲಿಶ್ ದಿರಿಸಿನ ಮೂಲಕ ಗಮನ ಸೆಳೆಯುವ ಶಿಲ್ಪಾ ಹ್ಯಾಂಡ್ಲೂಮ್ ವೈಟ್ ಸೀರೆ ಮೂಲಕ ನಟಿ ಮಿಂಚಿದ್ದಾರೆ. ಈ ಶ್ವೇತವರ್ಣದ ಸೀರೆ ಲುಕ್ ನಟಿಯ ಗ್ಲಾಮರ್ ಲುಕ್ ಗೆ ಫರ್ಪೆಕ್ಟ್ ಎಂಬಂತಿದೆ.

ಜಿಮ್ ಡ್ರೆಸ್ ನಲ್ಲಿ ಶಿಲ್ಪಾ ಶೆಟ್ಟಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಫಿಟ್ನೆಸ್ ಲುಕ್ ಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ಈ ಫೋಟೋ ಕೂಡ ಅಭಿಮಾನಿಗಳ ಗಮನ ಸೆಳೆದಿದೆ.

ಶಿಲ್ಪಾ ಶೆಟ್ಟಿ ಅವರು ಈವರೆಗೆ ಸರಿಸುಮಾರು 50ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ, ಪ್ರಿತ್ಸೋದ್ ತಪ್ಪಾ, ಒಂದಾಗೋಣ ಬಾ, ಆಟೋ ಶಂಕರ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೇ ಬಾಲಿವುಡ್ ನಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.