Star Fashion 2025: ಓವರ್ಸೈಜ್ ಮಿನಿ ವ್ರಾಪ್ ಡ್ರೆಸ್ನಲ್ಲಿ ನಟಿ ಪ್ರಣೀತಾ ಬಿಂದಾಸ್ ಲುಕ್
Pranitha Subhash: ಬೆರ್ರಿ ಯೆಲ್ಲೋ ಶೇಡ್ನ ಪಫ್ ಫುಲ್ ಸ್ಲೀವ್ ವ್ರಾಪ್ ಮಿನಿ ಡ್ರೆಸ್ನಲ್ಲಿ ಬಹುಭಾಷಾ ತಾರೆ ಪ್ರಣೀತಾ ಸುಭಾಷ್ ಡಿಫರೆಂಟ್ ಸ್ಟೈಲಿಶ್ ಪೋಸ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದಲ್ಲಿ ಇದ್ಯಾವ ಬಗೆಯ ಡ್ರೆಸ್? ಕಾನ್ಸೆಪ್ಟ್ ಏನು? ಈ ಕುರಿತಂತೆ ಫ್ಯಾಷನ್ ವಿಮರ್ಶಕರು ಇಲ್ಲಿ ವಿಶ್ಲೇಷಿಸಿದ್ದಾರೆ.

ಚಿತ್ರಗಳು: ಪ್ರಣೀತಾ ಸುಭಾಷ್, ನಟಿ., ಚಿತ್ರಕೃಪೆ: ಸಾಶ ಜಯ್ರಾಮ್


ಡಿಫರೆಂಟ್ ಲುಕ್
ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುವ ಮಿನಿ ವ್ರಾಪ್ ಡ್ರೆಸ್ನಲ್ಲಿ ಬಹುಭಾಷಾ ತಾರೆ ಪ್ರಣೀತಾ ಸುಭಾಷ್ ಕಾಣಿಸಿಕೊಂಡಿದ್ದಾರೆ.

ಪ್ರಣೀತಾ ಫ್ಯಾಷನ್ ಶೂಟ್
ಹೌದು, ಫ್ಯಾಷನ್ ಶೂಟ್ವೊಂದರಲ್ಲಿ ನಟಿ ಪ್ರಣೀತಾ, ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಇದ್ಯಾವ ಬಗೆಯ ಔಟ್ಫಿಟ್? ಎಂದು ಫಾಲೋವರ್ಸ್ ನಿಬ್ಬೆರಗಾಗಿದ್ದಾರೆ. ಫ್ಯಾಷನ್ ಫೋಟೋಗ್ರಾಫರ್ ಸಾಶ ಜಯ್ರಾಮ್ ಅವರ ಈ ಫ್ಯಾಷನ್ ಫೋಟೊಶೂಟ್ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಪ್ರಣೀತಾ ಸುಭಾಷ್ ಈ ಬಾರಿ ಕೊಂಚ ಡಿಫರೆಂಟ್ ಪೋಸ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಫ್ಯಾಷನ್ ಶೂಟ್ಗಳಲ್ಲಿ ಪ್ರಣೀತಾ ಬ್ಯುಸಿ
ಅಂದಹಾಗೆ, ನಟಿ ಪ್ರಣೀತಾ ಎಲ್ಲರಿಗೂ ಗೊತ್ತಿರುವಂತೆ ಸಖತ್ ಫ್ಯಾಷನಬಲ್ ನಟಿ. ಸಾಕಷ್ಟು ಕನ್ನಡ ಹಾಗೂ ಪರಭಾಷೆಗಳಲ್ಲೂ ನಟಿಸಿರುವ ಇವರು ಮದುವೆಯಾಗಿ ಇಬ್ಬರು ಮಕ್ಕಳಾದ ನಂತರ ಮತ್ತೊಮ್ಮೆ ಬ್ಯುಸಿಯಾಗಿದ್ದಾರೆ. ಎರಡು ಮಕ್ಕಳ ತಾಯಿಯಾದ ನಂತರ ಫ್ಯಾಷನ್ ಕಾರ್ಯಕ್ರಮಗಳಲ್ಲಿ ಹಾಗೂ ಫ್ಯಾಷನ್ ಶೂಟ್ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆಗಾಗ್ಗೆ ತಮ್ಮದೇ ಆದ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್ಮೆಂಟ್ಗಳಿಂದಲೂ ಫಾಲೋವರ್ಗಳನ್ನು ಸೆಳೆಯುತ್ತಿರುತ್ತಾರೆ.

ಇದ್ಯಾವ ಬಗೆಯ ಡ್ರೆಸ್?
ಬೆರ್ರಿ ಯೆಲ್ಲೋ ಶೇಡ್ ಅಂದರೇ ಸರಳವಾಗಿ ನಮ್ಮ ಸಿಂಪಲ್ ಭಾಷೆಯಲ್ಲಿ ಹೇಳಬೇಕೆಂದರೆ ಮೆಂತೆ ಕಲರ್ ಎನ್ನಬಹುದು. ಈ ಕಲರ್ನ ಪಫ್ ಎಂದೆನಿಸುವ ವೆಸ್ಟೆರ್ನ್ ಕಟ್ಗಳನ್ನು ಹೊಂದಿರುವಂತಹ ಫುಲ್ ಸ್ಲೀವ್ನ ಮಿನಿ ವ್ರಾಪ್ ಡ್ರೆಸ್ನ ಒಂದು ರೂಪ. ಇದು ವೆಸ್ಟರ್ನ್ ಔಟ್ಫಿಟ್ಗಳ ಸಾಲಿಗೆ ಸೇರುತ್ತದೆ. ಹಾಲಿವುಡ್ ತಾರೆಯರು ಈ ಬಗೆಯ ಔಟ್ಫಿಟ್ ಪ್ರಿಯರು. ಇದೀಗ ಪ್ರಣೀತಾ ಕೂಡ ಈ ಡ್ರೆಸ್ ಧರಿಸಿ ಫ್ಯಾಷನ್ ಶೂಟ್ ಮಾಡಿರುವುದು ಕಂಪ್ಲೀಟ್ ವೆಸ್ಟರ್ನ್ ಔಟ್ಫಿಟ್ ಫ್ಯಾಷನ್ ಶೂಟ್ ಕಾನ್ಸೆಪ್ಟ್ಗೆ ಸೇರುತ್ತದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.

ಶೀಘ್ರದಲ್ಲೇ ಬೆಳ್ಳಿತೆರೆಗೆ
2010ರಲ್ಲಿ ತೆರೆಕಂಡ ದರ್ಶನ್ ಅಭಿನಯದ ಪೊರ್ಕಿ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ಪ್ರಣೀತಾ ಸದ್ಯ ಪಂಚಭಾಷಾ ತಾರೆ ಎನಿಸಿಕೊಂಡಿದ್ದಾರೆ. ಸದ್ಯ ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದುಕೊಂಡಿರುವ ಅವರು ಶೀಘ್ರದಲ್ಲೇ ಬೆಳ್ಳಿತೆರೆಗೆ ಮರಲುವ ಸೂಚನೆ ನೀಡಿದ್ದಾರೆ.