Star Fashion 2025: ನೋಡುಗರನ್ನು ಸೆಳೆದ ನಟಿ ಸೋನು ಗೌಡ ಸಿಂಪಲ್ ದೇಸಿ ಫ್ಯಾಷನ್
Sandalwood actress Sonu Gowda: ಇವೆಂಟ್ವೊಂದರಲ್ಲಿ ಸ್ಯಾಂಡಲ್ವುಡ್ ನಟಿ ಸೋನು ಗೌಡ ಧರಿಸಿದ್ದ ಕಲಾಂಕಾರಿ ಅನಾರ್ಕಲಿ ಡ್ರೆಸ್ನ ಸಿಂಪಲ್ ಫ್ಯಾಷನ್, ಡಿಸೆಂಟ್ ಲುಕ್ ಬಯಸುವ ಹುಡುಗಿಯರನ್ನು ಸೆಳೆದಿದೆ. ಇದ್ಯಾವ ಬಗೆಯ ಸಿಂಪಲ್ ಸ್ಟೈಲಿಂಗ್? ಇಲ್ಲಿದೆ ರಿವ್ಯೂ.
ಚಿತ್ರಗಳು: ಸೋನು ಗೌಡ, ನಟಿ., ಫೋಟೋಗ್ರಾಫಿ: ಬ್ಲಾಕ್ಲೆನ್ಸ್ ಕ್ರಿಯೇಷನ್ -
ನಟಿ ಸೋನು ಗೌಡ ಅವರ ಸಿಂಪಲ್ ಲುಕ್, ಡಿಸೆಂಟ್ ಲುಕ್ ಬಯಸುವ ಯುವತಿರನ್ನು ಸೆಳೆದಿದೆ. ಹೌದು, ಇವೆಂಟ್ವೊಂದರಲ್ಲಿ ಸ್ಯಾಂಡಲ್ವುಡ್ ನಟಿ ಸೋನು ಗೌಡ ತೀರಾ ಸಿಂಪಲ್ಲಾಗಿ ಕಾಣಿಸಿಕೊಂಡಿದ್ದರು. ಅವರು ಧರಿಸಿದ್ದ ಪ್ರಿಂಟೆಡ್ ಕಲಾಂಕಾರಿ ಅನಾರ್ಕಲಿ ಸಲ್ವಾರ್ ಶೈಲಿಯ ಡ್ರೆಸ್, ದೇಸಿ ಫ್ಯಾಷನ್ನಲ್ಲಿ ಡಿಸೆಂಟ್ ಲುಕ್ ಬಯಸುವ ಯುವತಿಯರನ್ನು ಆಕರ್ಷಿಸಿದೆ.
ಸೋನು ಗೌಡ ಫ್ಯಾಷನ್
ಅಂದಹಾಗೆ, ಸೋನು ಗೌಡ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವವರು. ಆಗಾಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಟ್ರಾವೆಲ್, ಲೈಫ್ಸ್ಟೈಲ್ ಹಾಗೂ ಫ್ಯಾಷನ್ ಫೋಟೋಶೂಟ್ಗಳ ಫೋಟೊಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಸಾಕಷ್ಟು ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ. ಆಯಾ ಸಂದರ್ಭಕ್ಕೆ ತಕ್ಕಂತೆ ತಮ್ಮದೇ ಆದ ಸ್ಟೈಲ್ ಸ್ಟೇಟ್ಮೆಂಟ್ಸ್ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.
ಕಲಾಂಕಾರಿ ಡ್ರೆಸ್ನಲ್ಲಿ ಸೋನು ಗೌಡ
ಸೂಜಿದಾರ ಬ್ರ್ಯಾಂಡ್ನ ಕಲಾಂಕಾರಿ ಅನಾರ್ಕಲಿ ಶೈಲಿಯ ಸಲ್ವಾರ್ನಂತಹ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿರುವ ಸೋನು ಗೌಡ, ತಮ್ಮ ಈ ಡ್ರೆಸ್ಗೆ ವೈಟ್ ದುಪಟ್ಟಾ ಮ್ಯಾಚ್ ಮಾಡಿರುವುದು ಅವರಿಗೆ ಸಿಂಪಲ್ ದೇಸಿ ಲುಕ್ ನೀಡಿದೆ. ಅವರನ್ನು ಅತ್ಯಾಕರ್ಷಕವಾಗಿ ಬಿಂಬಿಸಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.
ಸೋನು ಗೌಡ ಸ್ಟೈಲಿಂಗ್
ಇನ್ನು, ಈ ಔಟ್ಫಿಟ್ ಜತೆ ದೇಸಿ ಲುಕ್ ನೀಡುವಂತಹ ಬಿಕಾಸ್ ಇಟ್ಸ್ ಸಿಲ್ವರ್ ಬ್ರ್ಯಾಂಡ್ನ ಜುಮ್ಕಾ ಹಾಗೂ ನೆಕ್ಲೇಸ್ ಜ್ಯುವೆಲರಿಯನ್ನು ಮ್ಯಾಚ್ ಮಾಡಿರುವುದು ಹಾಗೂ ಹಣೆಗೊಂದು ಮ್ಯಾಚಿಂಗ್ ಪುಟ್ಟ ಬಿಂದಿ ಇರಿಸಿರುವುದು ಅವರ ಈ ದೇಸಿ ಲುಕ್ ಆಕರ್ಷಕವಾಗಿ ಬಿಂಬಿಸಲು ಸಾಥ್ ನೀಡಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.
ಇವೆಂಟ್ವೊಂದರಲ್ಲಿ ಸ್ಯಾಂಡಲ್ವುಡ್ ನಟಿ ಸೋನು ಗೌಡ ಧರಿಸಿದ್ದ ಕಲಾಂಕಾರಿ ಅನಾರ್ಕಲಿ ಡ್ರೆಸ್ನ ಸಿಂಪಲ್ ಫ್ಯಾಷನ್, ಡಿಸೆಂಟ್ ಲುಕ್ ಬಯಸುವ ಹುಡುಗಿಯರನ್ನು ಸೆಳೆದಿದೆ.