Actress Rajini: ಕಿರುತೆರೆ ನಟಿ ರಜಿನಿ ಮದುವೆ ಫೋಟೋಗಳು ಫುಲ್ ವೈರಲ್!
ಸಿನಿಮಾ , ಧಾರಾವಾಹಿ, ರಿಯಾಲಿಟಿ ಶೋ ಮೂಲಕ ಅಭಿಮಾನಿಗಳ ಮನಗೆದ್ದ ನಟಿ ರಜಿನಿ ಅವರು ಸೋಶಿಯಲ್ ಮಿಡಿಯಾದಲ್ಲಿ ಕೂಡ ಬಹಳ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಜಿಮ್ ಟ್ರೈನರ್ ಅರುಣ್ ವೆಂಕಟೇಶ್ ಅವರನ್ನು ವಿವಾಹವಾಗಿದ್ದಾರೆ. ತಮ್ಮ ನಡುವೆ ಏನು ಇಲ್ಲ ನಾವು ಒಳ್ಳೆ ಸ್ನೇಹಿತರಷ್ಟೇ ಎನ್ನುತ್ತಲೇ ಅವರು ಬಹುಕಾಲದ ಸ್ನೇಹಿತನನ್ನೇ ವಿವಾಹವಾಗಿದ್ದು ಅಭಿಮಾನಿ ಗಳಿಗೆ ಅಚ್ಚರಿ ಎನಿಸಿದೆ. ಸದ್ದಿಲ್ಲದೆ ಸರಳವಾಗಿ ವಿವಾಹವಾದ ಈ ಜೋಡಿಯ ಫೋಟೊ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಇದೀಗ ಸ್ವತಃ ನಟಿ ರಜಿನಿ ಅವರೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿವಾಹದ ಫೋಟೊ ಹಂಚಿಕೊಂಡಿದ್ದು, ವಿಶೇಷ ಕ್ಯಾಪ್ಶನ್ ಅನ್ನು ಸಹ ನೀಡಿದ್ದಾರೆ.
ಅಮೃತವರ್ಷಿಣಿ ನಟಿ ರಜಿನಿ ಮದುವೆ ಫೋಟೋ -
ಅಮೃತ ವರ್ಷಿಣಿ (Amruthavarshini) ಧಾರಾವಾಹಿ ಮೂಲಕ ಪ್ರಸಿದ್ಧರಾದ ನಟಿ ರಜಿನಿ (Rajini) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಸಿನಿಮಾ, ಧಾರವಾಹಿ, ರಿಯಾಲಿಟಿ ಶೋ ಮೂಲಕ ಅಭಿಮಾನಿಗಳ ಮನಗೆದ್ದ ನಟಿ ರಜಿನಿ ಅವರು ಸೋಶಿಯಲ್ ಮಿಡಿ ಯಾದಲ್ಲಿ ಕೂಡ ಬಹಳ ಆ್ಯಕ್ಟಿವ್ ಆಗಿದ್ದಾರೆ. ಫನ್ನಿ ರೀಲ್ಸ್, ಆ್ಯಡ್ ಪ್ರಮೋಶನ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಇವರು ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಅಂತೆಯೇ ಇವರು ಇತ್ತೀಚೆಗಷ್ಟೇ ತಮ್ಮ ಜಿಮ್ ಟ್ರೈನರ್ ಅರುಣ್ ವೆಂಕಟೇಶ್ ಅವರನ್ನು ವಿವಾಹ ವಾಗಿದ್ದಾರೆ..
ತಮ್ಮ ನಡುವೆ ಏನು ಇಲ್ಲ ನಾವು ಒಳ್ಳೆ ಸ್ನೇಹಿತರಷ್ಟೇ ಎನ್ನುತ್ತಲೇ ಅವರು ಬಹುಕಾಲದ ಸ್ನೇಹಿತ ನನ್ನೇ ವಿವಾಹವಾಗಿದ್ದು, ಅಭಿಮಾನಿಗಳಿಗೆ ಅಚ್ಚರಿ ಎನಿಸಿದೆ. ಸದ್ದಿಲ್ಲದೆ ಸರಳವಾಗಿ ವಿವಾಹವಾದ ಈ ಜೋಡಿಯ ಫೋಟೊ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಇದೀಗ ಸ್ವತಃ ನಟಿ ರಜಿನಿ ಅವರೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿವಾಹದ ಫೋಟೊ ಹಂಚಿಕೊಂಡಿದ್ದು ವಿಶೇಷ ಕ್ಯಾಪ್ಶನ್ ಅನ್ನು ಸಹ ನೀಡಿದ್ದಾರೆ.
ಅವರು ಹಂಚಿಕೊಂಡ ಪೋಸ್ಟ್ನಲ್ಲಿ ಬರೆದ ವಿಶೇಷ ಬರಹವು ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ. ಏಳು ವರ್ಷದ ಗೆಳೆಯನ ಜೊತೆ “ಸಪ್ತಪದಿ “ ತುಳಿದು ಈಗ ಒಂದಾದ ಕ್ಷಣ ಜೀವನದ ಅತ್ಯಮೂಲ್ಯದ ದಿನ..ಈ ದಿನಕ್ಕೆ ತುಂಬಾ ಪ್ರೀತಿ ತೋರಿದ ಎಲ್ಲರಿಗು ಚಿರಋಣಿ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಅದರ ಜೊತೆಗೆ ಫೋಟೊಗ್ರಫಿ ಮಾಡಿದವರು, ಮೇಕಪ್ ಡಿಸೈನರ್, ಡ್ರೆಸ್ ಡಿಸೈನರ್ ಮೊದಲಾದವರ ಹೆಸರಿನ ಜೊತೆಗೆ ಟ್ಯಾಗ್ ಮಾಡಿ, ಧನ್ಯವಾದ ತಿಳಿಸಿದ್ದಾರೆ.
ವೈರಲ್ ಆದ ಫೋಟೋದಲ್ಲಿ ನಟಿ ರಜಿನಿ ಅವರ ಮೇಕಪ್, ಡಿಸೈನಿಂಗ್ ಬ್ಲೌಸ್, ಫೋಟೋಶೂಟ್ಗಳು ಅಭಿಮಾನಿಗಳ ಗಮನ ಸೆಳೆಯುವಂತಿದೆ. ಫೋಟೋ ಒಂದರಲ್ಲಿ 'ಟೂ ಸೌಲ್ಸ್ ಒನ್ ರಿಧಂ' ಎಂಬ ಕ್ಯಾಪ್ಚನ್ ಕೂಡ ಕಾಣಬಹುದು. ಬಹುತೇಕ ಫೋಟೋದಲ್ಲಿ ರಜಿನಿ ಪತಿ ವರುಣ್ ಅವರು ಶರ್ಟ್ ಲೆಸ್ ಆಗಿ ಟ್ರೆಡಿಶನಲ್ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ
ನಟಿ ರಜಿನಿ ಅವರು ಈ ಹಿಂದೆಯೇ ಸಂದರ್ಶನ ಒಂದರಲ್ಲಿ ನಾವಿಬ್ಬರು ಗಂಡ ಹೆಂಡತಿ ಅಲ್ಲ, ಫ್ರೆಂಡ್ಸ್ ಅಷ್ಟೇ..ಜೊತೆಗೆ ವಿಡಿಯೋ ಪಾರ್ಟನರ್ ಕೂಡ ಹೌದು ಎಂದಿದ್ದರು. ಬಳಿಕ ಸ್ನೇಹಿತನನ್ನು ಮದುವೆಯಾಗುವ ವಿಚಾರದ ಬಗ್ಗೆ ಮಾತನಾಡಿ, ನಮ್ಮನ್ನು ಅರ್ಥ ಮಾಡಿಕೊಳ್ಳುವ ಗೆಳೆಯನನ್ನು ಮದುವೆ ಯಾದರೆ ತಪ್ಪೇನಿಲ್ಲ ಎಂಬ ಹೇಳಿಕೆ ನೀಡಿದ್ದರು. ಇದೀಗ ಅವರು ಕೂಡ ಏಳು ವರ್ಷದ ಗೆಳೆಯನನ್ನೇ ವಿವಾಹವಾಗಿದ್ದಾರೆ..
ಅರುಣ್ ಅವರು ಜಿಮ್ ಟ್ರೇನರ್ ಆಗಿದ್ದಾರೆ. ಅವರು ಮಲ್ಲೇಶ್ವರದ ಜಿಮ್ ಒಂದರಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಇದೇ ಜಿಮ್ಗೆ ಅಮೃತಾ ಸೇರಿಕೊಂಡಿದ್ದರಂತೆ. ಆಗ ಇಬ್ಬರ ಮಧ್ಯೆ ಪರಿಚಯ ವಾಗಿ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ..
ಸುಮಾರು ಏಳು ವರ್ಷಗಳ ತನಕ ಈ ಸಂಬಂಧ ಹೀಗೆ ಮುಂದುವರಿದಿದ್ದು ಇದೀಗ ಇಬ್ಬರು ಕೂಡ ತಮ್ಮ ಕುಟುಂಬದ ಸಮ್ಮುಖದಲ್ಲಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಫೋಟೊಗಳಿಗೆ ಅಭಿಮಾನಿಗಳು ಮೆಚ್ಚಿಕೊಂಡು ಕಾಮೆಂಟ್ ಹಾಕಿ, ನವ ದಂಪತಿಗಳಿಗೆ ಶುಭ ಕೋರಿದ್ದಾರೆ.