Star Fashion 2025: ಮಿನುಗುವ ಡೆನಿಮ್ ಟ್ರೆಂಚ್ ಕೋಟ್ನಲ್ಲಿ ಜಾಕಿ ಭಗ್ನಾನಿ ವಿಂಟರ್ ಫ್ಯಾಷನ್
ಬಾಲಿವುಡ್ ನಟ ಜಾಕಿ ಭಗ್ನಾನಿ ಮಿನುಗುವ ಸಿಕ್ವಿನ್ಸ್ ಹಾಗೂ ಹ್ಯಾಂಡ್ ಮೇಡ್ ಡಿಸೈನ್ನ ಟ್ರೆಂಚ್ ಕೋಟ್ನಲ್ಲಿ ಕಾಣಿಸಿಕೊಂಡು ವಿಂಟರ್ ಮೆನ್ಸ್ ಫ್ಯಾಷನ್ಗೆ ಸೈ ಎಂದಿದ್ದಾರೆ. ಇದ್ಯಾವ ಬಗೆಯ ಔಟ್ಫಿಟ್? ವಿಶೇಷತೆಯೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಬಾಲಿವುಡ್ ನಟ ಜಾಕಿ ಭಗ್ನಾನಿ, ಫೋಟೋಗ್ರಫಿ: ಆಮೇ ಘಟ್ಕೆ -
ಮಿನುಗುವ ಡೆನಿಮ್ ಟ್ರೆಂಚ್ ಕೋಟ್ನಲ್ಲಿ ಬಾಲಿವುಡ್ ನಟ ಜಾಕಿ ಭಗ್ನಾನಿ ವಿಂಟರ್ ಮೆನ್ಸ್ ಫ್ಯಾಷನ್ನಲ್ಲಿ ಕಾಣಿಸಿಕೊಂಡಿದ್ದು, ಹೊಸ ಲೇಯರ್ ಲುಕ್ ಟ್ರೆಂಡ್ ಹುಟ್ಟುಹಾಕಿದ್ದಾರೆ.
ಹೊಸ ಲೇಯರ್ ಲುಕ್
ಹೌದು, ಬಾಲಿವುಡ್ ನಟ ಜಾಕಿ ಭಗ್ನಾನಿ ಧರಿಸಿರುವ ಈ ಟ್ರೆಂಚ್ ಕೋಟ್ ಸಿಂಪಲ್ ಲೇಯರ್ ಲುಕ್ ಅಲ್ಲ, ಬದಲಿಗೆ ಕಂಪ್ಲೀಟ್ ಡಿಫರೆಂಟ್ ಲುಕ್ ನೀಡಿರುವ ಕೋಟ್ ಇದು. ಮೆನ್ಸ್ ಫ್ಯಾಷನ್ನಲ್ಲಿ ಸದ್ಯ ಇರುವ ಎಲ್ಲಾ ಬಗೆಯ ಲೇಯರ್ ಲುಕ್ ಔಟ್ಫಿಟ್ಗಳನ್ನು ಹಿಂದಕ್ಕೆ ಹಾಕಿ, ಹೊಸ ಲೇಯರ್ ಲುಕ್ಗೆ ನಾಂದಿ ಹಾಡಿದೆ ಎನ್ನುತ್ತಾರೆ ಫ್ಯಾಷನಿಸ್ಟಾ ನಿಕಿತಾ.
ಅಂದಹಾಗೆ, ಜಾಕಿ ಬಗ್ನಾನಿ ಬಾಲಿವುಡ್ ನಟ, ರಕುಲ್ ಪ್ರೀತ್ ಸಿಂಗ್ ಯಾದವ್ ಪತಿ. ಪ್ರೊಡ್ಯೂಸರ್ ಕೂಡ. ಆಗಾಗ್ಗೆ ಇವೆಂಟ್ಗಳಲ್ಲಿ ಪತ್ನಿ ಜತೆ ಫ್ಯಾಷೆನಬಲ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ.
ಮಿನುಗುವ ಡೆನಿಮ್ ಟ್ರೆಂಚ್ ಕೋಟ್
ನಿಖಿತಾ ಮಾಯ್ಸಲ್ಕಾರ್ ಬ್ರ್ಯಾಂಡ್ನ ಡಿಸೈನರ್ ಔಟ್ಫಿಟ್ ಆಗಿರುವ ಈ ಟ್ರೆಂಚ್ ಕೋಟ್ ಮಿನುಗುಹೆಂಪ್ ಸಿಕ್ವಿನ್ಸ್, ಸ್ಟೋನ್ಸ್ ಹಾಗೂ ಬೀಡ್ಸ್ ಒಳಗೊಂಡಿದೆ. ತೆಳುವಾದ ಡೆನಿಮ್ ಫ್ಯಾಬ್ರಿಕ್ನ ಈ ಟ್ರೆಂಚ್ ಕೋಟ್ ಹ್ಯಾಂಡ್ ಎಂಬ್ರಾಯ್ಡರಿ ಹೊಂದಿದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಟ್ರೆಂಚ್ ಕೋಟ್ ಲೇಯರ್ ಲುಕ್
ಈ ಮಿನುಗುವ ಟ್ರೆಂಚ್ ಕೋಟ್ ಒಳಗೆ ತೆಳುವಾದ ನೀಲಿ ಶರ್ಟ್ ಧರಿಸಿರುವ ಜಾಕಿ ಅವರಿಗೆ ಈ ಲೇಯರ್ ಲುಕ್ ಸಖತ್ತಾಗಿ ಬಿಂಬಿಸಿದೆ. ಜತೆಗೆ ಈ ನ್ಯೂ ಇಯರ್ ಪಾರ್ಟಿ ಲುಕ್ ಬಯಸುವ ಯುವಕರಿಗೂ ಮಾದರಿಯಾಗಿದೆ ಎನ್ನುತ್ತಾರೆ ಫ್ಯಾಷನ್ ಮಾರ್ಗದರ್ಶಕರು.